ಮಡಿಕೇರಿ: ಕೋವಿಡ್ ಮಾಹಾಮಾರಿಯಿಂದ ಅ ಮಗುವಿನ ತಾಯಿ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಮೃತಪಟ್ಟ ಸಂದರ್ಭದಲ್ಲಿ ತಾಯಿ ಬಳಕೆ ಮಾಡುತ್ತಿದ್ದ ಮೊಬೈಲ್ ಅಸ್ಪತ್ರೆಯಲ್ಲೇ ಕಣ್ಮರೆಯಾಗಿತ್ತು. ಮೊಬೈಲ್ ನಲ್ಲಿ ತಾಯಿಯ ನೆನಪುಗಳ ಫೋಟೋಗಳಿವೆ ಎಂದು ಪುಟ್ಟ ಪೋರಿ ಮೂರು ತಿಂಗಳ ಹಿಂದೆ ಜಿಲ್ಲಾಧಿಕಾರಿ, ಶಾಸಕರಿಗೆ ಅಸ್ಪತ್ರೆಯ ಸಿಬ್ಬಂದಿಗೆ ಕರಳು ಹಿಂಡುವಂತೆ ಪತ್ರ ಬರೆದು ಮನವಿ ಮಾಡಿದ್ದಳು. ಈ ಸುದ್ದಿಯನ್ನು ಪಬ್ಲಿಕ್ ಟಿವಿ ಪ್ರಸಾರ ಮಾಡಿತ್ತು. ಇದೀಗ ಮೂರು ತಿಂಗಳ ಬಳಿಕ ಮತ್ತೆ ತಾಯಿಯ ನೆನಪುಗಳು ಇರುವ ಮೊಬೈಲ್ ಬಾಲಕಿ ಕೈ ಸೇರಿದೆ.
Advertisement
ನನಗೆ ನಮ್ಮ ಅಮ್ಮನ ಮೊಬೈಲ್ ಕೊಡಿ ಪ್ಲೀಸ್. ಅಮ್ಮನ ನೆನಪುಗಳು ಅ ಮೊಬೈಲ್ ನಲ್ಲಿದೆ. ದಯವಿಟ್ಟು ಯಾರದ್ರೂ ತೆಗೆದುಕೊಂಡಿದ್ರೆ ಅಥವಾ ಸಿಕ್ಕರೆ ಪ್ಲೀಸ್ ಕೊಡಿ ಎಂದು ಹೃತಿಕ್ಷಾ ಮನವಿ ಮಾಡಿಕೊಂಡಿದ್ದಳು. ಹೃತಿಕ್ಷಾ ಕೊಡಗು ಜಿಲ್ಲೆಯ ಕುಶಾಲನಗರ ಸಮೀಪ ಇರುವ ಗುಮ್ಮನಕೋಲಿ ಗ್ರಾಮದವಳು. ಇದೀಗ ಹೃತಿಕ್ಷಾಗೆ ತಾಯಿ ನೆನಪು ಇರುವ ಮೊಬೈಲ್ ಸಿಕ್ಕಿದ್ದರಿಂದ ಖುಷಿಯಾಗಿದ್ದಾಳೆ.
Advertisement
Advertisement
ಘಟನೆ ವಿವರ
ಮೇ 6 ರಂದು ಹೃತಿಕ್ಷಾ, ತಾಯಿ ಪ್ರಭಾ ಮತ್ತು ತಂದೆ ನವೀನ್ ಮೂವರಿಗೂ ಕೋವಿಡ್ ಸೋಂಕು ತಗುಲಿತ್ತು. ಹೃತಿಕ್ಷಾ ಮತ್ತು ನವೀನ್ ಇಬ್ಬರನ್ನು ಹೋಂ ಕ್ವಾರಂಟೈನ್ ಮಾಡಿದರೆ, ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ತಾಯಿ ಪ್ರಭಾ ಅವರನ್ನು ಮಡಿಕೇರಿ ಕೊವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪ್ರಭಾ ಅವರಿಗೆ ಚಿಕಿತ್ಸೆ ಫಲಿಸದೆ ಮೇ 16ರಂದಯ ಮೃತಪಟ್ಟಿದ್ದರು. ಈ ವೇಳೆ ಆಸ್ಪತ್ರೆಯ ಸಿಬ್ಬಂದಿ ತನ್ನ ತಾಯಿಯ ಮೃತದೇಹವನ್ನು ಹಿಂದಿರುಗಿಸಿದರು. ಆದರೆ ಅವರ ಬಳಿಯಲ್ಲಿದ್ದ ಫೋನ್ ಹಿಂದಿರುಗಿಸಿರುವುದಿಲ್ಲ. ಆ ಫೋನ್ ನಲ್ಲಿ ನನ್ನ ತಾಯಿಯ ನೆನೆಪುಗಳಿವೆ. ತನ್ನ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿರುವ ನನಗೆ ಆ ಫೋನ್ ಅನ್ನು ಹಿಂದಿರುಗಿಸಿ. ನನ್ನ ತಾಯಿಯ ನೆನಪುಗಳನ್ನು ಉಳಿಸಿ. ಇಂತಿ ತಾಯಿಯನ್ನು ಕಳೆದುಕೊಂಡ ನತದೃಷ್ಟೆ ಎಂದು ಬಾಲಕಿ ಹೃತಿಕ್ಷಾ ಕೊಡಗು ಜಿಲ್ಲಾಧಿಕಾರಿ, ಶಾಸಕರು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಓದುಗರ ಕರುಳು ಹಿಂಡುವಂತೆ ಪತ್ರ ಬರೆದಿದ್ದಳು. ಇದನ್ನೂ ಓದಿ: ಕೇಂದ್ರ ಸಚಿವ ನಾರಾಯಣಸ್ವಾಮಿ ಕಾರ್ಯಕ್ರಮಲ್ಲಿ ಮೂವರ ಜೇಬಿಗೆ ಕತ್ತರಿ, 20 ಸಾವಿರ ಕಳ್ಳತನ
Advertisement
ಫೋನ್ ಸಿಕ್ಕಿದ್ದು ಹೇಗೆ?: ಅಂದು ದೂರು ದಾಖಲು ಮಾಡಿಕೊಂಡ ಮಡಿಕೇರಿ ನಗರದ ಪೊಲೀಸರು ಅಸ್ಪತ್ರೆಯಲ್ಲಿ ಇರುವ ಸಿಬ್ಬಂದಿ ವಿಚಾರಣೆ ನಡೆಸಿದ್ದರು. ಅದರೆ ಯಾವುದೇ ಪ್ರಯೋಜನ ಅಗಿರಲ್ಲಿಲ್ಲ. ನಿನ್ನೆ ಸಂಜೆ ಅಸ್ಪತ್ರೆಯ ಸ್ಟೋರ್ ರೂಮ್ ಕ್ಲೀನ್ ಮಾಡುವ ವೇಳೆ ಸಿಬ್ಬಂದಿಗಳಿಗೆ ಕಾಣೆಯಾಗಿದ್ದ ಫೋನ್ ಸಿಕ್ಕಿದೆ. ಬಳಿಕ ನಗರ ಪೊಲೀಸರಿಗೆ ಅಸ್ಪತ್ರೆಯ ಡೀನ್ ನಗರ ಪೊಲೀಸರಿಗೆ ಫೋನ್ ಹಸ್ತಾಂತರ ಮಾಡಿದ್ದಾರೆ. ಇಂದು ಬಾಲಕಿಯನ್ನು ಠಾಣೆಗೆ ಕರೆಸಿ ಫೋನ್ ಸಿಕ್ಕಿದೆ ಎಂದು ತಿಳಿಸಿದ್ದಾರೆ. ಬಳಿಕ ಪೊಲೀಸ್ ಠಾಣೆಗೆ ಬಂದ ಬಾಲಕಿ ಹಾಗೂ ಅಕೆ ಸೋದರಮಾವನಿಗೆ ತಿಳಿಸಿದ್ದಾರೆ. ಇದರಿಂದಾಗಿ ತಾಯಿ ಹಳೆಯ ನೆನಪುಗಳು ಮತ್ತೆ ಸಿಕ್ಕಿದೆ ಎಂದು ಬಾಲಕಿ ಖುಷಿಪಟ್ಟಿದ್ದಾಳೆ. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರ – ಸಿಬಿಐ ತನಿಖೆಗೆ ಆದೇಶ
ಒಂದಿಷ್ಟು ಅನುಮಾನ: ಮೂರು ತಿಂಗಳ ಬಳಿಕ ಮತ್ತೆ ಕಣ್ಮರೆಯಾದ ಫೋನ್ ಬಾಲಕಿಯ ಕೈ ಸೇರಿದೆ. ಇತ್ತ ಅಸ್ಪತ್ರೆಯ ಸಿಬ್ಬಂದಿಗಳೇ ಯಾರೋ ಫೋನ್ ಕದ್ದು ಇದೀಗ ಯಾರಿಗೂ ಗೊತ್ತಿಲ್ಲದ ಹಾಗೆ ಫೋನ್ ಅಡಳಿತ ಮಂಡಳಿಗೆ ಒಪ್ಪಿಸಿದ್ದಾರಾ ಎಂದು ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ. ಇದನ್ನೂ ಓದಿ: ಕೊಡಗು: ಬೆಲೆ ಏರಿಕೆ ವಿರುದ್ಧ ಅಸಮಾಧಾನ – ಖಾಲಿ ಸಿಲಿಂಡರ್ ಪ್ರದರ್ಶನ