ಮಡಿಕೇರಿ: ಕಾವೇರಿ ನೀರಾವರಿ ನಿಗಮದ ನಿರ್ಲಕ್ಷ್ಯಕ್ಕೆ ತುತ್ತಾಗಿರುವ ಕುಶಾಲನಗರ ತಾಲ್ಲೂಕಿನ ರಂಗಸಮುದ್ರದ ಬಳಿ ಇರುವ ಚಿಕ್ಲಿಹೊಳೆ ಜಲಾಶಯ 2ನೇ ಬಾರಿಗೆ ಭರ್ತಿಯಾಗಿದೆ. ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಚಿಕ್ಲಿಹೊಳೆ ಜಲಾಶಯ (Chiklihole Reservoir) ಮತ್ತೊಮ್ಮೆ ಭರ್ತಿಯಾಗಿದೆ. ಹೀಗಾಗಿ ನೂರಾರು ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ.

ಕೊಡಗಿನಲ್ಲಿ (Kodagu) ಸುರಿಯುತ್ತಿರುವ ಅಕಾಲಿಕ ಮಳೆಗೆ ಜಿಲ್ಲೆಯ ನಾನಾ ಭಾಗಗಳಲ್ಲಿ ಮಳೆಯಿಂದಾಗಿ ಕಾಫಿ, ಕರಿಮೆಣಸು ಬೆಳೆಗಳಿಗೆ ಸಾಕಷ್ಟು ಹಾನಿಯುಂಟಾಗಿದೆ. ಇದರ ನಡುವೆ ಖುಷಿಯ ವಿಚಾರ ಎನ್ನುವಂತೆ ಕುಶಾಲನಗರ ತಾಲೂಕಿನ ಚಿಕ್ಲಿಹೊಳೆಯ ಜಲಾಶಯ 2ನೇ ಬಾರಿಗೆ ಭರ್ತಿಯಾಗಿದೆ. ಇದನ್ನೂ ಓದಿ: ನಮ್ಗೆ ಹೈಕಮಾಂಡ್ ದೇವಸ್ಥಾನ, ಹೆಡ್ ಆಫೀಸ್ – ಸತೀಶ್ ಜಾರಕಿಹೊಳಿ ಡೆಲ್ಲಿ ಟೂರ್‌ಗೆ ಡಿಕೆಶಿ ಸಾಫ್ಟ್ ರಿಯಾಕ್ಷನ್

0.18 ಟಿಎಂಸಿ ಕನಿಷ್ಠ ಪ್ರಮಾಣದ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಜಲಾಶಯ ಕಳೆದ ವರ್ಷದ ಇದೇ ಮೇ ಮಾಸಾಂತ್ಯದಲ್ಲಿ ಸಂಪೂರ್ಣ ಖಾಲಿಯಾಗಿ ಒಣಗುವ ಹಂತ ತಲುಪಿತ್ತು. 12 ಗ್ರಾಮಗಳ 2,137 ಹೆಕ್ಟೆರ್ ಭೂಮಿಗೆ ಭತ್ತ ಬೆಳೆಯಲು ಈ ಜಲಾಶಯ ಆಶ್ರಯವಾಗಿದೆ. ಭರ್ತಿಯಾದ ಜಲಾಶಯದಿಂದ ಅರ್ಧಚಂದ್ರಾಕಾರದ ಸುರುಳಿಯಲ್ಲಿ ಹರಿಯುತ್ತಿರುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ದಾಂಗುಡಿ ಇಡುತ್ತಿದ್ದಾರೆ. ಇದನ್ನೂ ಓದಿ: ಮದುವೆ ಆಗ್ತೀನಿ, ಹೊಸ ಕಾರು ಬೇಕು ಅಂತಾ ಲೆಟರ್ ಕೊಟ್ಟಿದ್ದ: ತೇಜಸ್ವಿ ಸೂರ್ಯ ವಿರುದ್ಧ ಡಿಕೆಶಿ ವ್ಯಂಗ್ಯ

