ತುಮಕೂರು: ಬ್ರೇಕ್‌ಫಾಸ್ಟ್ ಮೀಟಿಂಗ್ (Breakfast Meeting) ಬೀಗತನ ಮಾಡಿದಂತೆ ಎಂದು ಮಾಜಿ ಸಚಿವ ಕೆಎನ್ ರಾಜಣ್ಣ (KN Rajanna) ವ್ಯಂಗ್ಯವಾಡಿದ್ದಾರೆ.
ಸಿಎಂ-ಡಿಸಿಎಂ ಬ್ರೇಕ್‌ಫಾಸ್ಟ್ ಮೀಟಿಂಗ್ ವಿಚಾರವಾಗಿ ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೊದ್ಲು ಒಂದು ಕಡೆ ಹೆಣ್ಣು ನೋಡಲು ಬರುತ್ತಾರೆ. ಆಮೇಲೆ ಗಂಡು ನೋಡೋಕೆ ಬರುತ್ತಾರೆ. ಈ ಬ್ರೇಕ್‌ಫಾಸ್ಟ್ ಮೀಟಿಂಗ್ ಆ ರೀತಿಯಾಗಿದೆ. ಇರೋದು ಏನಿದಿಯೋ ಅದೇ ಮುಂದುವರಿದುಕೊಂಡು ಹೋಗುತ್ತದೆ. ಯಾವುದೇ ರಿವರ್ಸ್ ಆಗಲ್ಲ ಎಂದರು. ಇದನ್ನೂ ಓದಿ: ಪಂಚ ರಾಜ್ಯಗಳ ಚುನಾವಣೆ ಮೇಲೆ ಪ್ರಧಾನಿ ಕಣ್ಣು – ಪ.ಬಂಗಾಳ ಸಂಸದರ ಜೊತೆ ಮೋದಿ ಸಭೆ
ಈ ಹಳ್ಳಿಗಳಲ್ಲಿ ಶಾಂತಿ ಆಗಬೇಕು ಅಂದರೆ ಕುರಿ, ಕೋಳಿ ಬಲಿ ಕೊಡುತ್ತಾರೆ. ಆ ರೀತಿಯಾಗಿ ಎರಡೂ ಮನೆಯಲ್ಲಿ ಆಗಿದೆ.ಬದಲಾವಣೆ ಇಲ್ಲ ಅಂತ ನಾವು ಅಂದುಕೊಂಡಿದ್ದೇವೆ. ಬದಲಾವಣೆ ಇದ್ರೆ ಹೈಕಮಾಂಡ್ ಹೇಳುತ್ತಾರೆ. ಸಚಿವ ಸಂಪುಟ ವಿಸ್ತರಣೆ ಬೆಳಗಾವಿ ಅಧಿವೇಶನದ ನಂತರ ಆಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಸಂಚಾರ್ ಸಾಥಿ ಆ್ಯಪ್ ವಿವಾದದ ನಡುವೆಯೇ ಹತ್ತುಪಟ್ಟು ಹೆಚ್ಚಾಯ್ತು ಡೌನ್‌ಲೋಡ್
ದಲಿತ ಸಿಎಂ ಪರಮೇಶ್ವರ್ ಆಗಬೇಕೇಂಬ ಒತ್ತಾಯ ವಿಚಾರವಾಗಿ ಪ್ರತಿಕ್ರಿಯಿಸಿ, ಅನಿವಾರ್ಯವಾಗಿ ಸಿದ್ದರಾಮಯ್ಯನವರನ್ನ ಪದಚ್ಯುತಿ ಮಾಡಿದರೆ ದಲಿತ ಸಿಎಂ ಪರಮೇಶ್ವರ್ ಆಗಬೇಕು ಎಂದು ನುಡಿದರು. ಇನ್ನು ಬಿಜೆಪಿ ಸಚಿವರನ್ನ ರಾಜಣ್ಣ ಪುತ್ರ ರಾಜೇಂದ್ರ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಕ್ರಿಬ್ಕೋದಲ್ಲಿ ರಾಜೇಂದ್ರ ಸೀನಿಯರ್ ನಿರ್ದೇಶಕ ಇದ್ದಾನೆ. ಕ್ರಿಬ್ಕೋ ಇಸ್ಕೋದಲ್ಲಿ ಆರ್ಟಿಫಿಶಿಯಲ್ ಮೆನ್ಯೂರ್ ಮಾಡಬೇಕಾಗಿದೆ. ಆ ಎರಡೂ ಸಮಿತಿಗಳು ಏಷ್ಯಾ ಖಂಡದಲ್ಲಿ ದೊಡ್ಡ ಸಹಕಾರಿ ಸಂಸ್ಥೆಗಳು. ಇದೆಲ್ಲವೂ ಕೇಂದ್ರ ಸಹಕಾರಿ ಸಚಿವರ ಅಡಿಯಲ್ಲಿ ಬರುತ್ತವೆ. ಇದರ ಬಗ್ಗೆ ಚರ್ಚೆಗಳಿದ್ದಾಗ ಅವರೊಬ್ಬರೇ ಅಲ್ಲ, ಇತರೆ ಎಲ್ಲಾ ನಿರ್ದೇಶಕರು ಹೋಗುತ್ತಾರೆ. ಅಮಿತ್ ಶಾ ಕೂಡಾ ಸಭೆ ಕರೆಯುತ್ತಿರುತ್ತಾರೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸೋದು ಬೇಡ. ದೆಹಲಿಗೆ ಹೋಗಿ ಬಂದ ಶಾಸಕರ ಪ್ರಯತ್ನವೂ ಸಫಲವೂ ಆಗಿಲ್ಲ ವಿಫಲವೂ ಆಗಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಎಲ್ಲವೂ ತಿಳಿಯಾಗಿದೆ: ಪರಮೇಶ್ವರ್

