– ವಿಪಕ್ಷಗಳಿಂದ ತೀವ್ರ ಆಕ್ಷೇಪ, ಸಚಿವ ಸ್ಥಾನದಲ್ಲಿ ಕೂರದಂತೆ ಬಿಗಿ ಪಟ್ಟು
ಬೆಂಗಳೂರು: ಸಚಿವ ಸ್ಥಾನಕ್ಕೆ ಕೆ.ಎನ್ ರಾಜಣ್ಣ (KN Rajanna) ರಾಜೀನಾಮೆ ನೀಡಲು ಮುಂದಾಗಿದ್ದಾರೆ ಅನ್ನೋ ವಿಚಾರ ಸದನದಲ್ಲೂ ಭಾರೀ ಗದ್ದಲಕ್ಕೆ ಕಾರಣವಾಗಿದೆ. ಆಡಳಿತ ಪಕ್ಷ ಹಾಗೂ ವಿಪಕ್ಷ ನಾಯಕರ ನಡುವೆ ಜೋರು ಜಟಾಪಟಿ ನಡೆದಿದೆ. ಈ ವೇಳೆ ರಾಜೀನಾಮೆ ಕೊಟ್ಟು ಸಚಿವ ಸ್ಥಾನದಲ್ಲಿ ಕೂರಬಾರದು ಅಂತ ವಿಪಕ್ಷ ನಾಯಕರು (Opposition leaders) ಪಟ್ಟು ಹಿಡಿದಿದ್ದಾರೆ. ಆದಾಗ್ಯೂ ಸ್ಪಷ್ಟ ಉತ್ತರ ಕೊಡದ ರಾಜಣ್ಣ ಸಿಎಂ ಬಂದ ಬಳಿಕ ತಿಳಿಸುತ್ತಾರೆಂದು ಜಾರಿಕೊಂಡಿದ್ದಾರೆ.
ಸದನದಲ್ಲಿ ಕೋಲಾಹಲ
ಮಧ್ಯಾಹ್ನದ ಅಧಿವೇಶನ ಪುನರಾರಂಭ ಆಗುತ್ತಿದ್ದಂತೆ ವಿಪಕ್ಷಗಳು ರಾಜಣ್ಣರ ರಾಜೀನಾಮೆ ವಿಷಯ ಪ್ರಸ್ತಾಪಿಸಿದವು. ನನಗೆ ತಿಳಿದ ಪ್ರಕಾರ ರಾಜಣ್ಣ ರಾಜೀನಾಮೆ ಕೊಟ್ಟಿದ್ದಾರೆ. ಈ ಬಗ್ಗೆ ಸ್ಪಷ್ಟಪಡಿಸಬೇಕು. ಅವರು ರಾಜೀನಾಮೆ ನೀಡಿದ್ದರೆ ಆ ಸ್ಥಳದಲ್ಲಿ ಕೂತಿರುವುದು ಸರಿಯಲ್ಲ ಎಂದು ವಿಪಕ್ಷ ನಾಯಕ ಹಾಗೂ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈಗ ನಾವು ಅವರನ್ನ ಏನಂತ ಸಂಬೋಧಿಸಬೇಕು ಎಂದು ಶಾಸಕ ಸುನಿಲ್ ಕುಮಾರ್ ಪ್ರಶ್ನಿಸಿದ್ರು. ಇದನ್ನೂ ಓದಿ: ಸಚಿವ ಸ್ಥಾನಕ್ಕೆ ಕೆಎನ್ ರಾಜಣ್ಣ ರಾಜೀನಾಮೆ
ವಿಪಕ್ಷ ನಾಯಕ ಅಶೋಕ್ (R Ashok) ಮಾತನಾಡ್ತಾ, ರಾಜೀನಾಮೆ ಕೊಟ್ಟು ಹೇಗೆ ಸಚಿವ ಸ್ಥಾನದಲ್ಲಿ ಕೂರ್ತಾರೆ? ನಮಗೆ ಗೊತ್ತಿದೆ ಅವರು ರಾಜೀನಾಮೆ ಕೊಟ್ಟಿದ್ದಾರೆ. ಏನು ಅಂತ ಮೊದಲು ಹೇಳಲಿ, ರಾಜಣ್ಣಗೆ ನಾಚಿಕೆ ಆಗಲ್ವಾ? ರಾಜಣ್ಣ ನೀನು ಪಾಕಿಸ್ತಾನದಿಂದ ಬಂದಿದೀಯಾ? ಒಂದು ಉತ್ತರ ಕೊಡಲು ಆಗಲ್ವಾ? ನಿಮಗೆ ನಾಚಿಗೆ ಆಗಲ್ವಾ? ಅಂತಲೂ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಸತ್ಯ ಹೇಳಿದ್ದಕ್ಕೆ ರಾಜಣ್ಣರ ರಾಜೀನಾಮೆ ಕೇಳಿದ್ದಾರೆ – ಸರ್ಕಾರ ವಿರುದ್ಧ ಆರ್. ಅಶೋಕ್ ವಾಗ್ದಾಳಿ
ಮೌನ ಮುರಿದ ರಾಜಣ್ಣ
ವಿಪಕ್ಷಗಳ ಜಟಾಪಟಿ ಜೋರಾಗುತ್ತಿದ್ದಂತೆ ಮೌನ ಮುರಿದ ರಾಜಣ್ಣ, ಸದನದಲ್ಲೇ ತಿರುಗೇಟು ನೀಡಿದರು. ನನಗೆ ಕಾನೂನು ಸಚಿವರು ಮಾತನಾಡಬೇಡ ಎಂದಿದ್ದಾರೆ. ಅಶೋಕ್ ಅವ್ರೇ ಕೀಳು ಮಟ್ಟದ ಮಾತು ಬೇಡ. ರಾಜೀನಾಮೆ ಕೊಟ್ಟಿದ್ದೇನೋ ಬಿಟ್ಟಿದ್ದೇನೋ ಬಿಡಿ. ಸಿಎಂ ಅದಕ್ಕೆಲ್ಲ ಉತ್ತರ ಕೊಡುತ್ತಾರೆ. ನಾಚಿಗೆ ಇಲ್ವಾ, ನಾಚಿಕೆ ಇಲ್ವಾ ಅಂತ ಕೇಳ್ತೀರಲ್ಲಾ, ನನಗೆ ನಾಚಿಕೆ ಆಗೋದಲ್ಲ, ಕೀಳುಮಟ್ಟದ ಮಾತುಗಳನ್ನಾಡುವ ನಿಮಗೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದ್ರು. ಇದನ್ನೂ ಓದಿ: ರಾಜಣ್ಣ ರಾಜೀನಾಮೆ| ಎರಡು ಕೈ ಮುಗಿದು ಒಳಗೆ ಹೋದ ಡಿಕೆಶಿ