ಉಡುಪಿ: ಪೇಜಾವರಶ್ರೀ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದು, ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಐದು ದಿನ ಆಗಿದೆ. ಇಂದು ಒಂಬತ್ತನೇ ಹೆಲ್ತ್ ಬುಲೆಟಿನನ್ನು ಕೆಎಂಸಿ ತಜ್ಞ ವೈದ್ಯರ ತಂಡವೇ ಪ್ರೆಸ್‍ಮೀಟ್ ಮಾಡಿ ರಿಲೀಸ್ ಮಾಡಿದೆ.
ವಿಶ್ವೇಶತೀರ್ಥ ಸ್ವಾಮೀಜಿಗೆ ಸದ್ಯ ಶ್ವಾಸಕೋಶ ನ್ಯುಮೋನಿಯಾ ಸಮಸ್ಯೆ ಮಾತ್ರ ಬಾಧಿಸಿದೆ. ಪರಿಸ್ಥಿತಿ ಕಂಟ್ರೋಲ್ ಗೆ ಬರಲು ಸಾಕಷ್ಟು ಕಾಲಾವಕಾಶ ಬೇಕು. ಶ್ರೀಗಳ ಆರೋಗ್ಯದಲ್ಲಿ ಬಹಳ ಚೇತರಿಕೆ ಇದೆ ಎಂದು ಹೇಳಿದ್ದಾರೆ. ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮಾತನಾಡಿ, ದಾಖಲಾದಾಗ ಇದ್ದ ಆರೋಗ್ಯಕ್ಕಿಂತ ಈಗ ಸುಧಾರಿಸಿದೆ ಎಂದರು.
Advertisement
Advertisement
ವಯಸ್ಸಿನ ಕಾರಣಕ್ಕೆ ಸುಧಾರಣೆ ನಿಧಾನಕ್ಕೆ ಆಗ್ತಾಯಿದೆ. ಶ್ವಾಸಕೋಶದ ಇನ್ಫೆಕ್ಷನ್ ಆಗಿದೆ. ವಯಸ್ಸು 90 ಆಗಿರೋದ್ರಿಂದ ಬಹಳ ನಿಧಾನವಾಗಿ ಚಿಕಿತ್ಸೆ ಕೊಡಬೇಕಾಗಿದೆ ಎಂದು ಹೇಳಿದರು. ಬೆಂಗಳೂರು ಮಣಿಪಾಲ ಆಸ್ಪತ್ರೆಯ ತಜ್ಞರಾದ ಡಾ. ರಾಜೇಶ್ ಶೆಟ್ಟಿ ಮತ್ತು ಡಾ ಸತ್ಯ ನಾರಾಯಣ ಮಾತನಾಡಿ, ಚಿಕಿತ್ಸೆ ನಿರಂತರವಾಗಿ ಕೊಡಬೇಕಾಗುತ್ತದೆ. ಸಂಪೂರ್ಣ ಚೇತರಿಸುವವರೆಗೆ ಕೃತಕ ಉಸಿರಾಟವನ್ನು ಮುಂದುವರಿಸುತ್ತೇವೆ. ಏಮ್ಸ್ ಪ್ರತಿ ಗಂಟೆಗೊಮ್ಮೆ ಕರೆ ಮಾಡುತ್ತದೆ. ಏಲ್ಲಾ ಪರೀಕ್ಷೆಗಳ ಮಾಹಿತಿ ಅವರಿಗೆ ಕೊಟ್ಟಿದ್ದೇವೆ. ಏಮ್ಸ್‍ನ ಕೆಲ ಸಲಹೆಗಳನ್ನು ಎಂದು ವಿವರಿಸಿದರು.
Advertisement
ಆರಂಭದಲ್ಲಿ ಆವರಿಸಿದ್ದ ನ್ಯುಮೋನಿಯಾ ಕಡಿಮೆ ಆಗಿದೆ. ಪೇಜಾವರಶ್ರೀ ಚಿಕಿತ್ಸೆಗೆ ಸ್ಪಂದನೆ ಮಾಡುತ್ತಿದ್ದಾರೆ. ದೇಹ ಸ್ವಲ್ಪ ನಿತ್ರಾಣಗೊಂಡಿದೆ. ನಿತ್ರಾಣದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಸ್ವಾಮೀಜಿಯ ಬಿಪಿ ಸಂಪೂರ್ಣ ಕಂಟ್ರೋಲ್ ನಲ್ಲಿದೆ. ಸ್ವಾಮೀಜಿ ಸ್ವತಃ ಅವರೇ ಬಿಪಿ ಕಂಟ್ರೋಲ್ ಇಟ್ಟುಕೊಂಡಿದ್ದಾರೆ. ಐಸಿಯುನಲ್ಲಿ ಬಿಪಿಗೆ ನಾವು ಚಿಕಿತ್ಸೆ ಕೊಡುತ್ತಿಲ್ಲ ಎಂದು ಹೇಳಿದರು. ಡಾ. ಶರತ್ ರಾವ್, ಡಾ. ರಾಜೇಶ್ ಶೆಟ್ಟಿ, ಡಾ. ಮಂಜುನಾಥ, ಡಾ. ವಿಶಾಲ್ ಶಾನುಭಾಗ್ ವೈದ್ಯರ ಪ್ರೆಸ್ ಮೀಟ್ ನಲ್ಲಿ ಮಾಹಿತಿ ನೀಡಿದರು.