ಮುಂಬೈ: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‍ನಲ್ಲಿ ವೇಗವಾಗಿ ಅರ್ಧ ಶತಕ ಸಿಡಿಸಿದ ದಾಖಲೆ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರ ಹೆಸರಿನಲ್ಲಿದೆ. ಕೇವಲ 12 ಎಸೆತಗಳಲ್ಲಿ ಯುವಿ ಅರ್ಧ ಶತಕ ಗಳಿಸಿದ್ದರು. ಸದ್ಯ ಈ ದಾಖಲೆಯನ್ನು ನಾನು ಮುರಿಯುತ್ತೇನೆ ಎಂದು ಟೀಂ ಇಂಡಿಯಾ ಆರಂಭಿಕ ಆಟಗಾರ ಕೆಎಲ್ ರಾಹುಲ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಕೆಎಲ್ ರಾಹುಲ್ ಚಾಟ್ ಮಾಡಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬ ಯುವರಾಜ್ ಸಿಂಗ್ ಹೆಸರಿನಲ್ಲಿರುವ ವೇಗದ ಅರ್ಧ ಶತಕದ ದಾಖಲೆಯನ್ನು ಮುರಿಯುವ ಆಟಗಾರ ಯಾರು ಎಂಬ ಪ್ರಶ್ನೆ ಕೇಳಿದ್ದಾರೆ. ಪ್ರಶ್ನೆಗೆ ಉತ್ತರಿಸಿರುವ ರಾಹುಲ್, ಈ ದಾಖಲೆ ನನ್ನದಾಗಿರಬೇಕು ಎಂದು ಭಾವಿಸುವುದಾಗಿ ಹೇಳಿದ್ದಾರೆ. ಅಂದಹಾಗೇ 2007 ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಈ ದಾಖಲೆಯನ್ನ ನಿರ್ಮಿಸಿದ್ದರು.
Advertisement
I think it’s got to be me ???? https://t.co/FtvM9uIOYU
— K L Rahul (@klrahul11) May 10, 2020
Advertisement
ಕಳೆದ 13 ವರ್ಷಗಳಿಂದ ಈ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಯುವಿ 16 ಎಸೆತಗಲ್ಲಿ 56 ರನ್ ಗಳಿಸಿದ್ದರು. ಇದರಲ್ಲಿ 7 ಸಿಕ್ಸರ್, 3 ಬೌಂಡರಿ ಸಿಡಿಸಿದ್ದರು. ಇದೇ ಇನ್ನಿಂಗ್ಸ್ ನಲ್ಲಿ ಯುವಿ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ್ದರು. ಆ ಬಳಿಕ ಹಲವು ಆಟಗಾರರು ದಾಖಲೆಯ ಸನಿಹಕ್ಕೆ ಬಂದರೂ ಸಹ ದಾಖಲೆಯನ್ನು ಮುರಿಯುವಲ್ಲಿ ವಿಫಲರಾಗಿದ್ದರು.
Advertisement
ಇತ್ತ ಟೀಂ ಇಂಡಿಯಾ ಕ್ರಿಕೆಟ್ ತಂಡದಲ್ಲಿ ವಿಕೆಟ್ ಕೀಪರ್, ಬ್ಯಾಟ್ಸ್‍ಮನ್ ಆಗಿರುವ ರಾಹುಲ್ ಕಳೆದ ವರ್ಷ ಉತ್ತಮ ಫಾರ್ಮ್ ನಲ್ಲಿದ್ದರು. ಐಪಿಎಲ್‍ನಲ್ಲಿ ಪಂಜಾಬ್ ತಂಡದ ಪರ ಬ್ಯಾಟ್ ಬೀಸಿದ್ದ ರಾಹುಲ್, 14 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. ಉಳಿದಂತೆ ಈ ವರ್ಷ ರಾಹುಲ್ ಪಂಜಾಬ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದರು.