– ಮಲೆನಾಡು ಭಾಗದ ಶಾಲೆಗಳಿಗೆ ಶನಿವಾರ ರಜೆ
ಮಡಿಕೇರಿ: ಕೊಡಗು ಜಿಲ್ಲೆಗೆ ಹೊಂದಿಕೊಂಡಿರುವ ನೆರೆಯ ಕೇರಳದ ವಯನಾಡು ಜಿಲ್ಲೆಗೆ ಸಂಪರ್ಕಿಸುವ ತಮರಶೆರಿ ಘಾಟ್ ಬಳಿ ಭೂಕುಸಿತ ಸಂಭವಿಸಿದೆ. ಈ ಹಿನ್ನೆಲೆ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು, ವಯನಾಡ್‌ಗೆ (Wayanad) ಬದಲಿ ಮಾರ್ಗ ಸೂಚಿಸಿದೆ.
ಅದರಂತೆ ಗಡಿಭಾಗವಾದ ಕುಟ್ಟ ಮೂಲಕ ಗುಡಲೂರು ಮಾರ್ಗವಾಗಿ ಸಂಚರಿಸುವ ವಾಹನಗಳನ್ನು ಬದಲೀ ಮಾರ್ಗವಾದ ಗೋಣಿಕೊಪ್ಪ ಕೂಟುಪುಳ – ಇರಿಟ್ಟಿ (ಕಣ್ಣೂರು ಜಿಲ್ಲೆ) ಮಾರ್ಗದ ಮೂಲಕ ಸಂಚರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾಎರೆ.
ಆದ್ದರಿಂದ, ಗುಡಲೂರು ರಸ್ತೆಯಲ್ಲಿ ವಾಹನ ಸಂಚಾರ ಸುಗಮವಾಗುವವರೆಗೆ ಜಿಲ್ಲೆಯ ಕುಟ್ಟ ಮಾರ್ಗವಾಗಿ ಸಂಚರಿಸುವ ಸಾರ್ವಜನಿಕರು ಬದಲೀ ರಸ್ತೆ ಮಾಕುಟ್ಟ ಮುಖಾಂತರ ತಮರಶೆರಿ ಘಾಟ್, ಗುಡಲೂರು ಮಾರ್ಗವನ್ನು ಬಳಸಲು ಕೊಡಗು ಜಿಲ್ಲಾಡಳಿತ ಸಲಹೆ ನೀಡಿದೆ.
ಮಲೆನಾಡು ಭಾಗದ ಶಾಲೆಗಳಿಗೆ ರಜೆ ಘೋಷಣೆ
ಇನ್ನೂ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಮುಂದುವರಿದ ಹಿನ್ನೆಲೆ ಆಗಸ್ಟ್ 30ರ ಶನಿವಾರದಂದು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಕೊಪ್ಪ, ಶೃಂಗೇರಿ, ಮೂಡಿಗೆರೆ, ಎನ್ ಆರ್.ಪುರ, ಕಳಸ ತಾಲೂಕು, ಚಿಕ್ಕಮಗಳೂರು ತಾಲೂಕಿನ ಕಸಬಾ, ಅಂಬಳೆ, ಆಲ್ದೂರು, ವಸ್ತಾರೆ, ಖಾಂಡ್ಯ, ಆವತಿ, ಜಾಗರ ಹೋಬಳಿಗಳು, ತರೀಕೆರೆ ತಾಲೂಕಿನ ಲಿಂಗದಹಳ್ಳಿ-ಲಕ್ಕವಳ್ಳಿ ಹೋಬಳಿಯ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅದೇಶ ಹೊರಡಿಸಿದ್ದಾರೆ.