ಬೆಂಗಳೂರು: ಹಾಲಿನ ದರ ಏರಿಕೆ ಭೀತಿಯಲ್ಲಿದ್ದ ಜನತೆಗೆ ಸದ್ಯಕ್ಕೆ ಆ ಚಿಂತೆ ದೂರವಾಗುವ ಸಾಧ್ಯತೆ ಇದೆ. ಸರ್ಕಾರ ತಾತ್ಕಾಲಿಕ ರಿಲೀಫ್ ನೀಡುವ ಸಾಧ್ಯತೆ ಇದ್ದು, ದರ ಏರಿಕೆ ಮಾಡುವ ನಿರ್ಧಾರದಿಂದ ಹಿಂದೆ ಸರಿದಂತಿದೆ.
ಕಳೆದ ಕೆಲ ದಿನಗಳ ಹಿಂದಷ್ಟೇ ಸಿಎಂ (CM Siddaramaih) ಸಮಾವೇಶವೊಂದರಲ್ಲಿ ಬಹಿರಂಗವಾಗಿ ದರ ಏರಿಕೆ ಮಾಡುವ ಬಗ್ಗೆ ಸುಳಿವು ನೀಡಿದ್ದರು. ಅದು ಕೂಡ ಏರಿಕೆ ಕಂಡ ಹಣವನ್ನ ನೇರವಾಗಿ ರೈತರಿಗೆ ತಲುಪಿಸುವ ಬಗ್ಗೆ ಕೂಡ ಸುಳಿವು ಕೊಟ್ಟಿದ್ದರು. ಆ ಬೆನ್ನಲ್ಲೆ ಕೆಎಂಎಫ್ (KMF) ಕೂಡ ಏರಿಕೆ ಸಂಬಂಧ ಕೆಲ ಸಭೆಗಳನ್ನು ಮಾಡಿ ಏರಿಕೆಗೆ ಬೇಕಾದಂತ 2023ರ ಪ್ರಸ್ತಾವನೆ ಸಲ್ಲಿಕೆಗೂ ತಯಾರಿ ಮಾಡಿತ್ತು. ಈ ಬೆನ್ನಲ್ಲೆ ಸದ್ಯ ದರ ಏರಿಕೆ ಬೇಡ ಅನ್ನೋ ನಿರ್ಧಾರಕ್ಕೆ ಸರ್ಕಾರ ಬಂದಂತಿದ್ದು, ಈ ವರ್ಷ ಬಹುತೇಕ ಈ ಬಗ್ಗೆ ಯೋಚನೆ ಬೇಡ ಅನ್ನೋ ತೀರ್ಮಾನ ಮಾಡಿದೆಯಂತೆ. ಇದನ್ನೂ ಓದಿ: ನಾವು ಎಲ್ಲಿಯೂ, ಯಾವತ್ತೂ ಸಿಎಂ ಪದವಿ ಬಗ್ಗೆ ಚರ್ಚೆ ಮಾಡಿಲ್ಲ: ಸಚಿವ ಪರಮೇಶ್ವರ್
Advertisement
Advertisement
ಇದೇ ವರ್ಷ ಈಗಾಗಲೇ ಎರಡು ಬಾರಿ ಏರಿಕೆ ಕಂಡಿದ್ದ ಹಾಲಿನ ದರ, ಮತ್ತೆ ಏರಿಕೆಯಾದ್ರೆ ಹೇಗೆ ಅನ್ನೋ ಆತಂಕ ಗ್ರಾಹಕರಲ್ಲಿ ಮನೆ ಮಾಡಿತ್ತು. ಅಲ್ಲದೇ ಈಗಾಗಲೇ . ಲೀಟರ್ ಗೆ 48 ರೂ ತಲುಪಿದ್ದು, ಮತ್ತೆ ಹೆಚ್ಚಾದರೆ ಹೇಗೆ ಅನ್ನೋ ಆತಂಕ ಕೂಡ ಗ್ರಾಹಕರಲ್ಲಿ ಮೂಡಿತ್ತು. ಸರ್ಕಾರದ ಈ ನಿರ್ಧಾರ ಸದ್ಯಕ್ಕಂತು ಗುಡ್ ನ್ಯೂಸ್ ಅಂದ್ರೆ ತಪ್ಪಾಗಲ್ಲ. ಇದನ್ನೂ ಓದಿ: ಕೆಎಸ್ಆರ್ಟಿಸಿ ಟಿಕೆಟ್ನಲ್ಲಿ ಕನ್ನಡ ಕಗ್ಗೊಲೆ – ಪ್ರಯಾಣಿಕರ ಆಕ್ರೋಶ
Advertisement
ಕೆಎಂಎಫ್ 5 ರೂ. ಏರಿಕೆಗೆ ಪ್ರಸ್ತಾವನೆ ಸಿದ್ಧತೆ ಮಾಡಿತ್ತು. ಇದು ಫೈನಲ್ ಆಗಿದ್ರೆ ಸರ್ಕಾರ 1 ರಿಂದ 2 ರೂ. ದರ ಏರಿಕೆ ಮಾಡುವ ಸಾಧ್ಯತೆ ಇತ್ತು. ಆದರೆ ಸರ್ಕಾರ ಪರಿಷ್ಕರಣೆ ಕೈ ಬಿಡುವ ಸಾಧ್ಯತೆ ಹಿನ್ನೆಲೆ ಗ್ರಾಹಕರು ಸದ್ಯಕ್ಕಂತು ಕೊಂಚ ನಿರಾಳ ಆಗಬಹುದು. ಇದನ್ನೂ ಓದಿ: ಅಡಿಕೆ ವ್ಯಾಪಾರಿಗೆ ಬೆದರಿಸಿ 17 ಲಕ್ಷ ದರೋಡೆ – 7 ಮಂದಿ ಅರೆಸ್ಟ್
Advertisement
ಸದ್ಯ ಹಾಲಿನ ದರ ಎಷ್ಟಿದೆ?
– ನೀಲಿ ಪ್ಯಾಕೆಟ್ ಹಾಲು 44 ರೂ.
– ಕೇಸರಿ ಪ್ಯಾಕೆಟ್ ಹಾಲು 48 ರೂ.
– ಶುಭಂ ಪ್ಯಾಕೆಟ್ ಹಾಲು 50 ರೂ
– ಸಮೃದ್ಧಿ ಹಾಲಿನ ಪ್ಯಾಕೆಟ್ 53 ರೂ. ಇದನ್ನೂ ಓದಿ: ದಸರಾ ಜಂಬೂಸವಾರಿ ಮೆರವಣಿಗೆಗೆ ಪೊಲೀಸ್ ಇಲಾಖೆ ಬಿಗಿ ಭದ್ರತೆ: ಕಮಿಷನರ್ ಸೀಮಾ ಲಾಟ್ಕರ್