ಬೆಂಗಳೂರು: ನಮ್ಮ ಹೆಮ್ಮೆಯ ನಂದಿನಿ ತುಪ್ಪಕ್ಕೆ (Nandini Ghee) ಎಲ್ಲೆಲ್ಲಿದ ಬೇಡಿಕೆ ಇದೆ. ಅದರಲ್ಲೂ ತಿರುಪತಿ ತಿಮ್ಮಪ್ಪನಿಗೂ ನಮ್ಮ ಕೆಂಎಫ್ (KMF) ನಂದಿನಿ ತುಪ್ಪ ಬೇಕು. ಇದನ್ನೇ ಬಂಡವಾಳ ಮಾಡಿಕೊಂಡ ನಕಲಿ ತುಪ್ಪ (Fake Ghee) ಮಾರಾಟ ಮಾಡುವ ಜಾಲ ಪತ್ತೆಯಾಗಿದೆ. ಇದಕ್ಕೆ ಕಡಿವಾಣ ಹಾಕಲು ಇದೀಗ ಕೆಎಂಎಫ್ ಭರ್ಜರಿ ಪ್ಲಾನ್ ಮಾಡಿದೆ.
ಕೆಎಂಎಫ್‌ಗೂ ನಕಲಿ ಉತ್ಪನ್ನಗಳ ಹಾವಳಿ ಜೋರಾಗಿ ತಟ್ಟಿದೆ. ಅದೂ ಪದೇ ಪದೇ ನಕಲಿ ಹಾವಳಿಗೆ ಸಿಲುಕಿ ನಲುಗುತ್ತಿರೋ ಕೆಎಂಎಫ್ ಈಗ ನಕಲಿ ಶೂರರಿಗೆ ಮಾಸ್ಟರ್ ಸ್ಟ್ರೋಕ್ ಕೊಡಲು ಪ್ಲಾನ್ ರೂಪಿಸಿದೆ. ಇಡೀ ದೇಶದಲ್ಲಿ ತನ್ನದೇ ಆದ ವಿಶಿಷ್ಟ ರುಚಿ ಹೊಂದಿರೋ ಕೆಎಂಎಫ್ ತುಪ್ಪವನ್ನ ನಕಲಿ ಮಾಡಿ ಮಾರಾಟ ಮಾಡಲಾಗುತ್ತಿತ್ತು. ಈ ನಕಲಿ ತುಪ್ಪ ಜಾಲವನ್ನ ಪತ್ತೆ ಹಚ್ಚಿದ್ದ ಕೆಎಂಎಫ್ ಈಗ ರಾಜ್ಯಾದ್ಯಂತ ನಕಲಿ ತುಪ್ಪ ಹಾವಳಿ ತಡೆಗಟ್ಟೋಕೆ ನೇರ ಹೆಡ್ ಶಾಟ್ ಕೊಡಲು ಪ್ಲಾನ್ ರೂಪಿಸುತ್ತಿದೆ. ಇದನ್ನೂ ಓದಿ: ʻನಮ್ಮನ್ನು ಬಿಟ್ಟು ಹೋಗಬೇಡಿ ಸರ್ʼ – ಕಣ್ಣೀರಿಟ್ಟ ವಿದ್ಯಾರ್ಥಿಗಳು
ಕೆಟ್ಟ ಮೇಲೆ ಕೊನೆಗೂ ಬುದ್ದಿ ಕಲಿತ ಕೆಎಂಎಫ್ ನಂದಿನಿ ಬ್ರ‍್ಯಾಂಡ್‌ಗೆ ಹೊಡೆತ ಬೀಳಬಾರದು ಅಂತ ಆಹಾರ ಇಲಾಖೆ ತಜ್ಞರ ಜೊತೆ ಚರ್ಚಿಸಿ ಮಾಸ್ಟರ್ ಪ್ಲಾನ್ ಮಾಡಿದೆ. ಅದೇನು ಅಂದ್ರೆ ಇನ್ಮುಂದೆ ನಂದಿನಿ ತುಪ್ಪದ ಪ್ಯಾಕೇಜ್ ಅಥವಾ ಡಬ್ಬಿಯಲ್ಲಿ ಕ್ಯೂಆರ್ ಕೋಡ್ ಈಗ ಇರೋದನ್ನ ಮತ್ತಷ್ಟುç ಸ್ಟ್ರಾಂಗ್ ಮಾಡುತ್ತಿದೆ. ಈ ಕ್ಯೂಆರ್ ಕೋಡ್ ಇದ್ದರೆ ನಕಲು ಮಾಡಲು ಆಗೋದಿಲ್ಲ. ಇದನ್ನೂ ಓದಿ: ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ: ಸಿದ್ದರಾಮಯ್ಯ
ಕ್ಯೂಆರ್ ಕೋಡ್‌ನಲ್ಲಿ ಏನಿರುತ್ತೆ?
– ಯಾವ ಒಕ್ಕೂಟದಿಂದ ಉತ್ಪಾದನೆಯಾಗಿದೆ
– ಯಾವ ಡಿಪೋಗೆ ಸರಬರಾಜು ನೀಡಲಾಗಿದೆ
– ಯಾವ ಏರಿಯಾಗೆ ಡೆಲಿವರಿ ನೀಡಲಾಗಿದೆ
– ಯಾವ ರೀಟೇಲ್ ಅಂಗಡಿಗೆ ಸೇಲ್ ಮಾಡಲಾಗಿದೆ ಎಂಬ ಮಾಹಿತಿ ಇದರಲ್ಲಿ ಇರುತ್ತದೆ.
ಕ್ಯೂಆರ್ ಕೋಡ್ ಮೂಲಕ ಗ್ರಾಹಕರು ತುಪ್ಪದ ಉತ್ಪಾದನೆ, ಪೂರೈಕೆ, ಯಾವ ಮಳಿಗೆ, ಯಾರಿಗೆ ಮಾರಾಟ ಮಾಡಿದ್ದಾರೆ ಎಂಬುದನ್ನು ತಿಳಿಯಬಹುದು. ಇದರಿಂದ ಗ್ರಾಹಕರು ಖರೀದಿ ಮಾಡಿರೋದು ಅಸಲಿಯೋ ನಕಲಿಯೋ ಅನ್ನೋದು ಗ್ರಾಹಕರೇ ತಿಳಿಯಬಹುದು. ಇದನ್ನೂ ಓದಿ: ʻಶ್ರೀರಾಮ, ಲಕ್ಷ್ಮಣ, ರಾವಣ ಆದರ್ಶ ವ್ಯಕ್ತಿಗಳಲ್ಲ, ಕ್ರೂರಿಗಳುʼ- ಲಲಿತಾ ನಾಯ್ಕ್ ವಿರುದ್ಧ ಕೇಸ್

