ಬೆಂಗಳೂರು: ಗ್ರಾಹಕರಿಗೆ ಹಾಲು (Milk), ಮೊಸರಿನ ದರದ ಬಿಸಿ ತಟ್ಟಿದೆ. ಇದರ ಮಧ್ಯೆ ಕೆಎಂಎಫ್ (KMF) ಎಲ್ಲ ಇತರ ಉತ್ಪನ್ನಗಳ (Milk Products) ದರವನ್ನೂ ಏರಿಕೆ ಮಾಡಿದ್ದು, ಈ ಮೂಲಕ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಿದೆ. ಹಾಲು, ಮೊಸರಿನ ದರವನ್ನು ಲೀಟರ್‌ಗೆ ಎರಡು ರೂಪಾಯಿ ಹೆಚ್ಚಳ ಮಾಡಿದ್ದ ಕೆಎಂಎಫ್ ಮತ್ತೆ ಗ್ರಾಹಕರಿಗೆ ಮಾಸ್ಟರ್ ಸ್ಟ್ರೋಕ್ ನೀಡಿದೆ.
Advertisement
ದಸರಾ ಹಬ್ಬದಿಂದಲೂ ತುಪ್ಪದ ದರ ಹೆಚ್ಚಾಗುತ್ತಲೇ ಇದೆ. ಒಮ್ಮೆಗೆ ದರ ಏರಿಕೆ ಮಾಡದೇ ಕಳೆದ 2 ತಿಂಗಳಿನಲ್ಲಿ 4 ಬಾರಿ ಹಂತ-ಹಂತವಾಗಿ ತುಪ್ಪದ ದರ ಏರಿಕೆ ಮಾಡಿದೆ. ಸದ್ಯ ಒಟ್ಟು 170 ರೂ.ವರೆಗೆ ದರ ಹೆಚ್ಚಳ ಮಾಡಿದೆ. ಕೇವಲ ತುಪ್ಪ ಮಾತ್ರವಲ್ಲ ಇದೀಗ ಕೆಎಂಎಫ್‌ನ ಎಲ್ಲ ಉತ್ಪನ್ನಗಳ ದರವೂ ಶೇ.5 ರಿಂದ 15 ರಷ್ಟು ಏರಿಕೆ ಕಂಡಿದೆ. ಒಂದು ಕೆಜಿಗೆ ತುಪ್ಪದ ದರ 50 ರೂ. ಹೆಚ್ಚಳವಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ವಿದ್ಯಾಭರಣ್ ಬಗ್ಗೆ ಮೊದಲೇ ಗೊತ್ತಾಗಿದ್ದು ಒಳ್ಳೆಯದಾಯ್ತು: ನಟಿ ವೈಷ್ಣವಿ ಸ್ಪಷ್ಟನೆ
Advertisement
Advertisement
ಈ ಮೊದಲು ಹಾಲು, ಮೊಸರು ದರ ಹೆಚ್ಚಳಕ್ಕೆ ಕೆಎಂಎಫ್ ಹಲವು ಬಾರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಚುನಾವಣೆ ವರ್ಷ ದರ ಏರಿಕೆಗೆ ಸಿಎಂ ಒಪ್ಪಿರಲಿಲ್ಲ. ಇದರಿಂದಾಗಿ ಸೈಲೆಂಟಾಗಿಯೇ ತುಪ್ಪದ ದರ ಏರಿಕೆ ಮಾಡುತ್ತಿತ್ತು. ಅದೇ ರೀತಿ ಕೆಎಂಎಫ್ ತನ್ನ ಇತರೆ ಉತ್ಪನ್ನಗಳ ದರವನ್ನೂ ಹೆಚ್ಚಳ ಮಾಡಿದೆ. ಈ ಬಗ್ಗೆ ಕೆಎಂಎಫ್ (KMF) ಅಧ್ಯಕ್ಷರನ್ನು ಕೇಳಿದ್ರೆ ತುಪ್ಪದ ದರ ಹೆಚ್ಚಳ ಮಾಡಿದ್ದು ನಿಜ. ಇತರ ಉತ್ಪನ್ನಗಳ ದರವೂ ಜಾಸ್ತಿ ಮಾಡಿದ್ದೇವೆ. ತುಪ್ಪ, ಇತರ ಪ್ರಾಡೆಕ್ಟ್ ದರ ಹೆಚ್ಚು ಮಾಡೋದಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ (KMF Balachandra) ಜಾರಕಿಹೊಳಿ ತಿಳಿಸಿದ್ದಾರೆ. ಇದನ್ನೂ ಓದಿ: ವಿದ್ಯಾಭರಣ್ ಬಗ್ಗೆ ಮೊದಲೇ ಗೊತ್ತಾಗಿದ್ದು ಒಳ್ಳೆಯದಾಯ್ತು: ನಟಿ ವೈಷ್ಣವಿ ಸ್ಪಷ್ಟನೆ
Advertisement
ಇನ್ನೊಂದೆಡೆ ಹಾಲಿನ ದರ ಹೆಚ್ಚಳ ಬೆನ್ನಲ್ಲೆ ಟೀ ಕಾಫಿ ದರ ಏರಿಕೆಯ ಭೀತಿ ಎದುರಾಗಿತ್ತು. ಆದರೆ ಸದ್ಯ ಈ ವಿಚಾರಕ್ಕೆ ಹೊಟೇಲ್ ಮಾಲೀಕರ ಸಂಘ ಫುಲ್‌ಸ್ಟಾಪ್ ಇಟ್ಟಿದೆ. ಹಾಲು, ಮೊಸರಿನ ದರ ಎರಡು ರೂಪಾಯಿ ಹೆಚ್ಚಳ ಮಾಡಿದರೂ ಹೊಟೇಲ್‌ನಲ್ಲಿ ದರ ಏರಿಕೆ ಮಾಡಲ್ಲ. ಈ ವಿಚಾರದ ಬಗ್ಗೆ ಸ್ವಲ್ಪ ದಿನ ಕಾದು ಚರ್ಚೆ ಮಾಡ್ತೀವಿ ಎಂದು ಬೆಂಗಳೂರು ಹೋಟೆಲ್ (Hotel) ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ ರಾವ್ ಸ್ಪಷ್ಟನೆ ನೀಡಿದ್ದಾರೆ.
ಯಾವ ಉತ್ಪನ್ನ – ಎಷ್ಟು ಏರಿಕೆ?
* ಪೇಡ – ಹಿಂದಿನ ದರ 220ರೂ.- ಈಗಿನ ದರ 240 ರೂ. (1/4 ಕೆ.ಜಿ)
* ಬಾದಾಮ್ ಪೌಡರ್ – ಹಿಂದಿನ ದರ 400 ರೂ. – ಈಗಿನ ದರ 440 ರೂ. (1 ಕೆ.ಜಿಗೆ 40 ರೂ. ಹೆಚ್ಚಳ)
* ಕೋಡ್ಬಳೆ – ಹಿಂದಿನ ದರ 500 ರೂ. – ಈಗಿನ ದರ 600 ರೂ. (200 ಗ್ರಾಂ.)
* ರಸ್ಕ್ – ಹಿಂದಿನ ದರ 15 ರೂ. – ಈಗಿನ ದರ 29 ರೂ. (100 ಗ್ರಾಂ.)
* ಜಾಮೂನು – ಹಿಂದಿನ ದರ 130 ರೂ.- ಈಗಿನ ದರ 150 ರೂ. (1/2 ಕೆ.ಜಿ)
* ಪ್ಲೇವರ್ಡ್ ಮಿಲ್ಕ್ – ಹಿಂದಿನ ದರ 20 ರೂ. – ಈಗಿನ ದರ 25 ರೂ. (200 ಎಂಎಲ್‌ಗೆ 5 ರೂ. ಹೆಚ್ಚಳ)
* ರಸಗುಲ್ಲ – ಹಿಂದಿನ ದರ 130 ರೂ. – ಈಗಿನ ದರ 150 ರೂ. (1/4 ಕೆ.ಜಿ)
* ಬರ್ಫಿ – ಹಿಂದಿನ ದರ 195 ರೂ. – ಈಗಿನ ದರ 210 ರೂ. (1/4 ಕೆ.ಜಿ)
* ಗುಡ್‌ಲೈಫ್ – ಹಿಂದಿನ ದರ 26 ರೂ.- ಈಗಿನ ದರ 28 ರೂ. ಪ್ರತಿ ಲೀಟರ್‌ಗೆ
* ಮೈಸೂರು ಪಾಕ್ – ಹಿಂದಿನ ದರ 135 ರೂ. – ಈಗಿನ ದರ 160 ರೂ. (1/4 ಕೆ.ಜಿ)
* ಕೋವಾ – ಹಿಂದಿನ ದರ 60 ರೂ. – ಈಗಿನ ದರ 90ರೂ. (200 ಗ್ರಾಂ)