Connect with us

Latest

ದೋಣಿಗೆ ಹಡಗು ಡಿಕ್ಕಿ: ಮೂವರು ಮೀನುಗಾರರ ದುರ್ಮರಣ

Published

on

ಕೊಚ್ಚಿ: ಪನಾಮ ಹಡಗೊಂದು ಮೀನುಗಾರರ ದೋಣಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೀನುಗಾರರು ಮೃತಪಟ್ಟು 11 ಮಮದಿ ಗಾಯಗೊಂಡ ಘಟನೆ ಕೊಚ್ಚಿಯಲ್ಲಿ ಇಂದು ಮುಂಜಾನೆ ನಡೆದಿದೆ.

ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಓರ್ವ ಮೀನುಗಾರ ನಾಪತ್ತೆಯಾಗಿದ್ದು, ಆತನ ಪತ್ತೆಗಾಗಿ ಹುಡುಕಾಟ ಮುಂದುವರೆದಿದೆ ಅಂತಾ ಪೊಲೀಸರು ತಿಳಿಸಿದ್ದಾರೆ.

ದೋಣಿಯಲ್ಲಿ 14 ಮಂದಿ ಮೀನುಗಾರರಿದ್ದರು. ನಸುಕಿನ ಜಾವ ಸುಮಾರು 2 ಗಂಟೆಯ ವೇಳೆ ಈ ಅವಘಡ ಸಂಭವಿಸಿದೆ. ಕೂಡಲೇ ದೋಣಿಯಲ್ಲಿದ್ದ ಮೀನುಗಾರರನ್ನು ಬೇರೊಂದು ಮೀನುಗಾರಿಕಾ ದೋಣಿಯವರು ಬಂದು ರಕ್ಷಿಸಿದ್ದಾರೆ ಅಂತಾ ಹೇಳಿದ್ದಾರೆ.

ಕಾರ್ಯಾಚರಣೆಗಿಳಿದ ಕರಾವಳಿ ರಕ್ಷಣಾ ಪಡೆಗಳು ಸಮುದ್ರದಲ್ಲಿ ಭಾರೀ ಶೋಧ ನಡೆಸಿ ಪನಾಮಾದ ಅಂಬೆರ್ ಹಡಗನ್ನು ಸಿಬ್ಬಂದಿಗಳ ಸಮೇತ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕೇರಳದ ಕಡಲ ತೀರದಲ್ಲಿ ಇದು ಎರಡನೇಯ ಅವಘಡವಾಗಿದೆ. ಈ ಹಿಂದೆ ವಿದೇಶಿ ಹಡಗೊಂದು ಅವಘಡಕ್ಕೆ ತುತ್ತಾಗಿತ್ತು.

Click to comment

Leave a Reply

Your email address will not be published. Required fields are marked *