ನವದೆಹಲಿ: ಮಿಚೆಲ್ ಸ್ಟಾರ್ಕ್ ಮ್ಯಾಜಿಕ್ ಬೌಲಿಂಗ್ ನೆರವಿನಿಂದ ಸೂಪರ್ ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ರಾಜಸ್ಥಾನ ರಾಯಲ್ಸ್ ವಿರುದ್ಧ ರೋಚಕ ಜಯ ಸಾಧಿಸಿದೆ. ಈ ಮೂಲಕ ತವರಿನಲ್ಲೂ ಗೆದ್ದು ಬೀಗಿದೆ.
ಸೂಪರ್ ಓವರ್ ಹೇಗಿತ್ತು?
ರಾಜಸ್ಥಾನ ಪರ ಹೆಟ್ಮೇಯರ್ ಮತ್ತು ಪರಾಗ್ ಕ್ರೀಸ್‌ಗೆ ಆಗಮಿಸಿದರು. ಸ್ಟಾರ್ಕ್ ಎಸೆದ ಮೊದಲ ಎಸೆತದಲ್ಲಿ ಯಾವುದೇ ರನ್ ಬಂದಿಲ್ಲ, ಎರಡನೇ ಎಸೆತದಲ್ಲಿ ಬೌಂಡರಿ ಹೊಡೆದ ಹೆಟ್ಮೇಯರ್ ಮೂರನೇ ಎಸೆತದಲ್ಲಿ ಒಂದು ರನ್ ತೆಗೆದರು. 4 ಎಸೆತವನ್ನು ಪರಾಗ್ ಬೌಂಡರಿಗೆ ಅಟ್ಟಿದ್ದರು. ಆದರೆ ಈ ಎಸೆತ ನೋಬಾಲ್ ಆಗಿತ್ತು. ಮರು ಎಸೆತದಲ್ಲಿ ಯಾವುದೇ ರನ್ ಬಂದಿಲ್ಲ. ಆದರೆ ಹೆಟ್ಮೇಯರ್ ಓಡಿದ್ದರಿಂದ ಪರಾಗ್ ರನೌಟ್ ಆದರು. 5ನೇ ಎಸತದಲ್ಲಿ ಹೆಟ್ಮೆಯರ್ 2 ರನ್ ಕದಿಯಲು ಮುಂದಾಗಿದ್ದರು. ಆದರೆ 2 ರನ್ ಓಡುವ ವೇಳೆ ಜೈಸ್ವಾಲ್ ರನೌಟ್ ಆದರು. ಎರಡು ವಿಕೆಟ್ ಪತನಗೊಂಡ ಪರಿಣಾಮ ರಾಜಸ್ಥಾನದ ಇನ್ನಿಂಗ್ಸ್ 11 ರನ್‌ಗಳಿಗೆ ಅಂತ್ಯವಾಯಿತು.
ಡೆಲ್ಲಿ ಪರ ಕ್ರೀಸ್‌ಗೆ ರಾಹುಲ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಬಂದಿದ್ದರು. ಸಂದೀಪ್ ಎಸೆದ ಮೊದಲ ಓವರ್‌ನ ಮೊದಲ ಎಸೆತದಲ್ಲಿ ರಾಹುಲ್ 2 ರನ್, ಎರಡನೇ ಎಸೆತದಲ್ಲಿ 4 ರನ್, ಮೂರನೇ ಎಸೆತದಲ್ಲಿ ಒಂದು ರನ್ ಓಡಿದರು. 4ನೇ ಎಸೆತವನ್ನು ಸ್ಟಬ್ಸ್ ಸಿಕ್ಸ್‌ಗೆ ಅಟ್ಟುವ ಮೂಲಕ ಡೆಲ್ಲಿ ತಂಡಕ್ಕೆ ರೋಚಕ ಜಯವನ್ನು ತಂದುಕೊಟ್ಟರು.
📁 TATA IPL
↳ 📂 Super Over
Another day, another #TATAIPL thriller! 🤩
Tristan Stubbs wins the Super Over for #DC in style! 🔥
Scorecard ▶ https://t.co/clW1BIPA0l#DCvRR pic.twitter.com/AXT61QLtyg
— IndianPremierLeague (@IPL) April 16, 2025
ಟೈ ಆಗಿದ್ದು ಹೇಗೆ?
ಕೊನೆಯ 6 ಎಸೆತಗಳಲ್ಲಿ ರಾಜಸ್ಥಾನ (Rajasthan Royals) ಗೆಲುವಿಗೆ 9 ರನ್ ಬೇಕಿತ್ತು. ಆದರೆ ಮಿಚೆಕ್ ಮಿಚೆಲ್ ಸ್ಟಾರ್ಕ್ ಕೇವಲ 8 ರನ್ ನೀಡಿದ್ದರಿಂದ ಪಂದ್ಯ ಟೈನಲ್ಲಿ ಅಂತ್ಯವಾಯಿತು.
ಬುಧವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) 20 ಓವರ್‌ಗೆ 5 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು. ನಂತರ ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ಓವರ್‌ನಲ್ಲಿ 4 ವಿಕೆಟ್ ಕಳೆದುಕೊಂಡು 188 ರನ್ ಗಳಿಸುವ ಮೂಲಕ ಮ್ಯಾಚ್ ಟೈ ಆಗುವ ಮೂಲಕ ಪಂದ್ಯ ರೋಚಕ ಘಟಕ್ಕೆ ತಿರುಗಿತು ಇದನ್ನೂ ಓದಿ: ಐಪಿಎಲ್‌ನಲ್ಲಿ ಫಿಕ್ಸಿಂಗ್ ಕರಿನೆರಳು | ಹೈದರಾಬಾದ್ ಉದ್ಯಮಿ ಸಂರ್ಪಕಿಸಿದ್ರೆ ಕೂಡ್ಲೇ ತಿಳಿಸಿ – ಆಟಗಾರರಿಗೆ ವಾರ್ನಿಂಗ್
ಡೆಲ್ಲಿ ಕ್ಯಾಪಿಟಲ್ಸ್ ಪರ ಇನಿಂಗ್ಸ್ ಆರಂಭಿಸಿದ ಜೇಕ್ ಫ್ರೇಸರ್-ಮೆಕ್‌ಗುರ್ಕ್ 5 ಬಾಲ್‌ಗೆ 9 ರನ್ ಹೊಡೆದು ಪೆವಿಲಿಯನ್ ಸೇರಿದರು. ಬಳಿಕ ಬಂದ ಕರುಣ್ ನಾಯರ್ ರನ್ ಔಟ್ ಆಗುವ ಮೂಲಕ ಫ್ಯಾನ್ಸ್‌ಗೆ ನಿರಾಸೆ ಮೂಡಿಸಿದರು. ನಂತರ ಕ್ರೀಸ್‌ಗಿಳಿದ ಕನ್ನಡಿಗ ಕೆ ಎಲ್ ರಾಹುಲ್ ಹಾಗೂ ಅಭಿಷೇಕ್ ಪೋರೆಲ್ 57 ಎಸೆತಗಳಲ್ಲಿ 63 ರನ್ ಜೊತೆಯಾಟವಾಡಿದರು. 38 ರನ್ ಕಲೆ ಹಾಕಿದ ಕೆ ಎಲ್ ರಾಹುಲ್, ಜೋಫ್ರಾ ಆರ್ಚರ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ಯುವ ಆಟಗಾರ ಅಭಿಷೇಕ್ ಪೊರೆಲ್ 49 ರನ್‌ಗೆ ಔಟ್ ಆಗುವ ಮೂಲಕ ಅರ್ಧಶತಕ ಬಾರಿಸುವಲ್ಲಿ ವಿಫಲರಾದರು.
105 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಟ್ರಿಸ್ಟಾನ್ ಸ್ಟಬ್ಸ್ ಹಾಗೂ ನಾಯಕ ಅಕ್ಸರ್ ಪಟೇಲ್ ಆಸರೆಯಾದರು. ಈ ಜೋಡಿ 19 ಎಸೆತಗಳಲ್ಲಿ 41 ರನ್ ಕಲೆ ಹಾಕುವ ಮೂಲಕ ತಂಡ ಮೊತ್ತವನ್ನು ಹೆಚ್ಚಿಸಿದರು ಅಕ್ಷರ್ ಪಟೇಲ್ 14 ಎಸೆತಗಳಲ್ಲಿ 34 ರನ್ ಬಾರಿಸಿ ಔಟಾದರು. ಟ್ರಿಸ್ಟಾನ್ ಸ್ಟಬ್ಸ್ ಅಜೇಯ 34 ರನ್ ಗಳಿಸಿದರು. ಬಳಿಕ ಬ್ಯಾಟಿಂಗ್ ಮಾಡಿದ ಅಶುತೋಷ್ ಶರ್ಮಾ ಅಜೇಯ 15 ರನ್ ಬಾರಿಸಿ ತಂಡಕ್ಕೆ ಕೊಡುಗೆ ನೀಡಿದರು.
ರಾಜಸ್ಥಾನ ಪರ ಜೋಫ್ರಾ ಆರ್ಚರ್ 2 ವಿಕೆಟ್ ಉರುಳಿಸಿದರು. ಉಳಿದಂತೆ ಮಹೇಶ್ ತೀಕ್ಷಣ್, ವನಿಂದು ಹಸರಂಗಾ ತಲಾ ಒಂದು ವಿಕೆಟ್‌ಗಳಿಸಿದರು.
ಡೆಲ್ಲಿ ನೀಡಿದ 189 ರನ್ ಗುರಿ ಬೆನ್ನಟ್ಟಿದ ರಾಜಸ್ಥಾನ್ ಆರಂಭಿಕ ಬ್ಯಾಟ್ಸ್‌ಮೆನ್ ಯಶಸ್ವಿ ಜೆಸ್ವಾಲ್ ಮತ್ತು ನಾಯಕ ಸಂಜು ಸ್ಯಾಮ್ಸನ್ 34 ಬಾಲ್‌ಗೆ 61 ರನ್ ಜೊತೆಯಾಟವಾಡುವ ಮೂಲಕ ಡೆಲ್ಲಿ ಬೌಲರ್ಸ್‌ಗಳ ಬೆವರಿಳಿಸಿದರು. ಸಂಜು 19 ಬಾಲ್‌ಗೆ 31 ರನ್ ಗಳಿಸಿ ಗಾಯಗೊಂಡ ಬಳಿಕ ನಿವೃತ್ತಿಗೊಂಡರು.
ರಿಯಾನ್ ಪರಾಗ್ 8 ರನ್ ಗಳಿಸಿ ಅಕ್ಷರ್ ಪಟೇಲ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ಜೆಸ್ವಾಲ್ ಹಾಗೂ ನಿತೀಶ್ ರಾಣಾ ತಲಾ ಅರ್ಧಶತಕ ಸಿಡಿಸುವ ಮೂಲಕ ತಂಡವನ್ನು ಗೆಲುವಿನ ಹಾದಿಯತ್ತ ಕೊಂಡೊಯ್ದು ಓಟಾದರು. 17 ರನ್ ಗೆ ಜುರೇಲ್ 26 ರನ್ ಗಳಿಸಿ ಕೊನೆಯ ಬಾಲ್‌ನಲ್ಲಿ ರನ್ ಔಟಾದರು. ಹೆಟ್ಮೇಯರ್ 15 ರನ್ ಗಳಿಸುವ ಅಜೇಯರಾಗಿ ಉಳಿದರು.