ಮಡಿಕೇರಿ: 150 ಗಂಟೆಗಳಿಗೂ ಅಧಿಕ ಕಾಲ ಯುದ್ಧ ವಿಮಾನದ ಹಾರಾಟ ನಡೆಸಿ ಸಾಧನೆ ಮಾಡಿ ವಾಯುಸೇನೆಯಲ್ಲಿ ಫ್ಲೈಯಿಂಗ್ ಆಫೀಸರ್ (Flying Officer) ಆಗಿ ಕೊಡಗಿನ ಸಚಿನ್ ಬೇಂಬೊರೆ ನೇಮಕಗೊಂಡಿದ್ದಾರೆ.
ಕೊಡಗಿನ (Kodagu) ಕುಶಾಲನಗರದ ರಥ ಬೀದಿಯ ಉದ್ಯಮಿ ಪ್ರಸನ್ನ ಕುಮಾರ್ ಬೇಂಬೊರೆ ಮತ್ತು ವಾಣಿ ದಂಪತಿಯ ಪುತ್ರ ಸಚಿನ್ ಬೇಂಬೊರೆ ಇದೀಗ ಫ್ಲೈಯಿಂಗ್ ಆಫೀಸರ್ ರ‍್ಯಾಂಕ್ ಪಡೆದು ರಾಷ್ಟ್ರಪತಿಗಳಿಂದ ಗೌರವ ಸ್ವೀಕರಿಸಿದ್ದಾರೆ. ಇದನ್ನೂ ಓದಿ: ವಾಸ್ತು ಸರಿಯಿಲ್ಲ ಅಂತ ಮುಚ್ಚಿದ್ದ ಬಾಗಿಲು ತೆರೆಸಿ ಎಂಟ್ರಿ ಕೊಟ್ಟ ಸಿಎಂ
Advertisement
Advertisement
ಯುಪಿಎಸ್ಸಿ ಕಂಬೈನ್ಸ್ ಡಿಫೆನ್ಸ್ ಸರ್ವಿಸ್‌ನಲ್ಲಿ ಪರೀಕ್ಷೆಗೆ ದೇಶದ ನಾಲ್ಕು ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಕೇವಲ ಒಂಬತ್ತು ಜನ ಆಯ್ಕೆಯಾಗಿದ್ದು, ಅವರ ಪೈಕಿ ಸಚಿನ್ ಕೂಡ ಒಬ್ಬರು. ತರಬೇತಿಯಲ್ಲಿ ಕ್ರೀಡೆ, ಫ್ಲೈಯಿಂಗ್, ಯುದ್ಧ ಸಂದರ್ಭದಲ್ಲಿ ತಯಾರಿ, ಹೆಲಿಕಾಪ್ಟರ್ ಮತ್ತು ಫೈಟರ್ ಜೆಟ್‌ಗಳಲ್ಲಿ ತರಬೇತಿ ಪಡೆದಿದ್ದು, ಇದೀಗ ರಜೆಯಲ್ಲಿ ಕುಶಾಲನಗರಕ್ಕೆ ಬಂದಿದ್ದಾರೆ.
Advertisement
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಅತ್ಯಂತ ಕಠಿಣ ಪರಿಶ್ರಮ ಮತ್ತು ತರಬೇತಿಯಿಂದ ಈ ಮಟ್ಟಕ್ಕೆ ಹೋಗಲು ಸಾಧ್ಯವಾಗಿದೆ. ಸಾಧನೆಗೆ ನನ್ನ ಶಿಕ್ಷಕರು, ತರಬೇತಿ ನೀಡಿದ ತರಬೇತಿದಾರರು ಹಾಗೂ ಕುಟುಂಬದ ಸಹಕಾರ ಪ್ರಮುಖವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ: ಕಟೀಲ್ ಸ್ಪಷ್ಟನೆ
Advertisement
ತಾಯಿನಾಡನ್ನು ಕಾಪಾಡುವ ಅವಕಾಶ ತನಗೆ ಒದಗಿರುವುದಾಗಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಸಚಿನ್ ಹೈದರಾಬಾದ್ ಸಮೀಪದ ದುಂಡಿಗಲ್ ವಾಯುಸೇನಾ ಅಕಾಡೆಮಿಯಿಂದ ಫ್ಲೈಯಿಂಗ್ ಆಫೀಸರ್ ತರಬೇತಿ ಪಡೆದಿದ್ದರು.