ಇಂದಿನಿಂದ ಹರಿಣರ ವಿರುದ್ಧ ಏಕದಿನ ಸರಣಿ – ಹೊಸ ತಾರೆಗಳ ಉಗಮಕ್ಕೆ ರೈಟ್‌ ಟೈಂ, ರಾಹುಲ್‌ ನಾಯಕತ್ವಕ್ಕೂ ಸವಾಲ್‌

Public TV
2 Min Read
KL Rahul 3

ಜೋಹಾನ್ಸ್‌ ಬರ್ಗ್: ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA) ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಭಾನುವಾರ (ಇಂದು) ನ್ಯೂ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೊಸ ತಲೆಮಾರಿನ ತಾರೆಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಸಾಲುಗಟ್ಟಿ ನಿಂತಿದ್ದು ಭಾರತದ ಏಕದಿನ ಭವಿಷ್ಯದ ಪ್ರಯಾಣಕ್ಕೆ ಇದು ಮೊದಲ ಹೆಜ್ಜೆಯಾಗುವ ನಿರೀಕ್ಷೆ ಇದೆ.

ಅಷ್ಟೇ ಅಲ್ಲದೇ ಉಭಯ ತಂಡಗಳಿಗೆ ಈ ಮುಖಾಮುಖಿಯು 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಮುಂಚಿತವಾಗಿ ಹೊಸ ಸ್ಟಾರ್‌ಗಳ ಆಗಮನವನ್ನು ಬಿಂಬಿಸುತ್ತದೆ. ಕಳೆದ ಒಂದೂವರೆ ದಶಕದಿಂದಲೂ ಏಕದಿನ ಸ್ವರೂಪದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ (Virat Kohli and Rohit Sharma) ಉತ್ತುಂಗದಲ್ಲಿದ್ದಾರೆ. ಆದರೀಗ ಅವರು ತಮ್ಮ ವೃತ್ತಿಜೀವನದ ಮುಸ್ಸಂಜೆಗೆ ಸರಿಯುತ್ತಿದ್ದಾರೆ. ಹೀಗಾಗಿ ಯುವ ಭಾರತೀಯರ ಹೆಸರು ತಮ್ಮ ಪರಂಪರೆ ಮುಂದುವರಿಸಬೇಕಾಗಿದೆ.

Ind vs SA 1

ಮೂರು ಏಕದಿನ ಪಂದ್ಯಗಳ ಸರಣಿಯ ನಾಯಕತ್ವ ವಹಿಸಿರುವ ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಪಂದ್ಯದ ಕೇಂದ್ರ ಬಿಂದುವಾಗಿದ್ದಾರೆ. ವಿಕೆಟ್ ಕೀಪರ್-ಬ್ಯಾಟರ್ ರಾಹುಲ್ ಈ ಹಿಂದೆ ಭಾರತ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ವಿಶ್ವಕಪ್‌ಗೂ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನಯ 2-1 ಅಂತರದಲ್ಲಿ ಗೆಲ್ಲುವಲ್ಲಿ ರಾಹುಲ್‌ ಪ್ರಮುಖ ಪಾತ್ರ ವಹಿಸಿದ್ದರು. ಆದ್ರೆ ಇಲ್ಲಿನ ಯಶಸ್ವಿ ಫಲಿತಾಂಶವು ಕರುನಾಡ ಕುವರನಿಗೆ ದೀರ್ಘಕಾಲದವರೆಗೆ ಏಕದಿನ ನಾಯಕತ್ವ ನೀಡುವ ಸಾಧ್ಯತೆಯಿದೆ. ಇದನ್ನೂ ಓದಿ: ಅಚ್ಚರಿ ಬೆಳವಣಿಗೆಯಲ್ಲಿ ಮುಂಬೈ ಸಾರಥಿಯಾದ ಪಾಂಡ್ಯ – ಹಿಟ್‌ಮ್ಯಾನ್‌ ಸ್ಥಾನ ಏನು?

Ind vs SA 2

ಅನಾರೋಗ್ಯದಿಂದಾಗಿ ಟಿ20 ಸರಣಿ ಯಿಂದ ಹೊರಗುಳಿದಿದ್ದ ರಾಹುಲ್, ಋತುರಾಜ್ ಚೇತರಿಸಿಕೊಂಡಿದ್ದರೆ, ಶ್ರೇಯಸ್ ಅಯ್ಯರ್ ಸೇರಿದಂತೆ ಯುವ ಆಟಗಾರರು ತಂಡದಲ್ಲಿ ಕಾಯಂ ಸ್ಥಾನಕ್ಕಾಗಿ ಪೈಪೋಟಿ ನಡೆಸಲು ಉತ್ಸುಕರಾಗಿದ್ದಾರೆ. ಅಷ್ಟೇ ಅಲ್ಲದೇ ಫುಲ್‌ ಫಾರ್ಮ್‌ನಲ್ಲಿರುವ ರಿಂಕು ಸಿಂಗ್‌ ಸಹ ಏಕದಿನ ಸರಣಿಯಲ್ಲಿ ಸ್ಥಾನ ಪಡೆಯುವ ಅವಕಾಶವಿದೆ. ಇದನ್ನೂ ಓದಿ: ಪಾಂಡ್ಯ ನಾಯಕತ್ವ ವರವೋ ಶಾಪವೋ – ಕ್ಯಾಪ್ಟನ್‌ ಆದ ಒಂದೇ ಗಂಟೆಯಲ್ಲಿ 4 ಲಕ್ಷ ಫಾಲೋವರ್ಸ್‌ ಕಳೆದುಕೊಂಡ ಮುಂಬೈ

Ind vs SA 4

ಇನ್ನೂ ವೇಗಿಗಳಾದ ಅವೇಶ್ ಖಾನ್, ಮುಖೇಶ್ ಕುಮಾರ್ ಮತ್ತು ಅರ್ಷ್‌ದೀಪ್‌ ಸಿಂಗ್‌ ಹಿರಿಯ ಬೌಲರ್‌ಗಳ ಅನುಪಸ್ಥಿತಿ ತುಂಬಬೇಕಾದ ಜವಾಬ್ದಾರಿ ಹೊತ್ತಿದ್ದಾರೆ. ಜೋಹಾನ್‌ಬರ್ಗ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಅವರು ಹೆಚ್ಚು ಸ್ಥಿರತೆ ತೋರಿಸಬೇಕಾಗಿದೆ. ಇದನ್ನೂ ಓದಿ: ಟೆಕ್ವಾಂಡೋ: ರಾಷ್ಟ್ರಮಟ್ಟಕ್ಕೆ ಕಾಸರಗೋಡಿನ ಗಣ್ಯ – ಕೇರಳದಲ್ಲಿ ಅಗ್ರʻಗಣ್ಯʼಚಿನ್ನದ ಪದಕ..!

Share This Article