ಮಡಿಕೇರಿ: ಮಹಾಮಳೆಯ ಅಬ್ಬರಕ್ಕೆ ಭಾಗಮಂಡಲದ ಸಮೀಪ ಇರುವ ಗ್ರಾಮದಲ್ಲಿ ಮನೆಯ ಮೇಲೆ ಗುಡ್ಡ ಕುಸಿದು ಒಂದೇ ಕುಟುಂಬದ ಐದು ಮಂದಿ ಸಾವನ್ನಪ್ಪಿದ್ದಾರೆ.
ಮಡಿಕೇರಿ ತಾಲೂಕಿನ ಕೋರಂಗಾಲ ಗ್ರಾಮದಲ್ಲಿ ಮನೆ ಮೇಲೆ ಗುಡ್ಡ ಕುಸಿತದ ಪರಿಣಾಮ ಸಂಪೂರ್ಣ ನೆಲಸಮ ಆಗಿದೆ. ಈ ಪರಿಣಾಮ ಮನೆಯಲ್ಲಿ ಇದ್ದ ಐದು ಜನರು ಸಾವನ್ನಪ್ಪಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
Advertisement
Advertisement
ಈ ಕೋರಂಗಾಲ ಗ್ರಾಮ ಭಾಗಮಂಡಲದ ತ್ರಿವೇಣಿ ಸಂಗಮ ನಂತರ ಇದ್ದು ಈ ಪ್ರದೇಶ ಸಂಪೂರ್ಣ ಜಲಾವೃತವಾದ ಕಾರಣ ರಕ್ಷಣಾ ಕಾರ್ಯ ಮಾಡುವುದು ಕಷ್ಟವಾಗಿದೆ. ಈಗ ಸದ್ಯಕ್ಕೆ ಪೊಲೀಸರು ಈ ಸ್ಥಳ ತಲುಪಿದ್ದು, ಇಬ್ಬರ ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ. ಇನ್ನೂ ಉಳಿದ ಜನರ ಪತ್ತೆಗೆ ಕಾರ್ಯಚರಣೆ ಮುಂದುವರಿದಿದೆ.
Advertisement
ವಿಚಾರ ತಿಳಿಯುತ್ತಿದಂತೆ ಕೇಂದ್ರ ಸಚಿವ ಸದಾನಂದಗೌಡ ಸರ್ಕಾರದಿಂದ ಮೃತರ ಕುಟುಂಬ ಕ್ಕೆ ಐದು ಲಕ್ಷ ಪರಿಹಾರ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಈ ವಿಚಾರದ ಬಗ್ಗೆ ಮಾತನಾಡಿರುವ ಶಾಸಕ ಕೆ.ಜಿ ಬೋಪಯ್ಯ ಜಿಲ್ಲೆಯಲ್ಲಿ ಮಳೆಯಿಂದಾಗಿ ಮೊಬೈಲ್ ನೆಟ್‍ವರ್ಕ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಈ ಕಾರಣದಿಂದ ಅಪಾಯದಲ್ಲಿ ಸಿಲುಕಿರುವ ಜನರನ್ನು ಸಂಪರ್ಕ ಮಾಡಲು ಸಾಧ್ಯವಾಗುತ್ತಿಲ್ಲ. ಆದರೂ ಸಂಪರ್ಕಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.