ದುಬೈ: ಟಿ20 ವಿಶ್ವಕಪ್‍ನಲ್ಲಿ ಮಂಕಾಗಿದ್ದ ಭಾರತ ತಂಡ ಅಘ್ಘಾನಿಸ್ತಾನ ವಿರುದ್ಧ ಭರ್ಜರಿ ಜಯದಾಖಲಿಸಿ ಪುಟಿದೆದ್ದಿದೆ. ಈ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ 14 ವರ್ಷಗಳ ಹಿಂದಿನ ಆರಂಭಿಕ ಜೋಡಿಯ ದಾಖಲೆಯೊಂದನ್ನು ಪುಡಿಗಟ್ಟಿದೆ.
Advertisement
ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧ ಸೋತಿದ್ದ ಭಾರತ ಅಘ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಬೃಹತ್ ಮೊತ್ತ ದಾಖಲಿಸಿ ನಂತರ ಅಘ್ಘಾನಿಸ್ತಾನವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿ ಗೆದ್ದು ಬೀಗಿದೆ. ಟಾಸ್ ಸೋತ ಭಾರತ ತಂಡ ನಿಗದಿತ ಓವರ್ ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 210ರನ್‍ಗಳ ಬೃಹತ್ ಮೊತ್ತ ಕಳೆಹಾಕಿತು. 111ರನ್‍ಗಳ ಟಾರ್ಗೆಟ್ ಬಿನ್ನುಹತ್ತಿದ ಅಘ್ಘಾನಿಸ್ತಾನ ನಿಗದಿತ ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 144ರನ್ ಪೇರಿಸಲಷ್ಟೆ ಶಕ್ತವಾಯಿತು. ಈ ಮೂಲಕ ಭಾರತ ತಂಡ 66 ರನ್‍ಗಳ ಭರ್ಜರಿ ಜಯ ದಾಖಲಿಸಿತು. ಇದನ್ನೂ ಓದಿ: ಟೀಮ್ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ
Advertisement
Advertisement
ಭಾರತ ಪರ ಉತ್ತಮವಾಗಿ ಬ್ಯಾಟ್‍ಬೀಸಿದ ಆರಂಭಿಕ ಆಟಗಾರರಾದ ಹಿಟ್‍ಮ್ಯಾನ್ ರೋಹಿತ್ ಮತ್ತು ರಾಹುಲ್ ಮೊದಲ ವಿಕೆಟ್‍ಗೆ 140ರನ್ (89 ಎಸೆತ) ಜೊತೆಯಾಟವಾಡಿ ತಂಡಕ್ಕೆ ಉತ್ತಮ ಆರಂಭ ಒದಗಿಸಿತು. ಜೊತೆಗೆ ಇಬ್ಬರೂ ಕೂಡ ಅರ್ಧಶತಕ ಸಿಡಿಸಿ ಮಿಂಚಿದರು. 2007ರ ಟಿ20 ವಿಶ್ವಕಪ್‍ನಲ್ಲಿ ಗೌತಮ್ ಗಂಭೀರ್ ಮತ್ತು ವೀರೇಂದ್ರ ಸೆಹ್ವಾಗ್ 136ರನ್‍ಗಳ ಜೊತೆಯಾಟವಾಡಿತ್ತು. ಈ ದಾಖಲೆಯ ಜೊತೆಯಾಟವನ್ನು ಶರ್ಮಾ ಮತ್ತು ರಾಹುಲ್ ಪುಡಿಗಟ್ಟಿದರು. ಇದನ್ನೂ ಓದಿ: ನೀರಜ್ ಚೋಪ್ರಾ ಸೇರಿದಂತೆ 12 ಕ್ರೀಡಾಪಟುಗಳಿಗೆ ಖೇಲ್ ರತ್ನ ಪ್ರಶಸ್ತಿ
Advertisement