ಹಾಸನ: ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಮುಖ್ಯಮಂತ್ರಿ ಆಗೋದಕ್ಕೆ ಅರ್ಹರಾಗಿದ್ದಾರೆ. ಆದ್ರೆ ನಮ್ಮ ರಾಜ್ಯದಲ್ಲಿ 5 ವರ್ಷಗಳ ಕಾಲ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯಬೇಕೆನ್ನುವುದು ಬಹುಜನರ ಬಯಕೆ ಎಂದು ಸಚಿವ ಕೆ.ಎನ್.ರಾಜಣ್ಣ (KN Rajanna) ತಿಳಿಸಿದ್ದಾರೆ.
ಹಾಸನದಲ್ಲಿ ಸದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಸಿಎಂ (Chief Minister) ಆಗಬೇಕು ಅನ್ನೋದರಲ್ಲಿ ತಪ್ಪೇನಿದೆ. ಮನುಷ್ಯರ ಅನಿಸಿಕೆಗಳು ಇದ್ದೇ ಇರುತ್ತೆ. ಒಬ್ಬೊಬ್ಬರಿಗೆ ಒಂದೊಂದು ಹುದ್ದೆಯಲ್ಲಿ ಆಸೆ ಜಾಸ್ತಿ ಇರಬಹುದು, ಒಂದರಲ್ಲಿ ಕಡಿಮೆ ಇರಬಹುದು. ಹಾಗಾಗಿ ಅವರು ಹೇಳೋದ್ರಲ್ಲಿ ತಪ್ಪೇನಿಲ್ಲ. ಮುಖ್ಯಮಂತ್ರಿ ಆಗಲು ಶಿವಕುಮಾರ್‌ಗೂ ಕೂಡ ಎಲ್ಲಾ ಅರ್ಹತೆ ಇದೆ. ಅವರು ಒಳ್ಳೆಯ ಸಂಘಟನೆ ಮಾಡ್ತಾರೆ. ಮೊದಲಿನಿಂದಲೂ ಪಕ್ಷದಲ್ಲಿ ನಿಷ್ಠಾವಂತರಿದ್ದಾರೆ. ಮುಖ್ಯಮಂತ್ರಿ ಆಗುವಂತಹ ಅರ್ಹತೆ ಶಿವಕುಮಾರ್‌ಗೂ ಕೂಡ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬುದ್ಧಿವಂತ.. ಗಲ್ಫ್ ರಾಷ್ಟ್ರದಲ್ಲಿ ಒಳ್ಳೆ ಸಂಬಳದ ಕೆಲಸ ಬಿಟ್ಟು ಬಾಂಬ್ ಸ್ಫೋಟಿಸಿದ್ಯಾಕೆ; ತಲೆ ಕೆಡಿಸಿಕೊಂಡ ಪೊಲೀಸರು
ಕಾಂಗ್ರೆಸ್ ಪಕ್ಷದಲ್ಲಿ ಅದೇ ರೀತಿ ಅರ್ಹತೆ ಇರುವಂತಹವರು ಎರಡು ಡಜನ್ ಜನ ಇದ್ದಾರೆ. ಅವರು ಮುಖ್ಯಮಂತ್ರಿ ಆಗ್ತಾರೆ ಅಂದ್ರೆ ಸಂತೋಷ ಪಡುವುದರಲ್ಲಿ ನಾನು ಒಬ್ಬ. ಆದ್ರೆ ನಮ್ಮ ರಾಜ್ಯದಲ್ಲಿ 5 ವರ್ಷಗಳ ಕಾಲ ಸಿದ್ದರಾಮಯ್ಯ (Siddaramaiah) ಅವರು ಮುಖ್ಯಮಂತ್ರಿಯಾಗಿ ಮುಂದುವರೆಯಬೇಕೆನ್ನುವುದು ಬಹುಜನರ ಬಯಕೆ. ಬಹುತೇಕ ಶಾಸಕರ ಬಯಕೆಯೂ ಅದೇ ಇದೆ. ಆ ಬಯಕೆಯನ್ನು ನಾವು ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾರು ಅಪಘಾತ- ಸಹಾಯಕ್ಕಾಗಿ ಬಂದು ಎಣ್ಣೆ ಬಾಟ್ಲಿಯೊಂದಿಗೆ ಯುವಕರು ಎಸ್ಕೇಪ್
ಇದೇ ವೇಳೆ ಹೆಚ್.ಡಿ ಕುಮಾರಸ್ವಾಮಿ ಅಣೆ-ಪ್ರಮಾಣ ವಿಚಾರಕ್ಕೆ ಪ್ರತಿಕ್ರಿಯಿಸಿ, ಆಣೆ-ಪ್ರಮಾಣ ಮಾಡಿಕೊಳ್ಳುವವರು ಮಾಡಿಕೊಳ್ಳಲಿ ನಮ್ಮದೇನು ಅಡ್ಡಿ ಇಲ್ಲ. ನಮ್ಮ ಎಲೆಯಲ್ಲಿ ನೊಣ ಸತ್ತು ಬಿದ್ದಿದೆ, ಅವರ ಎಲೆಯಲ್ಲಿ ಹೆಗ್ಗಣ ಸತ್ತು ಬಿದ್ದಿದೆ. ಆದ್ರೆ ನೊಣದವರ ಬಗ್ಗೆ ಹೆಚ್ಚು ಪ್ರಸ್ತಾಪ ಮಾಡ್ತಾರೆ. ಆದ್ದರಿಂದ ಸಂಯಮ ಇರುವುದು ಒಳ್ಳೆಯದು, ಏಕೆಂದರೆ ರಾಜಕಾರಣದಲ್ಲಿ ಯಾರೂ ಸತ್ಯಹರಿಶ್ಚಂದ್ರರಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ; ಹಮಾಸ್ ಕಮಾಂಡರ್ ಸೇರಿ 60ಕ್ಕೂ ಹೆಚ್ಚು ಮಂದಿ ಬಲಿ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]