ದಾವಣಗೆರೆ: ಕಾಂಗ್ರೆಸ್‌ನವರೇ ದ್ವೇಷ ಸಾಧಿಸಿ ಶತ್ರುವನ್ನ ಬಲಿಷ್ಠ ಮಾಡಿದ್ದಾರೆ ಎಂದು ಸಚಿವ ಕೆ.ಎನ್ ರಾಜಣ್ಣ (KN Rajanna) ಹೈಕಮಾಂಡ್ ವಿರುದ್ಧ ವಾಗ್ದಾಳಿ ನಡೆಸಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಶೂನ್ಯ ಸಂಪಾದಿಸಿದ ಕುರಿತು ವಿಚಾರವಾಗಿ, ಏನೇ ಇದ್ದರೂ ತಪ್ಪನ್ನೇ ಮುಂದಿಟ್ಟುಕೊಂಡು ಶತ್ರುವನ್ನು ಬಲಿಷ್ಠ ಮಾಡಬಾರದು. ಈಗ ದೆಹಲಿಯಲ್ಲಿ ಆಗಿದೆ, ಹಿಂದೆ ಹರಿಯಾಣದಲ್ಲಿ ಆಗಿತ್ತು. ಇಬ್ಬರಿಗೂ ಜಂಭ ಇದೆ. ಹೀಗಾಗಿ ಸೋಲಾಗಿದೆ. ರಾಷ್ಟ್ರ ರಾಜಕಾರಣವನ್ನು ಅರಿತು ಶತ್ರುವನ್ನು ಸೋಲಿಸಬೇಕು. ಜಾತ್ಯಾತೀತರು ಒಂದಾಗಿ, ಜಾತಿಯನ್ನು ಸೋಲಿಸಬೇಕು ಎಂದು ಕಿಡಿಕಾರಿದರು.ಇದನ್ನೂ ಓದಿ: ಜಮ್ಮು-ಕಾಶ್ಮೀರ | ಪ್ರಸಿದ್ಧ ಸೋನಾಮಾರ್ಗ್ ಮಾರುಕಟ್ಟೆಯಲ್ಲಿ ಭಾರೀ ಬೆಂಕಿ ಅವಘಡ
Advertisement
Advertisement
ಮತ ವಿಭಜನೆಯಿಂದ ಬಿಜೆಪಿ ಗೆದ್ದಿದೆ. ಇಲ್ಲಿ ರಾಜಕೀಯ ಜಂಜಾಟವಿದೆ. ನಮ್ಮವರೇ ದ್ವೇಷ ಸಾಧಿಸುಕೊಂಡು ಶತ್ರುವನ್ನ ಬಲಿಷ್ಟ ಮಾಡಿದ್ದಾರೆ. ಯಾರೇ ಸಿಎಂ ಆದರೂ ಅಂತಿಮ ತೀರ್ಮಾನ ಹೈಕಮಾಂಡ್‌ನದ್ದಾಗಿರುತ್ತದೆ. ಹೈಕಮಾಂಡ್ ನಿರ್ಧಾರಕ್ಕೆ ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ ಎಂದರು.
Advertisement
ಇನ್ನೂ ಎಸ್‌ಸಿ, ಎಸ್‌ಟಿ ಸಮಾವೇಶದಿಂದ ಧ್ವನಿ ಇಲ್ಲದ ಸಮುದಾಯಗಳಿಗೆ ಅರಿವು ಮೂಡಿಸಬೇಕು. ಅಧಿಕಾರ ಹಂಚಿಕೆ, ಸಮುದಾಯ ಬಲಿಷ್ಟ ಮಾಡುವುದು ಸಮಾವೇಶದ ಉದ್ದೇಶವಾಗಿದೆ. ಕಾಂಗ್ರೆಸ್ ನೇತೃತ್ತದಲ್ಲಿ ಎಸ್‌ಸಿ, ಎಸ್‌ಟಿ ಸಮಾವೇಶ ಮಾಡುತ್ತೇವೆ. ರಾಜಕೀಯ ವಂಚಿತ ಸಮುದಾಯಗಳಿಗೆ ಅನುಕೂಲ ಮಾಡುವ ಉದ್ದೇಶವಿದೆ. ಸಮಾವೇಶ ಮಾಡಬೇಕು ಅಂದುಕೊಂಡಿದ್ದೀವಿ ಮಾಡುತ್ತೇವೆ. ನಮ್ಮ ಯಾರು ಬಿಡುತ್ತಿಲ್ಲ ಎನ್ನುವುದು ಸುಳ್ಳು. ಮಾರ್ಚ್ 7ಕ್ಕೆ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಆಗಲಿದೆ. ಜನರಿಗೆ ಅನುಕೂಲ, ಒಳ್ಳೆಯ ಬಜೆಟ್ ಕೊಡುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮರು. ಎಲ್ಲಾ ಜನರ ವಿಶ್ವಾಸವನ್ನು ತೆಗೆದುಕೊಂಡು ಬಜೆಟ್ ರೂಪಿಸುತ್ತಾರೆ ಎಂದು ಹೇಳಿದರು.
Advertisement
ಕಾಂಗ್ರೆಸ್‌ಗೆ ಸೋಲಾಗಿದ್ದೇಕೆ?
2013ರ ಚುನಾವಣಾ ವೈಫಲ್ಯ ತಿದ್ದಿಕೊಳ್ಳದೇ ಪಕ್ಷ ಬಲವರ್ಧನೆಯಲ್ಲಿ ಹಾಗೂ ಆಪ್ ಪ್ರಚಾರದ ನಡುವೆ ಭಿನ್ನವಾಗಿ ಗುರುತಿಸಿಕೊಳ್ಳುವಲ್ಲಿ ವಿಫಲರಾದರು. ಇನ್ನೂ ಪರಿಸರ ಮಾಲಿನ್ಯ ಸೇರಿದಂತೆ ದೆಹಲಿಯ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸದಿರುವುದು. ಗ್ಯಾರಂಟಿ ಹೊರತಾಗಿ ಬೇರೆ ಯಾವುದೇ ರೀತಿಯ ಶ್ರಮ ಪಡದಿರುವುದು ಸೋಲಿಗೆ ಮುಖ್ಯ ಕಾರಣಗಳಾದವು ಎಂದು ವಿಶ್ಲೇಷಿಸಲಾಗಿದೆ.ಇದನ್ನೂ ಓದಿ: ಆಪ್ ಸೋಲಿನ ಬೆನ್ನಲ್ಲೇ ದೆಹಲಿ ಸಿಎಂ ಸ್ಥಾನಕ್ಕೆ ಅತಿಶಿ ರಾಜೀನಾಮೆ