ದುಬೈ: ಪಂಜಾಬ್ ತಂಡದ ನಾಯಕ ಕನ್ನಡಿಗ ಕೆ.ಎಲ್ ರಾಹುಲ್, ಹೈದರಾಬಾದ್ ತಂಡದ ಆಟಗಾರ ಡೇವಿಡ್ ವಾರ್ನರ್ ಅವರ ಹೆಸರಲ್ಲಿದ್ದ ವೇಗದ 3,000ರನ್‍ಗಳ ದಾಖಲೆಯನ್ನು ಮುರಿದಿದ್ದಾರೆ.
14ನೇ ಆವೃತ್ತಿಯ 32ನೇ ಪಂದ್ಯದಲ್ಲಿ ಪಂಜಾಬ್ ಹಾಗೂ ರಾಜಸ್ಥಾನ ತಂಡಗಳು ಕಾದಾಡಿದವು, ಈ ಪಂದ್ಯದಲ್ಲಿ ರಾಹುಲ್ ಐಪಿಎಲ್‍ನಲ್ಲಿ ವೇಗವಾಗಿ 3,000ರನ್ ಸಿಡಿಸಿದ ನೂತನ ಮೈಲಿಗಲ್ಲು ಸ್ಥಾಪಿಸಿದರು. ಇದನ್ನೂ ಓದಿ: ಕೊನೆಯ ಓವರಿನಲ್ಲಿ ತ್ಯಾಗಿ ಜಾದೂ – ರಾಜಸ್ಥಾನಕ್ಕೆ 2 ರನ್‍ಗಳ ರೋಚಕ ಜಯ
Milestone Unlocked ????
3⃣0⃣0⃣0⃣ IPL runs & going strong! ????????
Well done, @klrahul11 ???? ???? #VIVOIPL #PBKSvRR
Follow the match ???? https://t.co/odSnFtwBAF pic.twitter.com/7mCiJP2OLU
— IndianPremierLeague (@IPL) September 21, 2021
ಐಪಿಎಲ್‍ನಲ್ಲಿ ಈ ವರೆಗೆ ರಾಹುಲ್ 89 ಪಂದ್ಯವಾಡಿದ್ದು, ಅದರಲ್ಲಿ 80 ಇನ್ನಿಂಗ್ಸ್‌ನಲ್ಲಿ ಬ್ಯಾಟ್‍ಬೀಸಿ 3,000ಕ್ಕೂ ಅಧಿಕ ರನ್ ಹೊಡೆದು ಅತೀ ವೇಗವಾಗಿ 3000 ರನ್ ಬಾರಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಈ ಮೊದಲು ಎರಡನೇ ಸ್ಥಾನದಲ್ಲಿ ಡೇವಿಡ್ ವಾರ್ನರ್ ಇದ್ದರು. ಇದೀಗ ಅವರ ದಾಖಲೆ ಮುರಿದು ರಾಹುಲ್ ಆ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ರಾಹುಲ್ 1,000 ರನ್ ದಾಖಲಿಸಲು 38 ಇನ್ನಿಂಗ್ಸ್ ಆಡಿದರೆ 2,000 ರನ್ ದಾಖಲಿಸಲು 22 ಇನ್ನಿಂಗ್ಸ್ ಬಳಸಿಕೊಂಡಿದ್ದರು, ಇದೀಗ 3,000ರನ್‍ಗಾಗಿ ಕೇವಲ 20 ಇನ್ನಿಂಗ್ಸ್ ಬಳಸಿಕೊಂಡಿದ್ದಾರೆ. ಇದನ್ನೂ ಓದಿ: RCB ಹೀನಾಯ ಸೋಲಿಗೆ ಏನಂದ್ರು ಕ್ರಿಕೆಟ್ ಪ್ರೇಮಿಗಳು?
ಐಪಿಎಲ್‍ನಲ್ಲಿ ವೇಗವಾಗಿ 3,000ರನ್ ದಾಖಲಿಸಿರುವ ಪಟ್ಟಿಯಲ್ಲಿ ಕ್ರಿಸ್ ಗೇಲ್ ಮೊದಲ ಸ್ಥಾನದಲ್ಲಿದ್ದು, 75 ಇನ್ನಿಂಗ್ಸ್‌ನಲ್ಲಿ ಗೇಲ್ 3,000 ರನ್ ಸಿಡಿಸಿದ್ದಾರೆ, ಎರಡನೇ ಸ್ಥಾನದಲ್ಲಿ ರಾಹುಲ್ ಇದ್ದರೆ, 94 ಇನ್ನಿಂಗ್ಸ್‌ನಿಂದ 3,000 ರನ್ ಬಾರಿಸಿರುವ ವಾರ್ನರ್ ಮೂರನೇ ಸ್ಥಾನದಲ್ಲಿದ್ದಾರೆ. 103 ಇನ್ನಿಂಗ್ಸ್‌ನಿಂದ 3,000ರನ್ ಬಾರಿಸಿದ ಸುರೇಶ್ ರೈನಾ ನಾಲ್ಕನೇ ಸ್ಥಾನ ಮತ್ತು 104 ಇನ್ನಿಂಗ್ಸ್‌ನಿಂದ 3,000 ರನ್ ಚಚ್ಚಿದ ಎಬಿಡಿ ವಿಲಿಯರ್ಸ್ ಐದನೇ ಸ್ಥಾನದಲ್ಲಿದ್ದಾರೆ.