ಅಹಮದಾಬಾದ್: ವಿಶ್ವಕಪ್ 2023ರ (World Cup 2023) ಟೂರ್ನಿಯಲ್ಲಿ ಉಪ ನಾಯಕನಾಗಿ ಉತ್ತಮ ರೀತಿಯಲ್ಲಿ ಜವಾಬ್ದಾರಿ ನಿರ್ವಹಿಸುತ್ತಿರುವ ಕೆ.ಎಲ್.ರಾಹುಲ್ (K.L.Rahul), ಭಾರತ ತಂಡದ ವಿಕೆಟ್ ಕೀಪರ್ ಆಗಿ ದಾಖಲೆಯೊಂದನ್ನು ಬರೆದಿದ್ದಾರೆ.
ವಿಶ್ವಕಪ್ ಟೂರ್ನಿಯ ಒಂದರಲ್ಲಿ ವಿಕೆಟ್ ಕೀಪರ್ ಆಗಿ ಅತಿ ಹೆಚ್ಚು ಕ್ಯಾಚ್ ಹಿಡಿದ ಭಾರತದ ಆಟಗಾರನಾಗಿ ಕೂಲ್ ಕ್ಯಾಪ್ಟನ್ ಎಂ.ಎಸ್.ಧೋನಿ (M.S.Dhoni) ಅವರ ದಾಖಲೆಯನ್ನು ಕನ್ನಡಿಗ ಮುರಿದಿದ್ದಾರೆ. ಇದನ್ನೂ ಓದಿ: ಡಿಆರ್‌ಎಸ್ ತೆಗೆದುಕೊಳ್ಳದೇ ಪೆವಿಲಿಯನ್‌ಗೆ ಹೆಜ್ಜೆ ಹಾಕಿದ ಸ್ಮಿತ್
Advertisement
Advertisement
ಈ ಟೂರ್ನಿಯಲ್ಲಿ ಕೆ.ಎಲ್.ರಾಹುಲ್ ಈವರೆಗೆ 17 ಕ್ಯಾಚ್ ಹಿಡಿದು ವಿರೋಧಿ ತಂಡದ ಆಟಗಾರರನ್ನು ಔಟ್ ಮಾಡಿದ್ದಾರೆ. 2015 ರ ವಿಶ್ವಕಪ್ ಟೂರ್ನಿಯಲ್ಲಿ ಎಂ.ಎಸ್.ಧೋನಿ ಅವರು 15 ಕ್ಯಾಚ್ ಹಿಡಿದು ಎದುರಾಳಿ ತಂಡದವರನ್ನು ಔಟ್ ಮಾಡಿದ್ದರು. ಈಗ ಧೋನಿ ದಾಖಲೆಯನ್ನು ರಾಹುಲ್ ಮುರಿದಿದ್ದಾರೆ.
Advertisement
ಅಷ್ಟೇ ಅಲ್ಲದೇ ರಾಹುಲ್, ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಅವರ ದಾಖಲೆಯನ್ನು ಸರಿಗಟ್ಟುವ ಸನಿಹದಲ್ಲಿದ್ದಾರೆ. ಡಿ ಕಾಕ್ ಒಂದೇ ಆವೃತ್ತಿಯಲ್ಲಿ 19 ಕ್ಯಾಚ್ ಹಿಡಿದು ಎರಡನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. 2003 ರ ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದು ಔಟ್ ಮಾಡಿ (21) ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಆ್ಯಡಮ್ ಗಿಲ್‌ಕ್ರಿಸ್ಟ್ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: World Cup Final: ಆಸೀಸ್‌ಗೆ 241 ರನ್‌ಗಳ ಗುರಿ – ವಿಶ್ವಕಪ್‌ಗಾಗಿ ಶತಕೋಟಿ ಭಾರತೀಯರ ಪ್ರಾರ್ಥನೆ
Advertisement
ಟೂರ್ನಿಯ ಒಂದರಲ್ಲಿ ಹೆಚ್ಚು ಕ್ಯಾಚ್ ಹಿಡಿದು ಔಟ್ ಮಾಡಿದ ಟಾಪ್ ವಿಕೆಟ್‌ಕೀಪರ್‌ಗಳು
* ಆ್ಯಡಮ್ ಗಿಲ್‌ಕ್ರಿಸ್ಟ್ (ಆಸ್ಟ್ರೇಲಿಯಾ): 2003 ರಲ್ಲಿ 21 ಕ್ಯಾಚ್
* ಕ್ವಿಂಟನ್ ಡಿ ಕಾಕ್ (ದಕ್ಷಿಣ ಆಫ್ರಿಕಾ): 2023 ರಲ್ಲಿ 19 ಕ್ಯಾಚ್
* ಕೆ.ಎಲ್.ರಾಹುಲ್ (ಭಾರತ): 2023 ರಲ್ಲಿ 17 ಕ್ಯಾಚ್
ಭಾರತದ ವಿಕೆಟ್‌ಕೀಪರ್‌ಗಳು
* ಕೆ.ಎಲ್.ರಾಹುಲ್: 2023 ರಲ್ಲಿ 17 ಕ್ಯಾಚ್
* ರಾಹುಲ್ ದ್ರಾವಿಡ್: 2003 ರಲ್ಲಿ 15 ಕ್ಯಾಚ್
* ಎಂ.ಎಸ್.ಧೋನಿ: 2015 ರಲ್ಲಿ 15 ಕ್ಯಾಚ್