ಟಾರ್ಗೆಟ್‌ ರೀಚ್‌ ಆಗ್ಲಿಲ್ಲ ಅಂತ ನೌಕರರಿಗೆ ನಾಯಿಯಂತೆ ನಡೆಯುವ, ಬೊಗಳುವ ಶಿಕ್ಷೆ

Public TV
1 Min Read
hindustan power links labour abuse

– ಖಾಸಗಿ ಕಂಪನಿಯಲ್ಲಿ ನೌಕರರ ಮೇಲೆ ಅಮಾನವೀಯ ವರ್ತನೆ

ತಿರುವನಂತಪುರಂ: ಟಾರ್ಗೆಟ್‌ ತಲುಪಲಿಲ್ಲ ಎಂದು ಕೇರಳದ ಖಾಸಗಿ ಕಂಪನಿಯೊಂದು ತನ್ನ ನೌಕರರನ್ನು ಅಮಾನವೀಯವಾಗಿ ನಡೆಸಿಕೊಂಡಿರುವ ಘಟನೆ ನಡೆದಿದೆ. ಕೇರಳದ (Kerala) ಕೊಚ್ಚಿಯ (Kochi) ಕಲೂರ್‌ನಲ್ಲಿ ಘಟನೆ ಬೆಳಕಿಗೆ ಬಂದಿದೆ.

ಹಿಂದೂಸ್ತಾನ್ ಪವರ್ ಲಿಂಕ್ಸ್‌ನ (Hindustan Power Links) ನೌಕರರು ಸೇಲ್ಸ್‌ ಟಾರ್ಗೆಟ್‌ ತಲುಪಲಿಲ್ಲ ಎಂದು ಶಿಕ್ಷೆಗೆ ಗುರಿಪಡಿಸಿದೆ. ನಾಯಿಗಳಂತೆ ತೆವಳಲು, ಉಗುಳಲು ಮತ್ತು ಬೊಗಳುವಂತೆ ಒತ್ತಾಯಿಸಿ ಅಮಾನವೀಯವಾಗಿ ನಡೆಸಿಕೊಂಡಿದೆ. ಈ ದೃಶ್ಯದ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಜ್ಯದ ಕಾರ್ಮಿಕ ಇಲಾಖೆಯು ತನಿಖೆ ಆರಂಭಿಸಿದೆ. ಕಾರ್ಮಿಕ ಸಚಿವ ವಿ.ಶಿವಂಕುಟ್ಟಿ ಅವರು ಈ ಘಟನೆಯನ್ನು ಆಘಾತಕಾರಿ ಬೆಳವಣಿಗೆ ಎಂದಿದ್ದಾರೆ. ಜಿಲ್ಲಾ ಕಾರ್ಮಿಕ ಅಧಿಕಾರಿಗೆ ತಕ್ಷಣದ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ದೌರ್ಜನ್ಯಕ್ಕೆ ಒಳಗಾದ ನೌಕರರು ತಿಂಗಳಿಗೆ ಕೇವಲ 6ರಿಂದ 8000 ಸಂಬಳ ಪಡೆಯುತ್ತಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ತನಿಖೆಗೆ ಆದೇಶಿಸಿದೆ.

Share This Article