ಕೋಲ್ಕತ್ತಾ: ಆರ್‌ಸಿಬಿ ವಿರುದ್ಧದ ಎಲಿಮಿನೇಟರ್ ಪಂದ್ಯ ಸೋತ ಬಳಿಕ ಲಕ್ನೋ ತಂಡದ ನಾಯಕ ಕೆ.ಎಲ್ ರಾಹುಲ್ ಸೋಲಿಗೆ ತಂಡದ ಫೀಲ್ಡಿಂಗ್ ಮುಖ್ಯ ಕಾರಣವಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾವು ಪಂದ್ಯ ಕೈಚೆಲ್ಲಲು ಪ್ರಮುಖ ಕಾರಣ ಸುಲಭ ಕ್ಯಾಚ್‍ಗಳನ್ನು ಕೈಚೆಲ್ಲಿಕೊಂಡಿದ್ದು. ಹೌದು ತಂಡದ ಅಗ್ರಕ್ರಮಾಂಕದ ಬ್ಯಾಟ್ಸ್‌ಮ್ಯಾನ್ ಓರ್ವ ಶತಕ ಸಿಡಿಸಿ ಮಿಂಚಿದಾಗ ಎದುರಾಳಿ ತಂಡಕ್ಕೆ ಒತ್ತಡ ಹೆಚ್ಚಾಗುತ್ತದೆ. ರಜತ್ ಪಾಟಿದರ್ ಉತ್ತಮವಾಗಿ ಆಡಿದರು ಆದರೆ ಅವರ ಮೂರು ಕ್ಯಾಚ್‍ಗಳನ್ನು ಕೈಚೆಲ್ಲಿ ಕೈ ಸುಟ್ಟುಕೊಂಡಿದ್ದೇವೆ ಎಂದು ಪಂದ್ಯದ ಬಳಿಕ ರಾಹುಲ್ ತಿಳಿಸಿದ್ದಾರೆ. ಇದನ್ನೂ ಓದಿ: ಮಹಿಳಾ ಕ್ರಿಕೆಟ್ ಚಾಂಪಿಯನ್‍ಷಿಪ್‍ಗೆ ಮಾನ್ಯತೆ ಪಡೆದ ಐರ್ಲೆಂಡ್, ಬಾಂಗ್ಲಾದೇಶ
ನಮ್ಮ ತಂಡ ಹೊಸ ತಂಡ ಹಲವು ತಪ್ಪುಗಳ ಮಧ್ಯೆ ಪ್ಲೇ ಆಫ್‍ಗೆ ತಲುಪಿರುವುದು ಖುಷಿ ನೀಡಿದೆ. ಮುಂದಿನ ಆವೃತ್ತಿಗೆ ಮತ್ತಷ್ಟು ಬಲಿಷ್ಠ ತಂಡವಾಗಿ ವಾಪಾಸ್ ಆಗುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಪಾಟಿದರ್ ಸ್ಫೋಟಕ ಶತಕ, ಡಿ.ಕೆ ಅಬ್ಬರ – ಅಹಮದಾಬಾದ್‌ಗೆ ಹಾರಿದ ಬೆಂಗ್ಳೂರು
ಪಂದ್ಯದಲ್ಲಿ ಆರ್‌ಸಿಬಿ ಆಟಗಾರರು ನೀಡಿದ ಸಾಲು ಸಾಲು ಕ್ಯಾಚ್‍ಗಳನ್ನು ಕೈಚೆಲ್ಲಿದ್ದು ಲಕ್ನೋ ಸೋಲಿಗೆ ಪ್ರಮುಖ ಕಾರಣವಾಯಿತು. ಅದರಲ್ಲೂ ನಾಯಕ ರಾಹುಲ್ ಕೂಡ ಕ್ಯಾಚ್ ಒಂದನ್ನು ಬಿಟ್ಟಿದ್ದರು. ಇತ್ತ ಮೂರು ಬಾರಿ ಸಿಕ್ಕ ಜೀವದಾನದಿಂದಾಗಿ ಪಾಟಿದರ್ ಬೌಂಡರಿ, ಸಿಕ್ಸರ್‌ಗಳ ಮಳೆ ಸುರಿಸಿ ಅಜೇಯ 112 ರನ್ (54 ಎಸೆತ, 12 ಬೌಂಡರಿ, 7 ಸಿಕ್ಸ್) ಸಿಡಿಸಿ ದೊಡ್ಡ ಮೊತ್ತ ಪೇರಿಸಲು ನೆರವಾದರು. ಆ ಬಳಿಕ ರಾಹುಲ್ ತಂಡದ ಗೆಲುವಿಗೆ ಶ್ರಮಿಸದರೂ ಅವರ ಆಟ ಗೆಲುವಿನ ದಡ ಸೇರಿಸುವಲ್ಲಿ ಎಡವಿತು. ಆರ್‌ಸಿಬಿ ಬೌಲರ್‌ಗಳು ಡೆತ್ ಓವರ್‌ಗಳಲ್ಲಿ ಉತ್ತಮ ಬೌಲಿಂಗ್ ಮಾಡಿದ್ದು ಮತ್ತು ಫೀಲ್ಡರ್‌ಗಳು ರನ್‍ಗಳಿಗೆ ಕಡಿವಾಣ ಹಾಕಿದ್ದು ಆರ್‌ಸಿಬಿ ಗೆಲುವಿಗೆ ಪ್ಲಸ್ ಪಾಯಿಂಟ್ ಆಗಿತ್ತು. ಇದರಿಂದ ಬೆಂಗಳೂರು 14 ರನ್‍ಗಳ ಅಂತರದ ಜಯದೊಂದಿಗೆ ಎರಡನೇ ಕ್ವಾಲಿಫೈಯರ್‌ಗೆ ಲಗ್ಗೆ ಇಟ್ಟಿದೆ. ಇದನ್ನೂ ಓದಿ: ಪೆಟ್ರೋಲ್ ಸಿಗುತ್ತಿಲ್ಲ, ಎಟಿಎಮ್‍ನಲ್ಲಿ ಹಣವಿಲ್ಲ – ಪಾಕ್ ದುಸ್ಥಿತಿ ಬಿಚ್ಚಿಟ್ಟ ಹಫೀಜ್
ಎರಡನೇ ಕ್ವಾಲಿಫೈಯರ್ ಪಂದ್ಯ ಅಹಮದಾಬಾದ್‍ನಲ್ಲಿ ಮೇ 27 ಶುಕ್ರವಾರ ನಡೆಯಲಿದ್ದು, ರಾಜಸ್ಥಾನ ಮತ್ತು ಬೆಂಗಳೂರು ನಡುವಿನ ಪಂದ್ಯದಲ್ಲಿ ಗೆದ್ದ ತಂಡ ಗುಜರಾತ್ ತಂಡದೊಂದಿಗೆ ಫೈನಲ್ ಪಂದ್ಯವಾಡಲಿದೆ.