ಮಡಿಕೇರಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯಿಂದ ಪ್ರಭಾವಿತರಾದ ಸಿಆರ್‌ಪಿಎಫ್‌ನ ಸಬ್ ಇನ್‌ಸ್ಪೆಕ್ಟರ್ ಮರ್ವಿನ್ ಅವರು ಸುಮಾರು 21 ವರ್ಷದ ಸೇವೆ ಬಾಕಿ ಇದ್ದರೂ ಸ್ವಯಂ ನಿವೃತ್ತಿ ಪಡೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಸಿಆರ್‌ಪಿಎಫ್‌ನಲ್ಲಿ ಯೋಧನಾಗಿ ಸೇವೆ ಪ್ರಾರಂಭಿಸಿದ ಕೊಡಗಿನ ಮರ್ವಿನ್ ಕೊರೆಯ ಅವರು ನೆಲ್ಯಹುದಿಕೇರಿ ಹಾಗೂ ಕುಶಾಲನಗರದಲ್ಲಿ ಪ್ರಾಥಮಿಕ ಶಿಕ್ಷಣ, ಮರಗೋಡಿನ ಭಾರತಿ ಜೂನಿಯರ್ ಕಾಲೇಜಿನಲ್ಲಿ ಪದವಿಪೂರ್ವ ನಂತರ ಮಡಿಕೇರಿಯ ಎಫ್.ಎಂ.ಸಿ. ಕಾಲೇಜು ಮತ್ತು ಮೈಸೂರಿನಲ್ಲಿ ಪದವಿ ಪಡೆದಿದ್ದಾರೆ. ಇದನ್ನೂ ಓದಿ: ಡಿಕೆಶಿ ಆಯ್ಕೆ ಒಂದೋ ಅವರ ಆಪ್ತ ಬಣದಲ್ಲಿರುವವರು ರೌಡಿ ಹಿನ್ನೆಲೆ ಹೊಂದಿರಬೇಕು, ಇಲ್ಲವಾದರೆ ತೆರಿಗೆ ಕಳ್ಳರಾಗಿರಬೇಕು: ಬಿಜೆಪಿ
ನಂತರ ಸಿಆರ್‌ಪಿಎಫ್ ಮೂಲಕ ದೇಶ ಸೇವೆಗೆ ಸೇರ್ಪಡೆಯಾದ ಇವರು ಸುಮಾರು 20 ವರ್ಷ ಯೋಧರಾಗಿ ಕಾರ್ಯನಿರ್ವಹಿಸಿದ್ದಾರೆ. ಚತ್ತೀಸಗಢದ ಸುಕ್ಕಾ ಜಿಲ್ಲೆಯ ಅಟಲ್ ಸದನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಆರ್‌ಪಿಎಫ್‌ನ ನಿವೃತ್ತ ಸಬ್ ಇನ್‌ಸ್ಪೆಕ್ಟರ್ ಮೆರ್ವಿನ್ ಕೊರಿಯಾ ಅವರು ಚತ್ತೀಡಗಢ ರಾಜ್ಯ ಯುವಮೋರ್ಚಾ ಉಪಾಧ್ಯಕ್ಷೆ ದೀಪಿಕಾ ಶೋರಿ ಮತ್ತು ವಿಭಾಗೀಯ ಅಧ್ಯಕ್ಷ ವಿನೋದ್ ಬೈಸ್ ಅವರ ಸಮ್ಮುಖದಲ್ಲಿ ಬಿಜೆಪಿ ಸದಸ್ಯತ್ವವನ್ನು ವಿಧಿವತ್ತಾಗಿ ಸ್ವೀಕರಿಸಿದರು.
ಈ ಸಂದರ್ಭ ಮಾತನಾಡಿದ ಅವರು, 2001ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಆರ್‌ಪಿಎಫ್‌ಗೆ ಸೇರಿದ ನಂತರ ಅಸ್ಸಾಂ, ತಮಿಳುನಾಡು, ಮಣಿಪುರದಲ್ಲಿ ತದನಂತರ ಸುಕ್ಕಾದಲ್ಲಿ ಸೇವೆ ಸಲ್ಲಿಸಿದ್ದೇನೆ. ಪ್ರಧಾನಿ ನರೇಂದ್ರ ಅವರ ಕಾರ್ಯಶೈಲಿಯಿಂದ ಪ್ರಭಾವಿತನಾಗಿ ಬಿಜೆಪಿಗೆ ಸೇರ್ಪಡೆಯಾಗಿ ಸದಾ ಜನಸೇವೆ ಮಾಡುತ್ತೇನೆ ಹೇಳಿದರು. ಇದನ್ನೂ ಓದಿ: ಕರ್ನಾಟಕಕ್ಕೆ ಕಾಲಿಟ್ಟ ಡೆಡ್ಲಿ ವೈರಸ್- ಬೆಂಗಳೂರಿನ ಇಬ್ಬರಲ್ಲಿ ಓಮಿಕ್ರಾನ್ ಪತ್ತೆ!
ಇಂದು ಬಿಜೆಪಿಗೆ ಕಾಲಿಟ್ಟಿರುವ ಮೆರ್ವಿನ್ ಕೊರಿಯಾ ಅವರು ತಮ್ಮ ಅತ್ಯುತ್ತಮ ಕೆಲಸಕ್ಕಾಗಿ ಚತ್ತೀಸಗಢದ ಸುಕ್ಕಾ ಪೊಲೀಸ್ ವರಿಷ್ಠಾಧಿಕಾರಿ ಕಮಾಂಡೇಷನ್, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಮಾಂಡೇಷನ್, ಇತ್ತೀಚೆಗಷ್ಟೇ ಸಿಆರ್‌ಪಿಎಫ್‌ನ ಉತ್ಕೃಷ್ಟ ಸೇವಾ ಪದಕವನ್ನೂ ಪಡೆದಿದ್ದಾರೆ.