Connect with us

Districts

ಝೀರೋ ಟ್ರಾಫಿಕಲ್ಲಿ ಓಡಾಡಿದ್ದ ಪರಮೇಶ್ವರ್ ಪರಿಸ್ಥಿತಿ ಈಗ ಹೇಗಾಗಿದೆ ನೋಡಿ- ಕೆ.ಎನ್.ರಾಜಣ್ಣ ವ್ಯಂಗ್ಯ

Published

on

-ಪೊಲೀಸ್ರು ಇಲ್ಲ, ನೊಣ ಹೊಡೆಯೋರೂ ಇಲ್ಲ

ತುಮಕೂರು: ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಮಾಜಿ ಡಿಸಿಎಂ ಜಿ.ಪರಮೇಶ್ವರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದು, ಹಿಂದೂ ಮುಂದೂ ಪೊಲೀಸರನ್ನು ಇಟ್ಟಕೊಂಡು ಝೀರೋ ಟ್ರಾಫಿಕಲ್ಲಿ ತಿರುಗಾಡಿದ. ಈಗ ಅಧಿಕಾರ ಇಲ್ಲ ಪರಿಸ್ಥಿತಿ ಹೇಗಾಗಿದೆ ನೋಡಿ ವ್ಯಂಗ್ಯವಾಡಿದ್ದಾರೆ.

ಜಿಲ್ಲೆಯ ಕೊರಟಗೆರೆ ತಾಲೂಕಿನ ಎಲೆರಾಂಪುರ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ರೈತರಿಗೆ ಸಾಲ ನೀಡಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜಣ್ಣ, ಆ ಪುಣ್ಯಾತ್ಮನಿಗೆ ಕಷ್ಟದಲ್ಲಿದ್ದಾಗ ಸಹಾಯ ಮಾಡಿ ಶಾಸಕನಾಗಿ ಮಾಡಿದೆ. ಆತ ಗೆದ್ದು ಶಾಸಕನಾಗಿ ಡಿಸಿಎಂ ಆದ. ಹಿಂದೂ ಮುಂದೂ ಪೊಲೀಸರನ್ನು ಇಟ್ಟಕೊಂಡು ಝೀರೋ ಟ್ರಾಫಿಕಲ್ಲಿ ತಿರುಗಾಡಿದ. ಈಗ ಅಧಿಕಾರ ಇಲ್ಲ ಪರಿಸ್ಥಿತಿ ಹೇಗಾಗಿದೆ ನೋಡಿ. ಪೊಲೀಸರು ಹಿಂದೂ ಇಲ್ಲ ಮುಂದೂ ಇಲ್ಲ. ನೊಣ ಹೊಡಿಯೋರೂ ಇಲ್ಲ ಎಂದು ವ್ಯಂಗ್ಯವಾಡಿದರು.

ಝೀರೋ ಟ್ರಾಫಿಕ್ ಮತ್ತು ನಾನು ಕ್ಲಾಸ್ ಮೇಟ್ಸ್. ಒಂದೇ ಬೇಂಚಲ್ಲಿ ಕುಳಿತು ಕಲಿತವರು. ಹಾಗಾಗಿ ಅವನನ್ನು ಕೊರಟಗೆರೆಯಿಂದ ಗೆಲ್ಲಿಸಿಕೊಂಡು ಬಂದೇ. ಆತನಿಗೆ ಉಪಕಾರ ಸ್ಮರಣೆ ಇಲ್ಲ. ನಾನು ಅಧ್ಯಕ್ಷನಾಗಿದ್ದ ಡಿಸಿಸಿ ಬ್ಯಾಂಕನ್ನು ಸೂಪರ್ ಸೀಡ್ ಮಾಡುವ ಮೂಲಕ ನನ್ನ ಅಧಿಕಾರ ಕಿತ್ತುಕೊಳ್ಳುವ ಪಿತೂರಿ ಮಾಡಿದ್ದ ಎಂದು ಪರಮೇಶ್ವರ್ ಅವರ ಹೆಸರನ್ನು ಹೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನಾಯಕರನ್ನು ಲೂಟಿಕೋರರು ಎಂದ ರಾಜಣ್ಣ, ಈ ಎಲ್ಲಾ ಲೂಟಿಕೋರರು ಸಿದ್ದರಾಮಯ್ಯರಿಗೆ ಹೆಸರು ಬರುತ್ತದೆ ಎಂದು ಅವರ ಅನ್ನಭಾಗ್ಯ ಯೋಜನೆಯನ್ನು ಹೆಚ್ಚಾಗಿ ಪ್ರಚಾರ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

Click to comment

Leave a Reply

Your email address will not be published. Required fields are marked *