- ತಾಯಿ ಮುಖ ನೋಡುವ ಮೊದಲೇ ಇಹಲೋಕ ತ್ಯಜಿಸಿದ ಮಗ
ಮಡಿಕೇರಿ: ಕೊಡಗು (Kodagu) ಜಿಲ್ಲೆ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಸಮೀಪದ ಕಂಬಿಬಾಣೆ ಕಾಲೋನಿ ಯುವಕ ಬೆಂಗಳೂರಿನಲ್ಲಿ (Bengaluru) ವಾಸವಿದ್ದ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಗಗನ್ (21) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ. ಕಂಬಿಬಾಣೆ ಕಾಲೋನಿ ನಿವಾಸಿ ಸುರೇಶ್ ಹಾಗೂ 7ನೇ ಹೊಸಕೋಟೆ ಗ್ರಾಪಂ ಸದಸ್ಯೆ ಚಂದ್ರಾವತಿ ದಂಪತಿ ಪುತ್ರ. ಇದನ್ನೂ ಓದಿ: ಮಲೆನಾಡಲ್ಲಿ ಉತ್ತಮ ಮಳೆ – ತುಂಗಭದ್ರಾ ಜಲಾಶಯಕ್ಕೆ 51,654 ಕ್ಯುಸೆಕ್ ಒಳಹರಿವು
ತಾಯಿ ಮುಖ ನೋಡುವ ಮೊದಲೇ ಇಹಲೋಕ ತ್ಯಜಿಸಿದ
ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡ್ತಿದ್ದ ಗಗನ್ ಸೋಷಿಯಲ್ ಮೀಡಿಯಾದಲ್ಲೂ ಆಗಾಗ್ಗೆ ರೀಲ್ಸ್ ಮಾಡ್ತಿದ್ದ. ಕಳೆದ ಎರಡು ದಿವಸಗಳಿಂದ ತಾಯಿಗೆ ಕರೆ ಮಾಡಿ ನನಗೆ ಹುಷಾರಿಲ್ಲ, ಬನ್ನಿ ಎಂದು ಪದೇ ಪದೇ ಕರೆದಿದ್ದ. ಹೀಗಾಗಿ ಚಂದ್ರಾವತಿರವರು ನೆನ್ನೆ ರಾತ್ರಿಯೇ ಬೆಂಗಳೂರಿಗೆ ಬಸ್ ಹತ್ತಿದ್ದರು. ಇದನ್ನೂ ಓದಿ: ವಯನಾಡಲ್ಲಿ ಮಳೆಯಬ್ಬರ – ಕಬಿನಿ ಜಲಾಶಯಕ್ಕೆ 22 ಸಾವಿರ ಕ್ಯುಸೆಕ್ ಒಳಹರಿವು
ತಾನು ಕೊಡಗಿನಿಂದ ಬರುತ್ತಿರುವ ವಿಷಯವನ್ನು ಕೂಡ ಮಗನಿಗೆ ತಿಳಿಸಿದ್ದರು. ಆದ್ರೆ ಚಂದ್ರಾವತಿ ಅವರು ಬೆಂಗಳೂರು ತಲುಪುವ ಮೊದಲೇ ಪ್ರೀತಿಯ ಪುತ್ರ ಗಗನ್ ನೇಣು ಬಿಗಿದು ಇಹಲೋಕ ತ್ಯಜಿಸಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಇದನ್ನೂ ಓದಿ: ಹನಿಮೂನ್ ಹಂತಕಿಯ ಮತ್ತೊಂದು ರಹಸ್ಯ ಬಯಲು – 3 ವಾರಗಳಲ್ಲಿ ಆ ಸಂಖ್ಯೆಗೆ 234 ಬಾರಿ ಫೋನ್ ಕಾಲ್ ಮಾಡಿದ್ದ ಸೋನಂ