LatestMain PostNational

ಟ್ರೆಡ್‍ಮಿಲ್‍ನಲ್ಲಿ 12 ಗಂಟೆಗಳಲ್ಲಿ 66 ಕಿಮೀ ಯುವಕನ ನಾನ್‍ಸ್ಟಾಪ್ ಓಟ

ಲಕ್ನೋ: ಯುವಕನೊಬ್ಬ ಟ್ರೆಡ್‍ಮಿಲ್‍ನಲ್ಲಿ 12 ಗಂಟೆಗಳ ಕಾಲ ವಿಶ್ರಾಂತಿ ಪಡೆಯಾದೆ 66 ಕಿಮೀ ಓಡಿ ಎಲ್ಲರ ಗಮನ ಸೆಳೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಫಿಟ್‍ನೆಸ್ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಝೈನುಲ್ ಅಬೇದಿನ್ ಯುವಕ ಟ್ರೆಡ್‍ಮಿಲ್‍ನಲ್ಲಿ 12 ಗಂಟೆಗಳ ಕಾಲ ವಿಶ್ರಾಂತಿಯನ್ನು ಪಡೆಯದೆ 66 ಕಿಲೋಮೀಟರ್ ದೂರವನ್ನು ಓಡಿದ್ದಾರೆ. ಈ ಮೂಲಕ ರಾಜ್ಯದ ಎಲ್ಲರ ಗಮನ ಸೆಳೆದಿರುವ ಅಬೇದಿನ್ ಅವರು ತಮ್ಮ ಹೆಸರು ಗಿನ್ನೆಸ್ ಬುಕ್ ಆಫ್ ವಲ್ರ್ಡ್ ರೆಕಾರ್ಡ್‍ನಲ್ಲಿ ಸೇರಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಅವರ ಬೆಂಬಲಿಗರು ಮತ್ತು ಕಾರ್ಯಕ್ರಮದಲ್ಲಿದ್ದ ಎಲ್ಲರೂ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಇದನ್ನೂ ಓದಿ: ಸಂಸತ್ತಿನಲ್ಲೇ ಪರಸ್ಪರ ಹೊಡೆದಾಡಿಕೊಂಡ ಜನಪ್ರತಿನಿಧಿಗಳು

ಈ ವೇಳೆ ಜಿಲ್ಲೆಯ ಹಲವು ಅಧಿಕಾರಿಗಳು ಝೈನುಲ್ ಅಬೇದಿನ್ ಅವರನ್ನು ಭೇಟಿ ಮಾಡಿ ಹುರಿದುಂಬಿಸಿದರು. ಕಾರ್ಯಕ್ರಮ ಪೂರ್ಣಗೊಂಡ ನಂತರ ಶನಿವಾರ ತಡರಾತ್ರಿ, ಅಬೇದಿನ್ ಅವರ ಮೇಲೆ ಬೆಂಬಲಿಗರು ಹೂವಿನ ಮಳೆ ಸುರಿಸಿ ಅಭಿನಂದನೆ ಸಲ್ಲಿಸಿದ್ದಾರೆ

ಈ ಹಿಂದೆ ಝೈನುಲ್ ಅಬೇದಿನ್ ಅವರು ಅನೇಕ ರೇಸ್‍ಗಳಲ್ಲಿ ಭಾಗವಹಿಸಿದ್ದು, ‘ಮೊರಾದಾಬಾದ್ ಎಕ್ಸ್ ಪ್ರೆಸ್’ ಎಂದು ಜನಪ್ರಿಯರಾಗಿದ್ದಾರೆ. 2018 ರಲ್ಲಿ ಮಹಿಳೆಯರ ಗೌರವಾರ್ಥವಾಗಿ, ಅಬೇದಿನ್ ಅವರು ದೆಹಲಿಯ ಇಂಡಿಯಾ ಗೇಟ್‍ನಿಂದ ಪ್ರಾರಂಭಿಸಿ ಆಗ್ರಾ, ಜೈಪುರ ಮತ್ತು ದೆಹಲಿವರೆಗೂ ಓಡಿದ್ದರು. ಇದನ್ನೂ ಓದಿ: ಕರ್ನಾಟಕ ಬಂದ್‍ಗೆ ಎರಡೇ ದಿನ ಬಾಕಿ – ಹಲವು ವಲಯಗಳಿಂದ ಇನ್ನು ಸಿಕ್ಕಿಲ್ಲ ಪರಿಪೂರ್ಣ ಬೆಂಬಲ

ಈ ಓಟವನ್ನು ಅವರು ಏಳು ದಿನ, 22 ಗಂಟೆಗಳಲ್ಲಿ ಪೂರ್ಣಗೊಳಿಸಿದ್ದರು. ಈ ಸಾಧನೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದರು. ಅಲ್ಲದೇ ಇವರು ಕೋವಿಡ್ ಸಮಯದಲ್ಲಿಯೂ ಅಬೇದಿನ್ ಪೊಲೀಸರ ಗೌರವಾರ್ಥವಾಗಿ 50 ಕಿಲೋಮೀಟರ್ ಓಡಿದ್ದರು.

Leave a Reply

Your email address will not be published.

Back to top button