– ಗೋವಾ, ಪಾಂಡಿಚೇರಿ, ಲಕ್ಷದ್ವೀಪಕ್ಕೂ ಹೋಗಿತ್ತು ಶ್ವಾನ
ಮಡಿಕೇರಿ: ಅಪರಾಧ ಪತ್ತೆ ಕಾರ್ಯಾಚರಣೆಯಲ್ಲಿ ಪೊಲೀಸ್ ಇಲಾಖೆಯೊಂದಿಗೆ 9 ವರ್ಷ ಸೇವೆ ಸಲ್ಲಿಸಿದ್ದ ಗಂಡು ಶ್ವಾನ (Police Dog) ಪೃಥ್ವಿ ಹೃದಯಾಘಾತದಿಂದ ಸಾವನ್ನಪ್ಪಿದೆ.
ತನ್ನ ಕರ್ತವ್ಯನಿಷ್ಠೆಗೆ ಒಟ್ಟು 5 ಪದಕ ಪಡೆದಿದ್ದ ಪೃಥ್ವಿ, ಶ್ವಾನದಳ ಸಿಬ್ಬಂದಿ ಶಿವ ಎಂ.ಆರ್ ಗರಡಿಯಲ್ಲಿ ಪಳಗಿತ್ತು. ಪೃಥ್ವಿ ಅಗಲಿಕೆಗೆ ಪೊಲೀಸ್ ಸಿಬ್ಬಂದಿ ಕಂಬನಿ ಮಿಡಿದಿದ್ದು, ಮಡಿಕೇರಿ ಡಿಆರ್ ಪೊಲೀಸ್ ಆವರಣದಲ್ಲಿ ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡಲಾಗಿದೆ. ಇದನ್ನೂ ಓದಿ: ಮತ್ತೆ ಬೆಳ್ಳಿಪರದೆಯಲ್ಲಿ ಮಿಂಚಲು ಸಜ್ಜಾದ ದೀಪಿಕಾ ಪಡುಕೋಣೆ
ಕೊಡಗಿನ (Kodagu) ಅಪರಾಧ ಪ್ರಕರಣದಲ್ಲಿ ಮಿಂಚಿನ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡು ಹಲವಾರು ಪ್ರಕರಣಗಳನ್ನು ಭೇದಿಸಿ 9 ವರ್ಷಗಳ ನಿರಂತರ ಸೇವೆಯನ್ನು ಮಾಡಿ ಹಲವು ಪದಕಗಳನ್ನು ಮುಡಿಗೇರಿಸಿಕೊಂಡ ಪೃಥ್ವಿ ಇನ್ನು ನೆನಪು ಮಾತ್ರ. 2017ರಲ್ಲಿ ಕೊಡಗು ಜಿಲ್ಲಾ ಶ್ವಾನದಳ ಘಟಕಕ್ಕೆ ಸೇರ್ಪಡೆಗೊಂಡ ಪೃಥ್ವಿ ಕೊಡಗು ಜಿಲ್ಲಾ ಶ್ವಾನದಳ ಘಟಕದ ಹ್ಯಾಂಡ್ಲರ್ ಶಿವ ಎಂ.ಆರ್ ಅವರಿಂದ ತರಬೇತಿ ಪಡೆದು ಅಪರಾಧ ಕೃತ್ಯ ನಡೆಸಿದವರನ್ನು ಪತ್ತೆ ಹಚ್ಚುವ ಮೂಲಕ ಹಲವಾರು ಪ್ರಕರಣಗಳನ್ನು ಭೇದಿಸಲು ಪೊಲೀಸ್ ಇಲಾಖೆಗೆ (Police Department) ಸಹಕಾರಿಯಾಗಿತ್ತು. ಇದನ್ನೂ ಓದಿ: ಚಿಕ್ಕಬಳ್ಳಾಪುರ ಪೊಲೀಸರ ಭರ್ಜರಿ ಬೇಟೆ – ಕೋಟಿ ಕೋಟಿ ಮೌಲ್ಯದ 5,140 ಮೊಬೈಲ್ ಕದ್ದಿದ್ದ ಖದೀಮರ ಬಂಧನ
ಪೃಥ್ವಿ ಒಟ್ಟು ನೂರಾರು ಅಪರಾಧ ಪ್ರಕರಣ ಪತ್ತೆ ಕಾರ್ಯದಲ್ಲಿ ಭಾಗಿಯಾಗಿತ್ತು. ಚೆಕ್ ಪೋಸ್ಟ್ ಸ್ಫೋಟಕ ಪತ್ತೆ,ವಿವಿಐಪಿ, ವಿಐಪಿ ಭೇಟಿ ಸಂದರ್ಭ ಸ್ಫೋಟಕ ವಸ್ತುಗಳ ಪತ್ತೆ ಮತ್ತು ರಾಷ್ಟ್ರಪತಿಗಳು ಕೊಡಗಿಗೆ ಭೇಟಿ ನೀಡಿದ ಸಂದರ್ಭ ಭದ್ರತಾ ಕರ್ತವ್ಯ ಮಾಡಿತ್ತು. ಕೇಂದ್ರಾಡಳಿತ ಪ್ರದೇಶಗಳಾದ ಗೋವಾ, ಪಾಂಡಿಚೇರಿ, ಲಕ್ಷದ್ವೀಪದಲ್ಲಿ ಪ್ರಧಾನ ಮಂತ್ರಿಗಳ ಭೇಟಿ ಸಂದರ್ಭ
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಪೃಥ್ವಿಯ ಕರ್ತವ್ಯದ ಅವಧಿಯಲ್ಲಿನ ಅತ್ಯುತ್ತಮ ಸೇವೆಯನ್ನು ಎಲ್ಲಾ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಪರವಾಗಿ ಶಾಂತಿಯನ್ನು ಕೋರಿ ಗೌರವ ವಂದನೆಯನ್ನು ಸಲ್ಲಿಸಿದರು. ಪೃಥ್ವಿ ಇನ್ನು ಕೊಡಗು ಜಿಲ್ಲಾ ಶ್ವಾನ ಘಟಕದಲ್ಲಿ ನೆನಪು ಮಾತ್ರ. ಆದರೆ ಪೃಥ್ವಿಯ ಸೇವೆ ಮಾತ್ರ ಅವಿಸ್ಮರಣೀಯ.