ಬೆಂಗಳೂರು: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ವೈರಲ್ ವಿಡಿಯೋವನ್ನು ಟ್ವೀಟ್ ಮಾಡಿರುವ ಕೆ ಎಲ್ ರಾಹುಲ್, ಕೊಹ್ಲಿ ಗಡ್ಡಕ್ಕೆ ವಿಮೆ ಮಾಡಿಸಿದ್ದಾರೆ ಎಂದು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
ಈ ಕುರಿತು ರಾಹುಲ್ ಟ್ವೀಟ್ ಮಾಡಿರುವ ವಿಡಿಯೋದಲ್ಲಿ ಕೊಹ್ಲಿ ಅವರ ಗಡ್ಡದ ವಿವಿಧ ಅಳತೆಗಳನ್ನು ಸೂಟು ಧರಿಸಿರುವ ಕೆಲ ವ್ಯಕ್ತಿಗಳು ತೆಗೆದುಕೊಳ್ಳುತ್ತಿದ್ದು, ಮತ್ತೊಬ್ಬ ವಿವಿಧ ಭಂಗಿಗಳಲ್ಲಿ ಫೋಟೋ ತೆಗೆಯುತ್ತಿರುವ ದೃಶ್ಯಗಳು ಕೊಠಡಿಯ ಸಿಸಿವಿಟಿಯಲ್ಲಿ ಸೆರೆಯಾಗಿದೆ. ತಮ್ಮ ಟ್ವೀಟ್ ನಲ್ಲಿ ರಾಹುಲ್, ನಿಮಗೆ ಗಡ್ಡದ ಗೀಳು ಇದೆ ಎಂಬುವುದು ನನಗೆ ಗೊತ್ತು. ಆದರೆ ಗಡ್ಡಕ್ಕೆ ವಿಮೆ ಮಾಡಿಸುತ್ತಿರುವ ಈ ಸುದ್ದಿ ನನ್ನ ಯೋಚನೆಗೆ ಮತ್ತಷ್ಟು ಪುಷ್ಠಿ ನೀಡಿದೆ ಎಂದು ಬರೆದುಕೊಂಡಿದ್ದಾರೆ.
Haha, I knew you were obsessed with your beard @imVkohli but this news of you getting your beard insured confirms my theory. ???????? pic.twitter.com/cUItPV8Rhy
— K L Rahul (@klrahul) June 8, 2018
ಸದ್ಯ ಗಾಯದ ಸಮಸ್ಯೆಯಿಂದ ಅಫ್ಘಾನ್ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿರುವ ಕೊಹ್ಲಿ ಜೂನ್ 15 ರಂದು ಬೆಂಗಳೂರಿನಲ್ಲಿ ಫಿಟ್‍ನೆಸ್ ಪರೀಕ್ಷೆ ಎದುರಿಸಲಿದ್ದಾರೆ. ಇನ್ನು ಕೆಲ ದಿನಗಳ ಹಿಂದೆ ದೆಹಲಿಯ ಮೇಡಂ ಟುಸ್ಸಾಡ್ಸ್ ವಸ್ತುಸಂಗ್ರಹಾಲಯದಲ್ಲಿ ಅನಾವರಣಗೊಂಡಿದ್ದ ಕೊಹ್ಲಿ ರ ಮೇಣದ ಪ್ರತಿಮೆ ಡ್ಯಾಮೆಜ್ ಆದ ಕಾರಣ ಅದನ್ನು ತೆರೆವುಗೊಳಿಸಲಾಗಿತ್ತು. ಆದರೆ ಸದ್ಯ ಈ ಕುರಿತು ಸ್ಪಷ್ಟನೆ ನೀಡಿರುವ ವಸ್ತು ಸಂಗ್ರಹಾಲಯದ ಅಧಿಕಾರಿಗಳು ಕೊಹ್ಲಿ ಅವರ ಪ್ರತಿಮೆ ಮತ್ತೆ ಸರಿಪಡಿಸಿ ಅಭಿಮಾನಿಗಳ ವಿಕ್ಷಣೆಗೆ ಸಿದ್ಧಪಡಿಸಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.
ಕೊಹ್ಲಿ ಪ್ರತಿಮೆ ಎದುರು ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಪ್ರತಿಮೆಯ ಬಲ ಕಿವಿಗೆ ಹಾನಿಯಾಗಿತ್ತು. ಪ್ರತಿಮೆ ಅನಾವರಣಗೊಂಡ ಒಂದು ದಿನದಲ್ಲಿ ಹಾನಿಯಾದ ಕಾರಣ ಅಲ್ಲಿಂದ ಸ್ಥಳಾಂತರ ಮಾಡಲಾಗಿತ್ತು.
The talk around my beard is quite entertaining. @klrahul11, @buntysajdeh, @yuzi_chahal, @y_umesh it's popcorn time boys ???? #ViratBeardInsurance
— Virat Kohli (@imVkohli) June 9, 2018