ಉಕ್ಕಿ ಹರಿದ ಕಾವೇರಿ – ಕೃಷಿ ಗದ್ದೆಗಳು ಜಲವೃತ

Public TV
1 Min Read
Kodagu Rain 4

– ನಿನ್ನೆ ಮಳೆ ಹಾನಿ‌ ಪ್ರದೇಶಕ್ಕೆ ಸಚಿವ ಬೋಸರಾಜು ಭೇಟಿ

ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಕಳೆದ 2-3 ದಿನಗಳಿಂದ ಕೊಂಚಮಟ್ಟಿಗೆ ಮಳೆ ತಗ್ಗಿದ್ರೂ ಮಳೆ ಅವಾಂತರಗಳು ಮಾತ್ರ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ‌. ಮಡಿಕೇರಿ (Madikeri_ ತಾಲೂಕಿನ ನಾಪೋಕ್ಲು ಬೋಳಿಬಾಣ್ಣೆ ಭಾಗದಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮದಿಂದ ಕೃಷಿ ಗದ್ದೆಗಳು ಸಂಪೂರ್ಣವಾಗಿ ಜಲಾವೃತವಾಗಿದೆ.

ಅಲ್ಲದೇ ಕಾಫಿ, ಅಡಿಕೆ ತೋಟಗಳಿಗೂ ಕಾವೇರಿ ನದಿ (Cauvery River) ನೀರು ಉಕ್ಕಿ ಹರಿಯುತ್ತಿರುವ ಪರಿಣಾಮ ರೈತರು ಕಂಗಾಲಾಗಿದ್ದಾರೆ. ಅಲ್ಲದೇ ರಸ್ತೆಯ ಮೇಲೂ 2-3 ಅಡಿಯಷ್ಟು ನೀರು ಹರಿಯುತ್ತಿರುವುದರಿಂದ ನಾಪೋಕ್ಲು ಮೂರ್ನಾಡು ರಸ್ತೆ ಸಂಪರ್ಕ ಕಡಿತಗೊಂಡಿದು. ಗ್ರಾಮೀಣ ಭಾಗದ ಜನರು ಸುತ್ತಿಬಳಸಿಕೊಂಡು ತಮ್ಮ ಊರಿನತ್ತ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಬಿಜೆಪಿ ಕುರುಬ ಸಮುದಾಯದ ನಾಯಕರ ಸಭೆ; ವಿಜಯೇಂದ್ರ‌ ಪರ ಬ್ಯಾಟಿಂಗ್ – ಈಶ್ವರಪ್ಪ ಘರ್ ವಾಪ್ಸಿ ಬಗ್ಗೆ ಚರ್ಚೆ

NS Boseraju

ಮಳೆ ಹಾನಿ‌ ಪ್ರದೇಶಕ್ಕೆ ಸಚಿವ ಬೋಸರಾಜು ಭೇಟಿ
ಇನ್ನೂ ಕೊಡಗು ಜಿಲ್ಲೆಯ ನಾಪೋಕ್ಲು ವ್ಯಾಪ್ತಿಯ ಚೆರಿಯಪರಂಬು ಭಾಗದಲ್ಲಿ ಮಳೆಯಿಂದ ಉಂಟಾಗಿರುವ ಹಾನಿ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಹಾಗೂ ವಿರಾಜಪೇಟೆ ಶಾಸಕ ಎಸ್ ಪೊನ್ನಣ್ಣ ಶನಿವಾರ (ನಿನ್ನೆ) ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಭಯಾನಕ ಹತ್ಯೆ – ಮಹಿಳೆಯ ಕೊಲೆ ಮಾಡಿ ಮೂಟೆಕಟ್ಟಿ ಕಸದ ಲಾರಿಯಲ್ಲಿಟ್ಟು ಎಸ್ಕೇಪ್!

ಪ್ರತಿ ವರ್ಷ ಮಳೆಗಾಲದಲ್ಲಿ ಉಕ್ಕಿ ಹರಿಯುವ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯ ಹಾಗೂ ಸುತ್ತಮುತ್ತಲಿನ ಪರಿಸರದ ವೀಕ್ಷಿಸಿದ ಮಾಡಿದ ಶಾಸಕರು, ಅಧಿಕಾರಿಗಳೊಂದಿಗೆ ಸುರಕ್ಷತೆ ಕ್ರಮದ ಬಗ್ಗೆ ಚರ್ಚಿಸಿ ಸಲಹೆ ನೀಡಿದರು. ‌‌‌ಮುಂದಿನ ದಿನಗಳಲ್ಲಿ ಪ್ರವಾಹದಿಂದ ಸಂಪರ್ಕ ಕಡಿತಗೊಳ್ಳುವ ಈ ಸೇತುವೆಯ ಆಸುಪಾಸಿನಲ್ಲಿ ಮುಂಜಾಗ್ರತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಚರ್ಚಿಸಿದರು. ಪ್ರವಾಹ ಪೀಡಿತ ಸ್ಥಳಗಳಿಗೆ ಜೀಪ್‌ನಲ್ಲಿ ತೆರಳಿ ಸಚಿವರು ಹಾಗೂ ಶಾಸಕರು ಜನರ ಸಮಸ್ಯೆ ಆಲಿಸಿದರು. ಇದನ್ನೂ ಓದಿ: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ

Share This Article