ನವದೆಹಲಿ: ಮುಲ್ತಾನ್‍ನಲ್ಲಿ ಬುಧವಾರದಿಂದ ಪ್ರಾರಂಭವಾಗಲಿರುವ ಏಷ್ಯಾ ಕಪ್‍ನ (Asia Cup 2023) ಮೊದಲ ಎರಡು ಪಂದ್ಯಗಳಿಂದ ಭಾರತದ (Team India) ವಿಕೆಟ್‍ಕೀಪರ್ ಹಾಗೂ ಬ್ಯಾಟರ್ ಕೆ.ಎಲ್ ರಾಹುಲ್ ಹೊರಗುಳಿಯಲಿದ್ದಾರೆ.
ಗಾಯದಿಂದ ಚೇತರಿಸಿಕೊಂಡ ನಂತರ ಹೆಸರಿಸಲಾಗಿದ್ದ ಬ್ಯಾಟರ್ ಪಾಕಿಸ್ತಾನ (Pakistan )ಮತ್ತು ನೇಪಾಳ ವಿರುದ್ಧದ ಮೊದಲ ಎರಡು ಪಂದ್ಯಗಳಿಗೆ ಲಭ್ಯವಿರುವುದಿಲ್ಲ. ಅವರು ಉತ್ತಮವಾಗಿ ಆಡುತ್ತಿದ್ದಾರೆ. ಆದರೆ ಮೊದಲ ಎರಡು ಪಂದ್ಯಕ್ಕೆ ಅವರು ಲಭ್ಯವಾಗುವುದಿಲ್ಲ ಎಂದು ಭಾರತ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ತಿಳಿಸಿದ್ದಾರೆ. ಇದನ್ನೂ ಓದಿ: 3.3 ಓವರ್‌ಗಳಲ್ಲಿ 43 ರನ್ – IBSA ವರ್ಲ್ಡ್ ಗೇಮ್ಸ್ನಲ್ಲಿ ಭಾರತ ಮಹಿಳಾ ಅಂಧರ ಕ್ರಿಕೆಟ್ ತಂಡ ಚಾಂಪಿಯನ್
ಇದಕ್ಕೂ ಮುನ್ನ ಆಟಗಾರರ ಹೆಸರು ಪ್ರಕಟಿಸುವ ಸಂದರ್ಭದಲ್ಲಿ ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ಕೆಎಲ್ ರಾಹುಲ್ ಸ್ವಲ್ಪ ನಿಶ್ಯಕ್ತಿಯಿಂದ ಬಳಲುತ್ತಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು.
ಬ್ಯಾಟರ್ ಶ್ರೇಯಸ್ ಅಯ್ಯರ್ ಫಿಟ್ ಆಗಿದ್ದಾರೆ ಮತ್ತು ಅಭ್ಯಾಸದ ಅವಧಿಯಲ್ಲಿ ಎಲ್ಲಾ ಬಾಕ್ಸ್‌ಗಳನ್ನು ಟಿಕ್ ಮಾಡಿದ್ದಾರೆ. ಅವರು ಏಷ್ಯಾ ಕಪ್‍ನಲ್ಲಿ ಆಡಲಿದ್ದಾರೆ ಎಂದು ದ್ರಾವಿಡ್ ತಿಳಿಸಿದ್ದಾರೆ.
ಏಷ್ಯಾಕಪ್‍ನ ಮೊದಲ ಪಂದ್ಯ ಬುಧವಾರ ಮುಲ್ತಾನ್‍ನಲ್ಲಿ ಸಹ-ಆತಿಥೇಯ ಪಾಕಿಸ್ತಾನ ಮತ್ತು ನೇಪಾಳ ನಡುವೆ ನಡೆಯಲಿದೆ. ಟೀಂ ಇಂಡಿಯಾ ಸೆಪ್ಟೆಂಬರ್ 2 ರಂದು ಕ್ಯಾಂಡಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ತನ್ನ ಹೋರಾಟವನ್ನು ಪ್ರಾರಂಭಿಸಲಿದೆ. ಇದನ್ನೂ ಓದಿ: ಏಷ್ಯಾ ಕಪ್ ಉದ್ಘಾಟನೆಗೆ ಕ್ಷಣಗಣನೆ – ನೀವೆಲ್ಲಿ ನೋಡಬಹುದು?
Web Stories