– 12 ಕಿ.ಮೀ ದೂರದವರೆಗೂ ತಾಯಿಯನ್ನು ಹೊತ್ತುಕೊಂಡು ಸಾಗಿದ!
ಬೆಂಗಳೂರು: ಭಾರೀ ಮಳೆಯಿಂದಾಗಿ ತತ್ತರಿಸಿ ಹೋದ ಕೊಡಗಿನ ಜಲಪ್ರಳಯದಿಂದ ವ್ಯಕ್ತಿಯೊಬ್ಬರೂ ತಮ್ಮ ಕುಟುಂಬದೊಂದಿಗೆ 12 ಕಿ.ಮೀ ದೂರದವೆರೆಗೂ ತಾಯಿಯನ್ನು ಹೆಗಲ ಮೇಲೆ ಹೊತ್ತು ತಂದು ಇದೀಗ ಸಾವನ್ನೇ ಗೆದ್ದು ಬಂದಿದ್ದಾರೆ.
ಮಡಿಕೇರಿ ತಾಲೂಕು ಮಕ್ಕಂದೂರು ಮೇಘತಾಳ ಗ್ರಾಮದವರಾದ ಮಡ್ಲಂಡ ತಮ್ಮಯ್ಯ, ತಾಯಿ 90 ವರ್ಷದ ಮುತ್ತವ್ವ ಹಾಗೂ ಪತ್ನಿ ವಿನೀತ ಜಲ ಕಂಟಕದಿಂದ ಬದುಕಿ ಬಂದಿದ್ದಾರೆ.
ನಡೆದಿದ್ದು ಏನು?
ಭಾರೀ ಮಳೆಯಿಂದಾಗಿ ತಮ್ಮಯ್ಯ ಅವರ ಮನೆ ಹಾಗೂ 15 ಎಕರೆ ಜಮೀನು ನಾಶವಾಗಿದ್ದು, ಇದನ್ನು ಕಣ್ಣಾರೆ ಕಂಡ ತಮ್ಮಯ್ಯ ಹಾಗೂ ಪತ್ನಿ ವಿನೀತ, ತಾಯಿ ಮುತ್ತವ್ವ ಕುಟುಂಬಸ್ಥರು ಪ್ರಾಣ ಉಳಿಸಿಕೊಳ್ಳಲು ಮನೆಯಿಂದ ಓಡಲು ಪ್ರಾರಂಭಿಸಿದ್ದರು. ಈ ವೇಳೆ ತಮ್ಮಯ್ಯ ಹಾಗೂ ವಿನೀತ ಹಿರಿಯ ವಯಸ್ಸಿನ ಮುತ್ತವ್ವರನ್ನು ರಕ್ಷಿಸಲು ಓಡಿ ಹೋಗಿ ಕಾಲೂರಿನಿಂದ 15 ಕಿ.ಮೀ ನಡೆದುಕೊಂಡು ಹೆಬ್ಬೆಟುಗೆರೆ ಎಂಬ ಸ್ಥಳಕ್ಕೆ ಬಂದು ತಲುಪಿದ್ದಾರೆ. ಇಲ್ಲಿಯೂ ಭಾರೀ ಪ್ರಮಾಣದಲ್ಲೇ ಕುಸಿತ ಸಂಭವಿಸಿದ್ದು, ಊರಿನವರ ನೆರವಿನಿಂದ ವಿನೀತ ಅವರು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.
ತಮ್ಮಯ್ಯವರು ತಾಯಿ ಮುತ್ತವ್ವ ಅವರೊಂದಿಗೆ ತಮ್ಮ ಮನೆಯಿಂದ ಬೆಟ್ಟವನ್ನು ಹತ್ತಿ ಒಂದು ದಿನ ಬೆಟ್ಟದ ತುದಿಯಲ್ಲೇ 150 ಜನರೊಂದಿಗೆ ತಂಗಿದ್ದರು. ಆದರೆ ಅಲ್ಲಿಯೂ ಗುಡ್ಡ ಕುಸಿತವಾದ ಕಾರಣ ಎಲ್ಲರೂ ಬೆಟ್ಟದಿಂದ ಹೊರಡಲು ನಿರ್ಧರಿಸಿ, ಹೆದ್ದಾರಿಗೆ ಬಂದಿದ್ದಾರೆ. ಈ ವೇಳೆ ಹೆಲಿಕಾಪ್ಟರ್ ನಲ್ಲಿ ರಕ್ಷಣಾ ಕಾರ್ಯ ನಡೆಸಿದರೂ ಬೆಟ್ಟದ ಮೇಲೆ ಕಾರ್ಯಾಚರಣೆ ನಡೆಸಲು ಸಾಧ್ಯವಾಗದೆ ಸಮಸ್ಯೆ ಎದುರಾಗಿತ್ತು.
ಅಲ್ಲಿಂದ ರಸ್ತೆಗಳು ಅಸ್ತವ್ಯಸ್ತವಾಗಿದ್ದರಿಂದ ತಮ್ಮಯ್ಯ, ತಾಯಿ ಮುತ್ತವ್ವ ರನ್ನು ಸುಮಾರು 12 ಕಿ.ಮೀ ದೂರದವರೆಗೂ ಹೆಗಲ ಮೇಲೆ ಹೊತ್ತುಕೊಂಡು ಬಂದಿದ್ದಾರೆ. ಮಗನ ಕಷ್ಟವನ್ನು ಕಂಡ ಮತ್ತವ್ವ ತನ್ನನ್ನು ಬಿಟ್ಟು ಬೀಡು ನೀನಾದರೂ ಹೋಗಿ ಬದುಕಿಕೋ ಎಂದು ಹೇಳಿದರು ತಮ್ಮಯ್ಯ ಅವರು ಮಳೆಯಲ್ಲೇ ದಾರಿ ಮಾಡಿಕೊಂಡು ಅಮ್ಮನನ್ನು ರಕ್ಷಿಸಿದ್ದಾರೆ.
ಈ ವೇಳೆ ಸುಭಾಸ್ ಎಂಬವರು ತಮ್ಮಯ್ಯ ಅವರ ಸ್ಥಿತಿ ಕಂಡು ತಾಯಿ ಮುತ್ತವ್ವರನ್ನು ಮೈತ್ರಿಯಾ ಹಾಲ್ ಎಂಬ ಪುರ್ನವಸತಿ ಕೇಂದ್ರಕ್ಕೆ ಕರೆದುಕೊಂಡು ಹೋಗುವ ಬದಲು ತಮ್ಮ ಮನೆಗೆ ಕರೆದುಕೊಂಡು ಹೋಗಿ ಮುತ್ತವ್ವ ಅವರಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಗ್ರಾಮಸ್ಥರ ಸಹಾಯದಿಂದ ಬಹುಬೇಗ ಬಂದ ಪತ್ನಿ ವಿನೀತ ಪುರ್ನವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.
ತಮ್ಮಯ್ಯ ಅವರು ಮಡಿಕೇರಿಗೆ ಬಂದ ಬಳಿಕ ಬೇರೆ ಅವರಿಂದ ಫೋನ್ ಪಡೆದು ಬೆಂಗಳೂರಿನಲ್ಲಿದ್ದ ಮತ್ತವ್ವ ಅವರ ತಮ್ಮ ಚಂಗಪ್ಪ ಚಂಡಿರಕರೂರುರಿಗೆ ಕರೆಮಾಡಿ ತಾವಿರುವ ಪರಿಸ್ಥಿತಿಯನ್ನು ಹೇಳಿದ್ದು ಬಳಿಕ ಬೆಂಗಳೂರಿಗೆ ವಾಹನ ವ್ಯವಸ್ಥೆ ಪಡೆದು ಚಂಗಪ್ಪ ಮನೆ ತಲುಪಿದ್ದಾರೆ.
ಇದೇ ರೀತಿ ಮತ್ತೊಬ್ಬರೂ ಶಾರದ ಎನ್ನುವವರು ಮಡಿಕೇರಿಯ ಇಂದ್ರನಗರದ ನಿವಾಸಿಯಾಗಿದ್ದು, ಪ್ರವಾಹದಿಂದ ಬದುಕಿ ಬಂದಿದ್ದು ಪುರ್ನವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.
https://www.youtube.com/watch?v=eGDVxLWkqao
https://www.youtube.com/watch?v=QNRET4_ZoP4
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv