ಮುಂಬೈ: ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾದ ಟೆಸ್ಟ್ ತಂಡಕ್ಕೆ ಕನ್ನಡಿಗ ಕೆ.ಎಲ್ ರಾಹುಲ್ ಅವರನ್ನು ಉಪನಾಯಕನ್ನಾಗಿ ಬಿಸಿಸಿಐ ನೇಮಿಸಿದೆ ಎಂದು ಮೂಲಗಳಿಂದ ವರದಿಯಾಗಿದೆ.
Advertisement
ಈಗಾಗಲೇ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾಕ್ಕೆ ತೆರಳಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಮೂರು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ತಂಡದ ನಾಯಕರಾಗಿದ್ದು, ರೋಹಿತ್ ಶರ್ಮಾ ಉಪನಾಯಕರಾಗಿದ್ದರು. ಆದರೆ ರೋಹಿತ್ ಗಾಯಳುವಾಗಿ ತಂಡದಿಂದ ಹೊರಗುಳಿದಿರುವುದರಿಂದ ಉಪನಾಯಕ ಯಾರು ಎಂಬ ಪ್ರಶ್ನೆ ಮೂಡಿತ್ತು. ಇದೀಗ ಬಿಸಿಸಿಐ ಕೆ.ಎಲ್ ರಾಹುಲ್‍ರನ್ನು ಉಪನಾಯಕನ್ನಾಗಿ ಆಯ್ಕೆ ಮಾಡಿದೆ ಎಂದು ಬಿಸಿಸಿಐ ಆಪ್ತ ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರೋಹಿತ್, ಜಡೇಜಾ ಪ್ರಾಕ್ಟೀಸ್
Advertisement
Advertisement
ಕೆಲ ದಿನಗಳಿಂದ ಟೀಂ ಇಂಡಿಯಾದಲ್ಲಿ ನಾಯಕತ್ವದ ಫೈಟ್ ಜೋರಾಗಿದೆ. ಈ ನಡುವೆ ಸೀಮಿತ ಓವರ್‌ಗಳ ತಂಡದ ನಾಯಕತ್ವದಿಂದ ಕೊಹ್ಲಿಯನ್ನು ಕೆಳಗಿಳಿಸಿ ರೋಹಿತ್ ಶರ್ಮಾರನ್ನು ನಾಯಕನ್ನಾಗಿ ಬಿಸಿಸಿಐ ನೇಮಿಸಿದೆ. ಜೊತೆಗೆ ಟೆಸ್ಟ್ ತಂಡದ ಉಪನಾಯರಾಗಿದ್ದ ಅಜಿಂಕ್ಯಾ ರಹಾನೆಯನ್ನು ಕೆಳಗಿಳಿಸಿ ರೋಹಿತ್ ಶರ್ಮಾರನ್ನು ಟೆಸ್ಟ್ ತಂಡದ ಉಪನಾಯಕನ್ನಾಗಿ ಆಯ್ಕೆ ಮಾಡಿತ್ತು. ಆದರೆ ಸರಣಿ ಆರಂಭಕ್ಕೂ ಮೊದಲು ರೋಹಿತ್ ಗಾಯಳುವಾಗಿ ತಂಡದಿಂದ ಹೊರಬಿದ್ದು, ಬೆಂಗಳೂರಿನ NCAನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಹೇಳದೇ ಕೇಳದೇ ನಾಯಕ ಪಟ್ಟದಿಂದ ತೆಗೆದ್ರು – ಮೌನ ಮುರಿದ ಕೊಹ್ಲಿ
Advertisement