ಬೆಂಗಳೂರು: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕೆಎಂಎಫ್ (KMF) ಹಾಲು ಪೂರೈಕೆದಾರರು ಮುಷ್ಕರ ಕೈಗೊಂಡಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಕಳೆದ 2 ದಿನಗಳಿಂದ ನಂದಿನಿ ಹಾಲು (Nandini Milk) ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ನಂದಿನಿ ಬೂತ್‌ಗಳಲ್ಲಿ ಹಾಲು, ಮೊಸರು ಸಿಗದೇ ಜನರು ವಾಪಸ್ ಹೋಗುತ್ತಿದ್ದಾರೆ.
ಹಾಲು ಪೂರೈಕೆದಾರರಿಗೆ ಹೆಚ್ಚಿನ ಹಣ ನಿಗದಿ ಮಾಡುವಂತೆ ಒತ್ತಾಯಿಸಿ ನಂದಿನಿ ಹಾಲು ಪೂರೈಕೆ ಮಾಡುವ ಲಾರಿ ಮಾಲೀಕರು ಹಾಗೂ ಚಾಲಕರು ಪ್ರತಿಭಟನೆ (Protest) ನಡೆಸುತ್ತಿದ್ದಾರೆ. ಹಲವು ಬೇಡಿಕೆಗೆ ಒತ್ತಾಯಿಸಿ ಕಳೆದ 2 ದಿನಗಳಿಂದ ಲಾರಿ ಮಾಲೀಕರು ಬಮೂಲ್ ಹಾಲು ವಿತರಣೆ ನಿಲ್ಲಿಸಿದ್ದು, ಇದರಿಂದ ನಗರದ ಹಲವೆಡೆ ನಂದಿನಿ ಹಾಲು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.
Advertisement
Advertisement
ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗಿದೆ. ಒಂದು ಟ್ರಿಪ್‌ಗೆ ಬಮೂಲ್ 1,000-1,200 ರೂಪಾಯಿ ನೀಡಲಾಗುತ್ತಿದೆ. ಆದರೆ ಕಿ.ಮೀ ಆಧಾರದ ಮೇಲೆ ಪಾವತಿ ಹಣವನ್ನು ಹೆಚ್ಚು ಮಾಡುವಂತೆ ಒತ್ತಾಯಿಸಲಾಗಿದೆ. ಈ ಸಂಬಂಧ ಬಮೂಲ್‌ಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಆದರೂ ಟ್ರಿಪ್ ಹಣ ಹೆಚ್ಚಿಗೆ ಮಾಡಿಲ್ಲ. ಈ ಕಾರಣಕ್ಕಾಗಿ ನಮ್ಮ ಬೇಡಿಕೆ ಈಡೇರಿಕೆ ತನಕ ಗಾಡಿ ತೆಗೆಯಲ್ಲ ಎಂದು ಮಾಲೀಕರು ಪಟ್ಟು ಹಿಡಿದಿದ್ದಾರೆ.
Advertisement
ಈ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನದಿಂದ ನಂದಿನಿ ಹಾಲನ್ನು ಸರಬರಾಜು ಮಾಡುವುದನ್ನು ಡಿಸ್ಟಿಬ್ಯೂಟರ್ಸ್ ಸ್ಥಗಿತಗೊಳಿಸಿದ್ದಾರೆ. ಕೆಎಂಎಫ್ ಮುಂದೆ ಹಾಲಿನ ಲಾರಿಗಳನ್ನ ನಿಲ್ಲಿಸಿ ಪ್ರತಿಭಟನೆ ಮಾಡುತ್ತಿದ್ದು, 250ಕ್ಕೂ ಹೆಚ್ಚು ಲಾರಿ ಮಾಲೀಕರು ಹಾಗೂ ಚಾಲಕರು ಕೆಎಂಎಫ್ ಹಾಲು ಸರಬರಾಜು ಮಾಡುವುದನ್ನು ನಿಲ್ಲಿಸಿದ್ದಾರೆ. ಇದನ್ನೂ ಓದಿ: ಬಾಡಿಗೆ ಮನೆಗೆ ಅಡ್ವಾನ್ಸ್ ಕೊಡೋ ಮುನ್ನ ಹುಷಾರ್ – ಹಣದ ಜೊತೆಗೆ ಓನರ್ ಎಸ್ಕೇಪ್
Advertisement
ಹಾಲು ಪೂರೈಕೆದಾರರ ಮುಷ್ಕರದ ಹಿನ್ನೆಲೆಯಲ್ಲಿ ಪ್ರತಿದಿನ ಬೆಳಗ್ಗೆ 25 ಕ್ರೇಟ್ (ಒಂದು ಕ್ರೇಟ್ ನಲ್ಲಿ 12 ಲೀಟರ್) ಬರುತ್ತಿದ್ದ ಹಾಲು, ಸದ್ಯ ಬೆಳಗ್ಗೆ ಸಮಯದಲ್ಲಿ 20 ಕ್ರೇಟ್ ಮಾತ್ರ ಸರಬರಾಜು ಮಾಡಲಾಗುತ್ತಿದೆ. ಮಧ್ಯಾಹ್ನವೂ ಹಾಲು ಪೂರೈಕೆಯಾಗುತ್ತಿಲ್ಲ. ಸಂಜೆ ಹೊತ್ತಲ್ಲಿ ಗ್ರಾಹಕರಿಗೆ ಹಾಲು ಮೊಸರು ಸಿಗುತ್ತಿಲ್ಲ. ಬೆಳಗ್ಗೆ ಹೊತ್ತಲ್ಲೇ ಎರಡೆರಡು ಪ್ಯಾಕೆಟ್ ತೊಗೊಂಡು ಸ್ಟಾಕ್ ಅನ್ನು ಗ್ರಾಹಕರು ಇಟ್ಟುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: `ಕಬ್ಬನ್ ಪಾರ್ಕ್ ಉಳಿಸಿ’ ಸಿಎಂಗೆ ಪತ್ರ ಬರೆದು ಮನವಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k