ಬೆಂಗಳೂರು: ಕೊಡಗು ನೆರೆಯಿಂದ ಸಂತ್ರಸ್ತರಾದವರಿಗೆ ರಾಜ್ಯದ ಜನ ಸಹಾಯ ಮಾಡುತ್ತಿದ್ದು, ನಿಜವಾಗಿ ಸಂತ್ರಸ್ತರಿಗೆ ಈಗ ಏನು ಅಗತ್ಯವಿದೆ ಎನ್ನುವುದು ತಿಳಿಯುತ್ತಿಲ್ಲ. ಈ ಕಾರಣಕ್ಕಾಗಿ ಕರ್ನಾಟಕ ಸರ್ಕಾರ ಸಂತ್ರಸ್ತರಿಗೆ ಸಹಾಯ ಮಾಡಲು ಈಗ ವೆಬ್‍ಸೈಟ್ ಆರಂಭಿಸಿದೆ.
Advertisement
www.www.parihara.karnataka.gov.in ಹೆಸರಿನಲ್ಲಿ ವೆಬ್‍ಸೈಟ್ ಆರಂಭಿಸಿದೆ. ವೆಬ್‍ಸೈಟ್ ಡ್ಯಾಶ್‍ಬೋರ್ಡ್ ನಲ್ಲಿ ಸಹಾಯಕ್ಕಾಗಿ ನೋಂದಾಯಿಸಿ, ಸಹಾಯಕ್ಕಾಗಿ ನೊಂದಾಯಿಸಿದ ವಿನಂತಿಗಳು ಮತ್ತು ಗೂಗಲ್ ಪರ್ಸನ್ ಫೈಂಡರ್‍ಗಳಿದ್ದು ಇವುಗಳ ಮೂಲಕ ಸಂಪರ್ಕಿಸಬಹುದಾಗಿದೆ.
Advertisement
ಸಹಾಯಕ್ಕಾಗಿ ನೊಂದಾಯಿಸಿ ವಿಭಾಗವನ್ನು ಕ್ಲಿಕ್ ಮಾಡಿ ಜಿಲ್ಲೆ, ತಾಲೂಕು, ಹೊಬಳಿ, ಗ್ರಾಮ, ಮನವಿದಾರನ ವಿಳಾಸಕ್ಕೆ, ಮೊಬೈಲ್ ನಂಬರ್ ತುಂಬಿ ಬಳಿಕ ಬೇಕಾದ ಅವಶ್ಯಕತೆಗಳು ಆಯ್ಕೆ ಮಾಡಬೇಕಾಗುತ್ತದೆ. ನೊಂದಾಯಿಸಿದ ವಿನಂತಿಗಳ ವಿಭಾಗವನ್ನು ಓಪನ್ ಮಾಡಿದ್ದಲ್ಲಿ ಯಾರ ಯಾವ ಸಹಾಯದ ಅಗತ್ಯವಿದೆ ಎನ್ನುವ ಮಾಹಿತಿಯನ್ನು ನೋಡಬಹುದಾಗಿದೆ. ಗೂಗಲ್ ಪರ್ಸನ್ ಫೈಂಡರ್ ನಲ್ಲಿ ಬೇಕಾಗಿರುವ ವ್ಯಕ್ತಿಗೆ ಸಂಬಂಧಿಸಿದ ವಿವರವನ್ನು ತುಂಬಿದರೆ ಉಳಿದ ವ್ಯಕ್ತಿಗಳಿಗೆ ಹುಡುಕಾಟ ನಡೆಸಲು ಸಹಾಯವಾಗುತ್ತದೆ.
Advertisement
Advertisement
ಇಲ್ಲಿ ದಾಖಲಾದ ಮಾಹಿತಿಗಳು ಅಧಿಕಾರಿಗಳಿಗೆ, ಸಾರ್ವಜನಿಕರಿಗೆ ಲಭ್ಯವಾಗಲಿದ್ದು ಸಹಾಯ ಮಾಡಲು ಸಹಕಾರಿಯಾಗಲಿದೆ.
ವೆಬ್‍ಸೈಟಿಗೆ ಭೇಟಿ ನೀಡಲು ಕ್ಲಿಕ್ ಮಾಡಿ: www.www.parihara.karnataka.gov.in
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv