ನಿಮಗಿದು ತಿಳಿದಿರಲಿ: ಈ ಬಾರಿ ಬಜೆಟ್‍ನ 9 ಪ್ರಮುಖ ಘೋಷಣೆಗಳು ಹೀಗಿವೆ

Public TV
3 Min Read
Budget photo PIB 2

ಬೆಂಗಳೂರು: ಎನ್‍ಡಿಎ ಸರ್ಕಾರ ಪೂರ್ಣ ಪ್ರಮಾಣದ ಕೊನೆಯ ಬಜೆಟ್‍ನ್ನು ಹಣಕಾಸು ಸಚಿವರಾದ ಅರುಣ್ ಜೇಟ್ಲಿ ಮಂಡನೆ ಮಾಡಿದ್ದಾರೆ. ಈ ಬಾರಿ ಬಜೆಟ್‍ನಲ್ಲಿ ಕೃಷಿ, ಕಾರ್ಮಿಕ ಮತ್ತು ಬಡವರ ಪರವಾಗಿ ಎಂದು ಆಡಳಿತ ಸರ್ಕಾರ ಹೇಳಿಕೊಂಡಿದೆ. ಅರುಣ್ ಜೇಟ್ಲಿ ಬಜೆಟ್‍ನಲ್ಲಿ ಹಲವು ಯೋಜನೆ ಮತ್ತು ಮುಂದಿನ ಹಣಕಾಸು ವರ್ಷದ ಗುರಿಗಳನ್ನು ತಿಳಿಸಿದ್ದಾರೆ. 2018ರ ಬಜೆಟ್‍ನ ಪ್ರಮುಖ 09 ಘೋಷಣೆಗಳು ಹೀಗಿವೆ.

01. ಕಡಿಮೆಯಾಗಿಲ್ಲ ತೆರಿಗೆ: ಈ ಬಾರಿ ತೆರಿಗೆ ಪಾವತಿದಾರರಿಗೆ ಸಿಹಿ ಸುದ್ದಿ ಸಿಕ್ಕಿಲ್ಲ. ತೆರಿಗೆಗಳಲ್ಲಿ ಯಾವುದೇ ಇಳಿಕೆಯಾಗದೇ ಹೆಚ್ಚಾಗಿದೆ. ಉದ್ಯೋಗಿಗಳಿಗೆ 40 ಸಾವಿರದವರೆಗೂ ತೆರಿಗೆ ವಿನಾಯ್ತಿ ಸಿಕ್ಕಿದೆ. 40 ಸಾವಿರ ರೂ. ನಂತರದಲ್ಲಿ ಪಡೆಯುವ ಸಂಬಳ ತೆರಿಗೆಗೆ ಒಳಪಡುತ್ತದೆ. ಟ್ಯಾಕ್ಸ್ ಬೆಲ್ ಇನ್‍ಕಮ್ ಮೇಲೆ 01 ಪ್ರತಿಶತ ಹೆಚ್ಚಿಸಲಾಗಿದೆ. ವೈಯಕ್ತಿಕ ತೆರಿಗೆಯ ಮೇಲೆ ಟ್ಯಾಕ್ಸ್ ಪ್ರಮಾಣ ಹೆಚ್ಚಳವಾಗಿದ್ದರಿಂದ ಶೇರು ಮಾರುಕಟ್ಟೆಯಲ್ಲಿ ವ್ಯವಹರಿಸುವರು ಹೆಚ್ಚಿನ ತೆರಿಗೆ ಪಾವತಿಸ ಬೇಕಾಗುತ್ತದೆ.

arun jaitley image 5

02. ತುಟ್ಟಿಯಾಯ್ತು ಮೊಬೈಲ್: ಮೊಬೈಲ್ ಫೋನ್, ಟಿವಿ ಬೆಲೆಯಲ್ಲಿ ಹೆಚ್ಚಳವಾಗಿದೆ. ಟಿವಿ ಮತ್ತು ಮೊಬೈಲ್ ಫೋನ್‍ಗಳ ಮೇಲಿನ ಅಬಕಾರಿ ಸುಂಕವನ್ನು ಶೇ.15 ರಿಂದ ಶೇ.20ಕ್ಕೆ ಹೆಚ್ಚಳ ಮಾಡಲಾಗಿದೆ. ತಜ್ಞರ ಪ್ರಕಾರ ಐಫೋನ್ ದರದ ಮೇಲೆ 2ರಿಂದ 3 ಸಾವಿರ ರೂ. ಹೆಚ್ಚಾಗಲಿದೆ. ಉದಾಹರಣೆಗೆ ಐಫೋನ್ ಎಕ್ಸ್ ಮಾಡಲ್‍ನ ಫೋನ್ ಈಗ 89 ಸಾವಿರ ರೂ. ಇದ್ದು, ಕಂಪೆನಿ ತೆರಿಗೆ ಏರಿಕೆಯನ್ನು ಗ್ರಾಹಕರ ಮೇಲೆ ವರ್ಗಾಯಿಸಿದ್ರೆ ಫೋನ್ ಬೆಲೆ 92 ಸಾವಿರ ರೂ. ಗೆ ಏರಿಕೆಯಾಗುವ ಸಾಧ್ಯತೆಯಿದೆ.

apple

03. ಕಾರ್ಪೋರೇಟರ್ ತೆರಿಗೆ ಕಡಿತ: ದೀರ್ಘಾವಧಿ ಬಂಡವಾಳ ಹೂಡಿಕೆ ಮೇಲಿನ ತೆರಿಗೆ 10% ಏರಿಕೆ ಕಂಡಿದೆ. 250 ಕೋಟಿಗೂ ಅಧಿಕ ವ್ಯವಹಾರ ನಡೆಸುವ ಕಂಪೆನಿಗಳಿಗೆ ಶೇ.25 ತೆರಿಗೆ ಕಡಿತ.

04. ಅಧಿಕ ಹೂಡಿಕೆಯ ಗುರಿ: ಮುಂದಿನ ಹಣಕಾಸಿನ ವರ್ಷದಲ್ಲಿ ಸುಮಾರು 80 ಸಾವಿರ ಕೋಟಿ ಬಂಡವಾಳವನ್ನು ಮಾರುಕಟ್ಟೆಯಲ್ಲಿ ವಿನಿಯೋಗಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

money

05. ಸಂಬಳದಲ್ಲಿ ಏರಿಕೆ: ರಾಷ್ಟ್ರಪತಿಗಳ ವೇತನವನ್ನು ಪ್ರತಿ ತಿಂಗಳಿಗೆ 5 ಲಕ್ಷ ರೂಪಾಯಿ, ಉಪರಾಷ್ಟ್ರಪತಿಗಳ ವೇತನವನ್ನು 4.5 ಲಕ್ಷ ರೂಪಾಯಿ ಮತ್ತು ರಾಜ್ಯಪಾಲರುಗಳ ವೇತನವನ್ನು 3.5 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ. ಈವರೆಗೆ ರಾಷ್ಟ್ರಪತಿ ತಿಂಗಳಿಗೆ 1.5 ಲಕ್ಷ ರೂ. ವೇತನ ಪಡೆಯುತ್ತಿದ್ದರು. ಈಗ 1.5 ಲಕ್ಷ ರೂ. ಯಿಂದ 5 ಲಕ್ಷ ರೂ. ಗೆ ಹೆಚ್ಚಿಸಲಾಗಿದೆ. ಅದೇ ರೀತಿ ಉಪರಾಷ್ಟ್ರ ಪತಿಯ ವೇತನವನ್ನು ತಿಂಗಳಿಗೆ 1.10 ಲಕ್ಷ ರೂ. ನಿಂದ 4.5 ಲಕ್ಷ ರೂ. ಗೆ ಏರಿಸಲಾಗಿದೆ.

06.  ಉಜ್ವಲ: ಕೇಂದ್ರ ಸರ್ಕಾರದ ಮಹತ್ವಾಂಕ್ಷೆಯ ಯೋಜನೆ ಉಜ್ವಲ ಕಳೆದ ಬಾರಿ ಜಾರಿಯಾಗಿತ್ತು. ಉಜ್ವಲ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಉಚಿತ ಗ್ಯಾಸ್ ವಿತರಣೆ ಮಾಡಲಾಗುತ್ತಿತ್ತು. ಉಜ್ವಲ ಯೋಜನೆ ಅಡಿಯಲ್ಲಿ 8 ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ್ ಕನೆಕ್ಷನ್ ನೀಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

gas cylinder image 5 1

07. ಇಫಿಎಫ್: ಮಹಿಳಾ ಉದ್ಯೋಗಿಗಳ ಸಂಬಳದಲ್ಲಿ ಕಡಿತಗೊಳ್ಳುತ್ತಿದ್ದ ಇಪಿಎಫ್ ಪ್ರಮಾಣವನ್ನು 9% ನಿಂದ 8%ಕ್ಕೆ ಇಳಿಸಲಾಗಿದೆ. ಇಪಿಎಫ್ ಕಡಿತದ ಪ್ರಮಾಣ ಕಡಿಮೆ ಆಗುವುದರಿಂದ ಮಹಿಳೆ ಉದ್ಯೋಗಿಗಳ ಕೈಗೆ ಹೆಚ್ಚು ನಗದು ಬರಲಿದೆ. ಹೊಸ ಉದ್ಯೋಗಸ್ಥರಿಗೆ ಸಂಬಳದಲ್ಲಿ ಕಡಿತಗೊಳ್ಳುವ ಇಪಿಎಫ್ ಪ್ರಮಾಣವನ್ನು 12%ಕ್ಕೆ ಹೆಚ್ಚಿಸಲಾಗಿದೆ.

women image

08. ರೈಲ್ವೆ: ರೈಲ್ವೆ ಸಾರಿಗೆಯನ್ನು ಮೀಟರ್ ಗೇಜ್‍ನ್ನು ಬ್ರಾಡ್ ಗೇಜ್ ಗೆ ಬದಲಾಯಿಸುವ ಗುರಿಯನ್ನು ಹೊಂದಿದೆ. 25 ಸಾವಿರ ರೈಲ್ವೇ ನಿಲ್ದಾಣಗಳಲ್ಲಿ ಎಕ್ಸಲೇಟರ್ ಅಳವಡಿಕೆ, 600 ರೈಲ್ವೇ ನಿಲ್ದಾಣಗಳ ಆಧುನೀಕರಣ, 90ಕಿಮೀ ವೇಗದಲ್ಲಿ ಚಲಿಸುವ ರೈಲು ಮಾರ್ಗದಲ್ಲಿ ಡಬಲ್ ಲೈನ್ ನಿರ್ಮಾಣ ಮಾಡಲಾಗುವುದು. ಮುಂಬೈನ ಲೋಕಲ್ ರೈಲುಗಳ ಸಂಖ್ಯೆಯಲ್ಲಿ ಏರಿಕೆ. ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ 17 ಸಾವಿರ ಕೋಟಿ ರೂ. ನೀಡಲಾಗುತ್ತಿದೆ

railway

09. ಗ್ರಾಮ ಪಂಚಾಯ್ತಿ: ದೇಶದ 1 ಲಕ್ಷ ಗ್ರಾಮ ಪಂಚಾಯ್ತಿಗಳಿಗೆ ಇಂಟರ್ ನೆಟ್ ಸಂಪರ್ಕ. ಎಲ್ಲ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾದಲ್ಲಿ ಇ-ಪೇಮೆಂಟ್ ಅಳವಡಿಕೆ. ದೇಶದ ಗಡಿ ಪ್ರದೇಶಗಳಲ್ಲಿ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು.

Budegt PIB gfx 3

Budegt PIB gfx 4

Budegt PIB gfx 1

BUDGET PIB 2

BUDGET PIB 3

Budegt PIB gfx 9

BUDGET PIB 4

BUDGET PIB 5

BUDGET PIB 6

Budegt PIB gfx 8

BUDGET PIB 7

BUDGET PIB 8

Budegt PIB gfx 5

Budegt PIB gfx 2

Budegt PIB gfx 7

Budegt PIB gfx 6

BUDGET PIB 9

BUDGET PIB 10

Share This Article
Leave a Comment

Leave a Reply

Your email address will not be published. Required fields are marked *