ಗುಡ್‍ನ್ಯೂಸ್.. ಹೃದಯದ ಸ್ಟೆಂಟ್ ಬಳಿಕ ಮೊಣಕಾಲಿನ ಕಸಿ ಬೆಲೆ ಭಾರೀ ಇಳಿಕೆ

Public TV
2 Min Read
Knee replacement modi

ನವದೆಹಲಿ: ಆರೋಗ್ಯ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ ಪ್ರಕಟವಾಗಿದ್ದು, ಮೊಣಕಾಲಿನ ಕಸಿ ಬೆಲೆಯನ್ನು ಇಳಿಕೆ ಮಾಡಲಾಗಿದೆ.

ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಅನಂತ್ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ವಿವರವನ್ನು ಪ್ರಕಟಿಸಿದ್ದು, ಇಂದಿನಿಂದಲೇ(ಆಗಸ್ಟ್ 16) ಈ ದರ ಜಾರಿಗೆ ಬರಲಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಔಷಧಿ ಪ್ರಾಧಿಕಾರವು(ಎನ್‍ಪಿಪಿಎ) ಮೊಣಕಾಲಿನ ಕಸಿ ಉಪಕರಣದ ಬೆಲೆಯನ್ನು 54,720 ರೂ.ಗೆ ಇಳಿಕೆ ಮಾಡಿದೆ. ಈ ಹಿಂದೆ ಇವುಗಳ ಬೆಲೆ 2.50 ಲಕ್ಷ ರೂ. ನಿಂದ 4.50 ಲಕ್ಷ ರೂ.ಇತ್ತು.

ದರ ನಿಗದಿ ಉಲ್ಲಂಘಿಸುವ ಆಸ್ಪತ್ರೆಗಳು, ವೈದ್ಯರ ವಿರುದ್ಧ ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಹೃದಯದ ಸ್ಟೆಂಟ್ ಬೆಲೆಯನ್ನು ಇಳಿಕೆ ಮಾಡಿದ ಬಳಿಕ ಕಸಿಗೆ ಬಳಸುವ ಉಪಕರಣದ ಬೆಲೆಯನ್ನು ಇಳಿಕೆ ಮಾಡಲಾಗಿದೆ. ಇಳಿಕೆ ಮಾಡಿದ್ದರಿಂದ 1,500 ಕೋಟಿ ರೂ. ಉಳಿಕೆಯಾಗಲಿದ್ದು, ಅಂದಾಜು 1.5 ಲಕ್ಷ ಮಂದಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು 71ನೇ ಸ್ವಾತಂತ್ರ್ಯ ದಿನಾಚರಣೆಯಂದು ಮೊಣಕಾಲು ಶಸ್ತ್ರಚಿಕಿತ್ಸೆಯ ಬೆಲೆಗಳನ್ನು ಇಳಿಸಲಾಗುವುದು ಎಂದು ಪ್ರಕಟಿಸಿದರು. ಈ ಘೋಷಣೆಯಾದ ಮರುದಿನವೇ ಬೆಲೆಗಳನ್ನು ಇಳಿಸಲಾಗಿದೆ.

ಯಾವುದಕ್ಕೆ ಎಷ್ಟು?
ಮೊಣಕಾಲಿನ ಕಸಿ ಉಪಕರಣದ ಬೆಲೆಯನ್ನು 54,720 ರೂ.ಗೆ ಇಳಿಕೆ ಮಾಡಿದೆ. ಈ ಹಿಂದೆ ಇವುಗಳ ಬೆಲೆ 2.50 ಲಕ್ಷ ರೂ. ನಿಂದ 4.50 ಲಕ್ಷ ರೂ.ಇತ್ತು. ಟೈಟಾನಿಯಂ ಅಕ್ಸಿಡೈಸ್ಡ್ ಝಿಂಕೋನಿಯಂ ಉಪಕರಣಕ್ಕೆ 2.50 ಲಕ್ಷ ರೂ. ನಿಂದ 4.50 ಲಕ್ಷ ರೂ. ವೆಚ್ಚವಾಗುತಿತ್ತು. ಈಗ 76, 600 ರೂ. ನಿಗದಿ ಯಾಗಿದೆ.

ಬ್ರೈನ್ ಟ್ಯೂಮರ್, ಕ್ಯಾನ್ಸರ್ ರೋಗಚ ಚಿಕಿತ್ಸೆಗೆ ಬಳಸುವ ವಿಶೇಷ ಕಸಿ ಉಪಕರಣಕ್ಕೆ 1,13,950 ರೂಪಾಯಿ ನಿಗದಿಯಾಗಿದೆ. ಸದ್ಯ ಇವುಗಳ ಮಾರುಕಟ್ಟೆ ಬೆಲೆ 2.75 ಲಕ್ಷದಿಂದ 6 ಲಕ್ಷ ರೂಪಾಯಿ ಇತ್ತು. ಕೋಬಾಲ್ಟ್ ಕ್ರೋಮಿಯಂ ಮೊಣಕಾಲು ಕಸಿ ಉಪಕರಣಕ್ಕೆ 54,720 ರೂಪಾಯಿ ನಿಗದಿಯಾಗಿದ್ದು, ಈ ಹಿಂದೆ 1,58,324 ರೂ. ಇತ್ತು.

ಹೃದಯದ ಸ್ಟೆಂಟ್ ಬೆಲೆ ಇಳಿಸಿತ್ತು:
ಈ ವರ್ಷದ ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರ ಹೃದಯಕ್ಕೆ ಅಳವಡಿಸುವ ಕೊರೊನರಿ ಸ್ಟೆಂಟ್‍ಗಳ ದರವನ್ನು ಶೇ.80ರಷ್ಟು ಇಳಿಸಿತ್ತು. ಇದರಿಂದಾಗಿ 45,000 ರೂ. ಬೆಲೆಗೆ ಮಾರಾಟವಾಗುತ್ತಿದ್ದ ಸ್ಟೆಂಟ್ ಬೆಲೆ 29,600 ರೂ.ಗೆ ಇಳಿಕೆಯಾಗಿತ್ತು.

implant devices price

implant devices price 2

 

 

Share This Article
Leave a Comment

Leave a Reply

Your email address will not be published. Required fields are marked *