ತುಮಕೂರು: ಬಸವಣ್ಣನವರ (Basavanna) ತತ್ವಗಳು ಜಾರಿ ಆಗಿದ್ದರೆ ಧರ್ಮಗಳ ನಡುವೆ ಈ ದ್ವೇಷ ಇರುತ್ತಿರಲಿಲ್ಲ ಎಂದು ಸಚಿವ ಕೆ.ಎನ್ ರಾಜಣ್ಣ (K.N Rajanna), ಬಿಜೆಪಿ (BJP) ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಸ್ವಾಮೀಜಿಗಳ ನಿರ್ದೇಶನದ ಮೇರೆಗೆ ನಾನು ಮಾತನಾಡುತ್ತಿದ್ದೇನೆ. 12 ನೇ ಶತಮಾನದಲ್ಲಿ ಬಸವಣ್ಣ ಅವರು ಮಾಡಿದ ಕೆಲಸವನ್ನು ಈಗ ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ. ಹಾಗಂತ ಹಿಂದೆ ಯಡಿಯೂರಪ್ಪನವರು ಏನೂ ಮಾಡಿಲ್ಲ ಅಂತ ಅರ್ಥವಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಹೊಗಳಿದ್ದಾರೆ. ಇದನ್ನೂ ಓದಿ: ರಾಮಮಂದಿರ ಪ್ರಾಣ ಪ್ರತಿಷ್ಠೆ; ಅಯೋಧ್ಯೆಗೆ ಖಾಸಗಿ ವಿಮಾನದಲ್ಲಿ ಹೊರಟ ದೊಡ್ಡಗೌಡ್ರ ಕುಟುಂಬ
Advertisement
Advertisement
ಸರ್ಕಾರಿ ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರ ಇಟ್ಟು, ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು ಸಿದ್ದರಾಮಯ್ಯನವರು. ಕಟ್ಟಕಡೆಯ ಜನರಿಗೂ ತಲುಪುವಂತೆ ಮಾಡಿದ್ದು ಅವರೇ ಎಂದು ತಿಳಿಸಿದ್ದಾರೆ. ಇವತ್ತು ಸಮಾಜದಲ್ಲಿ ಇರುವ ಪರಸ್ಪರ ಧರ್ಮಗಳ ನಡುವೆ ದ್ವೇಷದ ವಾತಾವರಣ ಮುಂದುವರೆದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Advertisement
Advertisement
ಯಡಿಯೂರಪ್ಪ ಕುರಿತು ಮಾತನಾಡಿ, ಯಡಿಯೂರಪ್ಪನವರು ರೈತರ ಬಗ್ಗೆ ಕೆಲಸ ಮಾಡಿದ್ದಾರಾ? ರೈತರ ಸಾಲ ಮನ್ನಾ ಮಾಡುವಾಗ ಅವರು ಆಡಿದ ಮಾತು ನನಗೆ ಇಷ್ಟ ಆಗಿಲ್ಲ. ನೋಟ್ ಪ್ರಿಂಟ್ ಮಿಷನ್ ಇಟ್ಟುಕೊಂಡಿದ್ದೀನಾ ಎಂದು ಹೇಳಿದ್ದರು. ಆದರೆ ಆವತ್ತಿನ ಪರಿಸ್ಥಿತಿ ಹಾಗೆ ಇತ್ತೇನೋ ಎಂದು ವೇದಿಕೆಯ ಮೇಲೆಯೇ ರಾಜಣ್ಣ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ಸ್ಯಾಟಲೈಟ್ ಚಿತ್ರ ಬಿಡುಗಡೆ ಮಾಡಿದ ಇಸ್ರೋ