ಮುಂಬೈ: ನೆರೆಮನೆಯ ವ್ಯಕ್ತಿ ಚಾಕುವಿನಿಂದ ಹಲ್ಲೆ ನಡೆಸಿದ ಪರಿಣಾಮ ಕುಟುಂಬವೊಂದರ ಇಬ್ಬರು ಮೃತಪಟ್ಟಿದ್ದು, ಮೂವರು ಮಕ್ಕಳು ಸೇರಿದಂತೆ ನಾಲ್ವರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಭಿವಾಂಡಿ ಬಳಿ ನಡೆದಿದೆ.
ಕಮ್ರುಜ್ಮಾ ಅನ್ಸಾರಿ (42), ಇಮ್ತಿಯಾಜ್ ಮಹಮ್ಮದ್ ಜಬರ್ ಖಾನ್ (35) ಹತ್ಯೆಯಾದವರು. ಕುಟುಂಬದ ಉಳಿದ ನಾಲ್ವರು ಸದಸ್ಯರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ತಾನು ಯಾರನ್ನು ಕೊಲ್ಲುತ್ತಿದ್ದೇನೆ ಎಂದು ಸಾವು ಯಾಕೆ ಕೇರ್ ಮಾಡುವುದಿಲ್ಲ: ರಾಮ್ ಗೋಪಾಲ್ ವರ್ಮಾ
ಕ್ಷುಲ್ಲಕ ವಿಚಾರಕ್ಕೆ ಪರಸ್ಪರರಲ್ಲಿ ಜಗಳವಾಗಿ ಈ ಘಟನೆ ನಡೆದಿದೆ. ಆರೋಪಿ ಮಹಮ್ಮದ್ ಅನ್ಸಾರಿ ಹಾಖ್ ಲುಕ್ಮನ್ ಅನ್ಸಾರಿ (45)ಯನ್ನು ಬಂಧಿಸಲಾಗಿದೆ ಎಂದು ಶಾಂತಿನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಘಟನೆಗೂ ಮುನ್ನ ಕೆಲ ದಿನಗಳಿಂದ ಹಿಂದೆ ಹಲ್ಲೆಗೊಳಗಾದ ಕುಟುಂಬದ ಸದಸ್ಯರೊಬ್ಬರು, ಆರೋಪಿಯ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ಇದರಿಂದ ಕುಪಿತಗೊಂಡು ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಚೆನ್ನೈನಲ್ಲಿ ಹುಟ್ಟಿ ಕನ್ನಡನಾಡಲ್ಲಿ ಬೆಳೆದ ಪವರ್ ಸ್ಟಾರ್ ಲೈಫ್ ಜರ್ನಿ ಇಲ್ಲಿದೆ
ಅವರ ಮೇಲೆ ಹಲ್ಲೆ ನಡೆಸಲು ಚಾಕು ಹಿಡಿದು ಬಂದ ಆರೋಪಿಯು ಮನೆ ಹೊರಗಡೆ ನಿಂತಿದ್ದ ಕಮ್ರುಜಮ ಅನ್ಸಾರಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ತಡೆಯಲು ಬಂದ ಇಮ್ತಿಯಾಜ್ ಖಾನ್ ಮೇಲೂ ಚಾಕುವಿನಿಂದ ದಾಳಿ ನಡೆಸಿದ್ದಾನೆ. ತೀವ್ರ ಗಾಯಗೊಂಡಿದ್ದರಿಂದ ಇಬ್ಬರೂ ಸ್ಥಳದಲ್ಳೇ ಮೃತಪಟ್ಟಿದ್ದಾರೆ. ಇದೇ ವೇಳೆ ಕುಟುಂಬದ ಉಳಿದ ನಾಲ್ವರ ಮೇಲೂ ಹಲ್ಲೆ ನಡೆಸಿದ್ದಾನೆ.