ಮಡಿಕೇರಿ: ಭಾರೀ ಭೂ ಕುಸಿತ ಮತ್ತು ಪ್ರವಾಹದಿಂದ ತತ್ತರಿಸಿದ್ದ ಕೊಡಗಿನ ಮಂದಿ ಇದೀಗ ಮತ್ತೊಂದು ಸಮಸ್ಯೆಯಿಂದ ಹೈರಾಣಾಗಿ ಹೋಗಿದ್ದಾರೆ. ಬಹುತೇಕ ಮಡಿಕೇರಿ ಜಿಲ್ಲೆಯ ಜನತೆ ಮೊಬೈಲ್ ನೆಟ್‍ವರ್ಕ್‍ಗಾಗಿ ಬಿಎಸ್‍ಎನ್‍ಎಲ್ ಸೇವೆಯನ್ನೇ ನಂಬಿಕೊಂಡಿದ್ದಾರೆ.
ಕಳೆದ ಕೆಲ ದಿನಗಳಿಂದ ಇಲ್ಲಿ ಬಿಎಸ್‍ಎನ್‍ಎಲ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಏನಾದರೂ ತೊಂದರೆ ಆದರೆ ತಕ್ಷಣ ಸಹಾಯಕ್ಕಾಗಿ ಯಾರನ್ನು ಸಂಪರ್ಕ ಮಾಡಲು ಆಗುತ್ತಿಲ್ಲ ಎಂದು ಕೊಡಗಿನ ಜನತೆ ವಿನೂತನ ಪ್ರತಿಭಟನೆ ನಡೆಸುವ ಮೂಲಕ ಬಿಎಸ್‍ಎನ್‍ಎಲ್ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
Advertisement
Advertisement
ಕರೆಂಟ್ ಹೋದಾಗ ಬಿಎಸ್‍ಎನ್‍ಎಲ್ ಸೇವೆ ಸ್ಥಗಿತಗೊಳ್ಳುತ್ತಿದೆ. ಜನರೇಟರ್ ಗೆ ಡೀಸೆಲ್ ಹಾಕಲು ಬಿಎಸ್‍ಎನ್‍ಎಲ್ ಅಧಿಕಾರಿಗಳು ಹಣ ನೀಡುತ್ತಿಲ್ಲ. ಹಾಗಾಗಿ ಕಳೆದ ಕೆಲವು ದಿನಗಳಿಂದ ಹಲವು ಗ್ರಾಮಗಳಲ್ಲಿ ಬಿಎಸ್‍ಎನ್‍ಎಲ್ ಮತ್ತು ಏರ್ ಟೆಲ್ ಸೇರಿದಂತೆ ಯಾವುದೇ ಮೊಬೈಲ್ ಸೇವೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇದರಿಂದ ಅಸಮಾಧಾನಗೊಂಡ ಗ್ರಾಮಸ್ಥರು ಎಲ್ಲರೂ ಸೇರಿ ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ಅದರಿಂದ 35 ಲೀಟರ್ ಡೀಸೆಲ್ ಖರೀದಿಸಿ ಮೊಬೈಲ್ ಕಂಪನಿಗೆ ನೀಡಿದ್ದಾರೆ.
Advertisement
ಜೋರಾಗಿ ಮಳೆ ಬಂದು ಏನಾದರೂ ಹೆಚ್ಚು ಕಡಿಮೆ ಆದರೆ ಕರೆ ಮಾಡಿ ವಿಷಯ ತಿಳಿಸೋಣ ಎಂದರೆ ಬಿಎಸ್‍ಎನ್‍ಎಲ್ ಕೆಲಸವೇ ಮಾಡುತ್ತಿಲ್ಲ. ಹಾಗಾಗಿ ಮಡಿಕೇರಿ ತಾಲೂಕಿನ ಮರಗೋಡು ಗ್ರಾಮದ ಜನರು ಬಿಎಸ್‍ಎನ್‍ಎಲ್‍ಗಾಗಿ ಗ್ರಾಮಸ್ಥರು ಮನೆ ಮನೆ ತೆರಳಿ ಭಿಕ್ಷೆ ಬೇಡಿದ್ದಾರೆ. ನಂತರ ಬಂದ ಹಣದಲ್ಲಿ ಡೀಸೆಲ್ ಖರೀದಿಸಿ ಮೊಬೈಲ್ ಕಂಪನಿಗೆ ನೀಡಿದ್ದಾರೆ.
Advertisement
ಭಿಕ್ಷೆ ಬೇಡಿದ ಹಣದಿಂದ ಡೀಸೆಲ್ ಖರೀದಿಸಿ ಕಂಪನಿಗೆ ನೀಡಿ ಈ ಮೂಲಕ ಅಲ್ಲಿನ ಅಧಿಕಾರಿಗಳಿಗೆ ಸರಿಯಾಗಿ ಬಿಸಿ ಮುಟ್ಟಿಸಿದ್ದಾರೆ.