ಬೆಂಗಳೂರು: ಕೆಲವೇ ದಿನಗಳಲ್ಲಿ ನಂದಿನಿ ಹಾಲು-ಮೊಸರು ದರದಲ್ಲಿ 2 ರೂ. ಏರಿಯಾಗುವ ಸಾಧ್ಯತೆ ಇದೆ. ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಇವತ್ತು ಸಭೆ ನಡೆಸಿದ್ದು, ದರ ಹೆಚ್ಚಳಕ್ಕೆ ಒಮ್ಮತದ ಒಪ್ಪಿಗೆ ಸಿಕ್ಕಿದೆ. ಇನ್ನೆರಡು ದಿನಗಳಲ್ಲಿ ಸಿಎಂ ಒಪ್ಪಿಗೆ ಪಡೆದು ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಮೊದಲೇ ತತ್ತರಿಸಿರೋ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ. ನಷ್ಟದ ನೆಪವೊಡ್ಡಿ, ರೈತರಿಗೆ ಲಾಭ ನೀಡುತ್ತೇವೆ ಎಂಬ ಉದ್ದೇಶದಿಂದ ಹಾಲಿನ ದರ ಹೆಚ್ಚಳಕ್ಕೆ ಕೆಎಂಎಫ್ ಮುಂದಾಗಿದೆ.
Advertisement
Advertisement
ಖಾಸಗಿ ಡೈರಿ ಹಾಲಿನ ದರಕ್ಕೆ ಹೊಲಿಕೆ ಮಾಡಿದರೆ ನಂದಿನಿ ದರ ಕಡಿಮೆ ಇದೆ. ಮೂರು ವರ್ಷಗಳಿಂದ ಹಾಲಿನ ದರ ಏರಿಕೆಯಾಗಿಲ್ಲ. ಈಗಾಗಿ ಎಲ್ಲಾ ಒಕ್ಕೂಟದವರು ಹಾಲಿನ ದರ ಏರಿಕೆ ಮಾಡುವಂತೆ ತಿಳಿಸಿದ್ದಾರೆ. ನಂದಿನ ಹಾಲು, ಮೊಸರು ಸೇರಿದಂತೆ ನಂದಿನಿ ಹಾಲಿನ ಉತ್ಪನ್ನಗಳ ಹಾಲಿನ ದರ ಏರಿಕೆಯಾಗುವುದು ಬಹುತೇಕ ಖಚಿತ ಎಂಬ ಮಾಹಿತಿ ಲಭಿಸಿದೆ.
Advertisement
ದರ ಏರಿಕೆ ಕುರಿತು ಕೆಎಂಎಫ್ ಇಂದು ಡೈರಿ ಸರ್ಕಲ್ ನಲ್ಲಿರುವ ಕೆಎಂಎಫ್ ಕಚೇರಿಯಲ್ಲಿ ಹಾಲು ಮಹಾಮಂಡಲದ ನಿರ್ದೇಶಕರ ಸಭೆ ನಡೆಯಿತು. ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಲ್ಲಾ ನಿರ್ದೇಶಕರು ಹಾಲಿನ ದರ ಹೆಚ್ಚಳಕ್ಕೆ ಅಧ್ಯಕ್ಷರಿಗೆ ಒಪ್ಪಿಗೆ ಸೂಚಿಸಿದ್ದಾರೆ. ದರ ಹೆಚ್ಚಳದಲ್ಲಿ ಎಷ್ಟು ಹೆಚ್ಚಳ ಮಾಡಬೇಕು ಎಂಬುದರ ಬಗ್ಗೆ ಅಧ್ಯಕ್ಷರಿಗೆ ನಿರ್ಣಯ ಮಾಡಲು ತಿಳಿಸಿದ್ದಾರೆ.
Advertisement
ಈ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರೊಂದಿಗೆ ಇನ್ನೆರೆಡು ದಿನಗಳಲ್ಲಿ ಅಂತಿಮ ಚರ್ಚೆ ಮಾಡಿದ ಬಳಿಕ ನಿಖರ ದರ ಹೆಚ್ಚಳದ ಬಗ್ಗೆ ತಿಳಿಸುವುದಾಗಿ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.