ಮಂಗಳೂರು: ಕೊಡಗಿನ ಸಂತ್ರಸ್ತರಿಗೆ ರಾಜ್ಯದ ಸಂಘ, ಸಂಸ್ಥೆ, ದೇವಸ್ಥಾನ ಸಮಿತಿ, ನಾಯಕರು ಸೇರಿದಂತೆ ಜನಸಾಮಾನ್ಯರು ಧನ ಸಹಾಯಕ್ಕೆ ಮುಂದಾಗಿದ್ದಾರೆ. ಇಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸಮಿತಿಯು 2 ಕೋಟಿ ರೂ. ನೆರವುವನ್ನು ನೀಡಿದೆ.
ದೇವಸ್ಥಾನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ನೇತೃದಲ್ಲಿ ವ್ಯವಸ್ಥಾಪನಾ ಸಮಿತಿ ಸಭೆ ನಡೆಸಿ, ಈ ನಿರ್ಣಯ ಕೈಗೊಳ್ಳಲಾಗಿದ್ದು, ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣವನ್ನು ನೀಡಲು ಸಮಿತಿಯ ಸದಸ್ಯರು ನಿರ್ಧರಿಸಿದ್ದಾರೆ.
ದಾವಣಗೆರೆ: ಜಿಲ್ಲಾ ಸಹಕಾರ ಬ್ಯಾಂಕ್ ಒಕ್ಕೂಟ ಗೌರವಾಧ್ಯಕ್ಷ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಅವರು, ಬ್ಯಾಂಕ್‍ನಿಂದ ಕೇರಳ ಹಾಗೂ ಮಡಿಕೇರಿ ಸಂತ್ರಸ್ತರಿಗೆ ನೀಡಲು 1 ಕೋಟಿ ಪರಿಹಾರ ನೀಡಲು ನಿರ್ಧರಿಸಿದ್ದಾರೆ.
ಒಟ್ಟು 1 ಕೋಟಿ ರೂ.ಗಳಲ್ಲಿ 50 ಲಕ್ಷ ರೂ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಾಗೂ 50 ಲಕ್ಷ ರೂ.ವನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ. ಜೊತೆಗೆ ಶಾಮನೂರು ಶಿವಶಂಕರಪ್ಪ ಅವರು ಕೇರಳ ಹಾಗೂ ಕೊಡಗಿಗೆ ವೈಯಕ್ತಿಕ 25 ಲಕ್ಷ ರೂ. ನೀಡಲು ಮುಂದಾಗಿದ್ದಾರೆ.
ಬೀದರ್: ನಗರದಲ್ಲಿಯೂ ಕೂಡಾ ಭಗತ್ ಸಿಂಗ್ ಯೂತ್ ಬ್ರೀಗೆಡ್ ಸಂಘಟನೆಯು ಶನಿವಾರದಿಂದ ಅಭಿಯಾನ ಪ್ರಾರಂಭ ಮಾಡಿದೆ. ಕಾರ್ಯಕರ್ತರು ರಸ್ತೆಗಳಿದು ಪರಿಹಾರ ನಿಧಿ, ಆಹಾರ ಸಾಮಗ್ರಿಗಳು, ಔಷಧಿ, ಸಂತ್ರಸ್ತರಿಗೆ ಬೇಕಾಗುವ ಬಟ್ಟೆ, ಆಹಾರ ಧಾನ್ಯಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಸಂಗ್ರಹಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://youtu.be/QCNusRT6oCA