ಬೆಂಗಳೂರು: 2023 ಏಕದಿನ ವಿಶ್ವಕಪ್ (ODI World Cup) ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಕನ್ನಡಿಗ ಕೆ.ಎಲ್ ರಾಹುಲ್ (KL Rahul) ವಿಶ್ವಕಪ್‌ನಲ್ಲಿ ವೇಗದ ಶತಕ ಸಿಡಿಸಿ ಸಾಧನೆ ಮಾಡಿದ್ದಾರೆ.
HISTORY AT THE CHINNASWAMY STADIUM….!!!
KL Rahul has most runs for India in a World Cup edition as a wicketkeeper. pic.twitter.com/8uuRwe2pDs
— Mufaddal Vohra (@mufaddal_vohra) November 12, 2023
Advertisement
ನೆದರ್ಲೆಂಡ್ಸ್ (Netherlands) ವಿರುದ್ಧ ನಡೆದ ಪಂದ್ಯದಲ್ಲಿ 62 ಎಸೆತಗಳಲ್ಲೇ ಶತಕ ಸಿಡಿಸುವ ಮೂಲಕ 63 ಎಸೆತಗಳಲ್ಲಿ ಶತಕ ಸಿಡಿಸಿದ್ದ ರೋಹಿತ್ ಶರ್ಮಾ (Rohit Sharma) ಹಾಗೂ ಪಾಕಿಸ್ತಾನ ಕ್ರಿಕೆಟಿಗ ಫಖರ್ ಝಮಾನ್ (Fakhar Zaman) ಅವರ ದಾಖಲೆ ಮುರಿದಿದ್ದಾರೆ. ಅಲ್ಲದೇ ಏಕದಿನ ವಿಶ್ವಕಪ್ ಕ್ರಿಕಟ್‌ನಲ್ಲಿ ವೇಗದ ಶತಕ ಸಿಡಿಸಿದ ಟಾಪ್-10 ದಿಗ್ಗಜರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪಂದ್ಯದಲ್ಲಿ ರಾಹುಲ್ ಒಟ್ಟು 64 ಎಸೆತಗಳಲ್ಲಿ 102 ರನ್ (11 ಬೌಂಡರಿ, 4 ಸಿಕ್ಸರ್) ಬಾರಿಸಿದ್ದಾರೆ.
Advertisement
Advertisement
ಪ್ರಸಕ್ತ ವರ್ಷದ ಟೂರ್ನಿಯಲ್ಲೇ ರೋಹಿತ್ ಶರ್ಮಾ ಅಫ್ಘಾನಿಸ್ತಾನದ ವಿರುದ್ಧ, ಫಖರ್ ಝಮಾನ್ ನ್ಯೂಜಿಲೆಂಡ್ ವಿರುದ್ಧ 63 ಎಸೆತಗಳಲ್ಲಿ ಶತಕ ಸಿಡಿಸಿ ವೇಗದ ಶತಕ ದಾಖಲಿಸಿದ್ದರು. ಆದರೀಗ ಕೆ.ಎಲ್ ರಾಹುಲ್ 62 ಎಸೆತಗಳಲ್ಲೇ ಶತಕ ಸಿಡಿಸುವ ಮೂಲಕ ರೋಹಿತ್ ಶರ್ಮಾ ಅವರನ್ನು ಟಾಪ್-10 ಪಟ್ಟಿಯಿಂದ ಕೆಳಗಿಳಿಸಿದ್ದಾರೆ. ಇದನ್ನೂ ಓದಿ: World Cup 2023: ಹಿಟ್‌ಮ್ಯಾನ್ ಸಿಕ್ಸರ್ ಹೊಡೆತಕ್ಕೆ ಲೆಜೆಂಡ್ ABD ದಾಖಲೆ ಪುಡಿಪುಡಿ
Advertisement
ವಿಶ್ವಕಪ್‌ನಲ್ಲಿ ವೇಗದ ಶತಕ ಸಿಡಿಸಿದ ಟಾಪ್-10 ಪ್ಲೇಯರ್ಸ್: ಗ್ಲೇನ್ ಮ್ಯಾಕ್ಸ್‌ವೆಲ್ (40 ಎಸೆತ), ಏಡನ್ ಮಾರ್ಕ್ರಮ್ (49 ಎಸೆತ), ಕೆವಿನ್ ಓ ಬ್ರಿಯನ್ (50 ಎಸೆತ), ಮ್ಯಾಕ್ಸ್‌ವೆಲ್ (51 ಎಸೆತ), ಎಬಿಡಿ ವಿಲಿಯರ್ಸ್ (52 ಎಸೆತ), ಇಯಾನ್ ಮಾರ್ಗನ್ (57 ಎಸೆತ), ಟ್ರಾವಿಸ್ ಹೆಡ್ (59 ಎಸೆತ), ಹೆನ್ರಿಚ್ ಕ್ಲಾಸೆನ್ (61 ಎಸೆತ), ಕೆ.ಎಲ್ ರಾಹುಲ್ (62 ಎಸೆತ), ಫಖರ್ ಝಮಾನ್ (63 ಎಸೆತ). ಇದನ್ನೂ ಓದಿ: ಶ್ರೇಯಸ್, ರಾಹುಲ್ ಶತಕಗಳ ಬೊಂಬಾಟ್ ಬ್ಯಾಟಿಂಗ್ – ಡಚ್ಚರಿಗೆ 411 ರನ್‌ಗಳ ಕಠಿಣ ಗುರಿ
ನೆದರ್ಲೆಂಡ್ಸ್ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 410 ರನ್ ಬಾರಿಸಿತು. ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯಲ್ಲಿ ಗಳಿಸಿದ 2ನೇ ಗರಿಷ್ಠ ಸ್ಕೋರ್ ಸಹ ಆಗಿದೆ. ಇದನ್ನೂ ಓದಿ: ವಿಜಯದ ನಾಗಾಲೋಟದತ್ತ ಟೀಂ ಇಂಡಿಯಾ- ಕೊನೆಯ ಲೀಗ್ ಮ್ಯಾಚ್‍ಗೆ ಸಾಕ್ಷಿಯಾಗಲಿದೆ ಚಿನ್ನಸ್ವಾಮಿ ಸ್ಟೇಡಿಯಂ