ಬೆಂಗಳೂರು: ಸಂಕಷ್ಟಕ್ಕೊಳಗಾದ ಕೊಡಗಿನ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಪೀಪಲ್ ಫಾರ್ ಪೀಪಲ್ ತಂಡ ಆಯೋಜಿಸಿರುವ ಕೊಡಗಿಗಾಗಿ ರಂಗ ಸಪ್ತಾಹ ಕಾರ್ಯಕ್ರಮ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಉದ್ಘಾಟನೆ ಆಯಿತು.
Advertisement
ಖ್ಯಾತ ಪರಿಸರತಜ್ಞ ಡಾ.ಯಲ್ಲಪ್ಪರೆಡ್ಡಿ ಮಾತನಾಡಿ, ದೇಶದ ಸಮಸ್ಯೆಗಳ ಬಗ್ಗೆ ಯುವಕರು ಚಿಂತನೆ ಮಾಡಿ ಪರಿಹಾರ ಕೈಗೊಳ್ಳಬೇಕೆಂಬ ಗಾಂಧೀಜಿಯವರ ಚಿಂತನೆ ಈಗಲೂ ಪ್ರಸ್ತುತ. ಈ ನಿಟ್ಟಿನಲ್ಲಿ ಪೀಪಲ್ ಫಾರ್ ಪೀಪಲ್ ತಂಡದ ಕಾರ್ಯ ಶ್ಲಾಘನೀಯ. ಪರಿಸರ ಸಂರಕ್ಷಣೆಯತ್ತ ನಾವು ಹೆಚ್ಚಿನ ಗಮನವಹಿಸಬೇಕಿದೆ. ಪರಿಸರ ಸಂರಕ್ಷಣೆಯಿಂದ ಮಾತ್ರ ಮನುಷ್ಯನ ಉಳಿವು ಸಾಧ್ಯ ಎಂದರು.
Advertisement
ಡಾಲಿ ಧನಂಜಯ್ ಮಾತನಾಡಿ, ಸಮಸ್ಯೆಗಳಿಗೆ ಆ ಕ್ಷಣಕ್ಕೆ ಸ್ಪಂದಿಸೋದು ಮಾತ್ರವಲ್ಲ, ಸಮಸ್ಯೆಯನ್ನು ಸಂಪೂರ್ಣ ಪರಿಹರಿಸುವತ್ತಲೂ ಗಮನಹರಿಸಬೇಕು. ಈ ನಿಟ್ಟಿನಲ್ಲಿ ಪೀಪಲ್ ಫಾರ್ ಪೀಪಲ್ ತಂಡ ಸಕ್ರಿಯವಾಗಿ ಕಾರ್ಯನಿರತವಾಗಿದೆ ಎಂದರು.
Advertisement
Advertisement
ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಕೊಡಗು ತಲ್ಲಣಗೊಂಡಿದೆ, ನೊಂದಿದೆ. ನಮಗೆಲ್ಲವನ್ನೂ ಕೊಟ್ಟ ಕೊಡಗಿನ ದುಃಸ್ಥಿತಿಯನ್ನು ಮರೆಯಬಾರದು. ಅದಕ್ಕಾಗಿಯೇ ಈ ಕಾರ್ಯಕ್ರಮ. ಇದೊಂದು ಜಾಗೃತಿ ಕಾರ್ಯಕ್ರಮ. ಪರಿಸರ ಕಲುಷಿತಗೊಂಡಿರುವುದಕ್ಕೆ ಮನುಷ್ಯನ ಮನಸ್ಸು ಕಲುಷಿತಗೊಂಡಿರುವುದೇ ಕಾರಣ. ಪರಿಸರ ನಮ್ಮ ತಾಯಿ. ತಾಯಿಯಂಥಾ ಪರಿಸರವನ್ನು ಇನ್ನಾದರೂ ರಕ್ಷಿಸಬೇಕು. ಸದ್ಯಕ್ಕೆ ಕೊಡಗಿನ ಪ್ರಾಕೃತಿಕ ಹಾನಿಯಿಂದ ಸಂತ್ರಸ್ತರಾಗಿರುವ ಕೊಡಗಿನ ಜನಕ್ಕೆ ಅಗತ್ಯವಾದ ಕೆಲಸವನ್ನು ನಾವೆಲ್ಲರೂ ಮಾಡೋಣ. ಪೀಪಲ್ ಫಾರ್ ಪೀಪಲ್ ತಂಡಕ್ಕೆ ಆದಿಚುಂಚನಗಿರಿ ಮಠದ ಬೆಂಬಲ ಸದಾ ಇರುತ್ತದೆ ಎಂದು ಹೇಳಿದರು.
ಕೊಡಗಿನ ಸಂತ್ರಸ್ತ ಕುಟುಂಬದವರೂ ಸಹ ಕಾರ್ಯಕ್ರಮದಲ್ಲಿ ಹಾಜರಿದ್ದರು. ಖ್ಯಾತ ಪರಿಸರ ತಜ್ಞ ಡಾ. ಯಲ್ಲಪ್ಪರೆಡ್ಡಿ, ರೈತ ಮುಖಂಡ ಪಚ್ಚೆ ನಂಜುಂಡಸ್ವಾಮಿ, ಸಂಚಾರಿ ವಿಜಯ್, ಒರಟ ಪ್ರಶಾಂತ್ , ಕೊಡಗು ನಿವೃತ್ತ ಜಿಲ್ಲಾಧಿಕಾರಿ, ಕೆಎಂಎಫ್ ಮಾಜಿ ಅಧ್ಯಕ್ಷ ಪ್ರೇಮನಾಥ್, ಡಾ.ಸಿ.ಅಶ್ವತ್ಥ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ರಂಗಸಪ್ತಾಹದ ಮೊದಲ ದಿನಕ್ಕೆ ಅನನ್ಯ ಭಟ್ ಮತ್ತು ತಂಡದವರ ಜನಪದಗೀತಜಾತ್ರೆ ಮೆರುಗು ತಂದಿತ್ತು. ನಟನ ತಂಡದವರು ಅಭಿನಯಿಸಿದ ಚೋರಚರಣದಾಸ ಪ್ರೇಕ್ಷಕರ ಮನಸೂರೆಗೊಂಡಿತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews