ಬಾಲಿವುಡ್‌ನಲ್ಲಿ ಗಟ್ಟಿಮೇಳದ ಸೌಂಡ್ ಜೋರಾಗಿದೆ. ನಟಿ ಅಥಿಯಾ (Athiya Shetty) ಮತ್ತು ರಾಹುಲ್ (K.L Rahul) ಮದುವೆ (Wedding) ಬಗ್ಗೆ ಫ್ಯಾನ್ಸ್‌ಗೆ ಕುತೂಹಲ ಕೆರಳಿಸಿದೆ. ಮದುವೆ ಯಾವಾಗ? ಸಮಾರಂಭಕ್ಕೆ ಯಾರೆಲ್ಲಾ ಗೆಸ್ಟ್‌ಗಳು ಭಾಗಿಯಾಗುತ್ತಾರೆ ಎಂಬುದರ ಬಗ್ಗೆ ಫ್ಯಾನ್ಸ್ ಕ್ಯೂರಿಯಸ್ ಆಗಿದ್ದಾರೆ. ಈ ಬಗ್ಗೆ ಕಂಪ್ಲಿಟ್ ಡಿಟೈಲ್ಸ್ ಇಲ್ಲಿದೆ.
ಸಾಕಷ್ಟು ವರ್ಷಗಳ ಡೇಟಿಂಗ್ (Dating)ನಂತರ ಇದೀಗ ಮದುವೆಯೆಂಬ ಮುದ್ರೆ ಒತ್ತಲು ಅಥಿಯಾ ಶೆಟ್ಟಿ, ರಾಹುಲ್ ರೆಡಿಯಾಗಿದ್ದಾರೆ. ಜನವರಿ 23ಕ್ಕೆ ಸುನೀಲ್ ಶೆಟ್ಟಿ (Suniel Shetty) ಖಂಡಾಲಾ ಬಂಗಲೆಯಲ್ಲಿ ಅಥಿಯಾ(Athiya Shetty) ಮದುವೆ ನಡೆಯಲಿದ್ಬಾದು, ಬಾಲಿವುಡ್ ಮತ್ತು ಕ್ರಿಕೆಟ್ ಕ್ಷೇತ್ರದ ಆಪ್ತರ ದಂಡೇ ಇರಲಿದೆ.
ಜನವರಿ 21ರಿಂದ ಮದುವೆ ಸಮಾರಂಭ ಪ್ರಾರಂಭವಾಗುತ್ತಿದೆ. ಮೂರು ದಿನಗಳು ನಡೆಯುವ ಅದ್ದೂರಿ ಮದುವೆಯಲ್ಲಿ ಕುಟುಂಬದವರು, ಆಪ್ತರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಲಿದ್ದಾರೆ. ಇನ್ನೂ ಮದುವೆಗೆ ಕೆಲವೇ ದಿನಗಳು ಮಾತ್ರ ಬಾಕಿ ಇರುವ ಕಾರಣ ಈಗಾಗಲೇ ಸಿದ್ಧತೆ ಜೋರಾಗಿ ನಡೆಯುತ್ತಿದೆ.
ಅಥಿಯಾ ಜೋಡಿ ಮದುವೆಯಲ್ಲಿ ಹೈ-ಪ್ರೋಫೈಲ್ ಸಲ್ಮಾನ್ ಖಾನ್, ಶಾರುಖ್ ಖಾನ್, ದೀಪಿಕಾ ಪಡುಕೋಣೆ, ರಣ್‌ವೀರ್ ಕಪೂರ್ ಜಾಕಿ ಶ್ರಾಫ್, ಅಕ್ಷಯ್ ಕುಮಾರ್, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ದಂಪತಿ ಸೇರಿದಂತೆ ಹಲವರು ಮದುವೆ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: `ಬಘೀರ’ ಸಿನಿಮಾದ ಶೂಟಿಂಗ್ ವೇಳೆ ಅವಗಢ: ನಟ ಶ್ರೀಮುರಳಿಗೆ ಪೆಟ್ಟು
ಹೊಸ ವರ್ಷ ಜ.21ರಿಂದ ಮದುವೆ ಶಾಸ್ತ್ರಗಳು ಪ್ರಾರಂಭವಾಗಲಿದೆ, ಮೆಹಂದಿ, ಹಳದಿ, ಸಂಗೀತ ಸಮಾರಂಭ ಸೇರಿದ್ದಂತೆ ಎಲ್ಲಾ ಶಾಸ್ತçಗಳನ್ನು ಸಂಪ್ರದಾಯ ಬದ್ಧವಾಗಿ ಮದುವೆ ಕಾರ್ಯ ಮಾಡಲು ಎರಡು ಕುಟುಂಬಗಳು ನಿರ್ಧರಿಸಿದೆ. ರಾಹುಲ್ ಮತ್ತು ಅಥಿಯಾ ಶೆಟ್ಟಿ ಮದುವೆ ಪಕ್ಕ ದಕ್ಷಿಣ ಭಾರತದ ಶೈಲಿಯಲ್ಲಿ ನಡೆಸಲು ಎರಡು ಕುಟುಂಬ ನಿರ್ಧರಿಸಿದೆ ಎನ್ನಲಾಗಿದೆ. ಖಂಡಾಲ ಬಂಗಲೆ ಜಹಾನ್‌ನಲ್ಲೇ ಜ.23ಕ್ಕೆ ಮದುವೆ ಅದ್ದೂರಿಯಾಗಿ ನಡೆಯಲಿದೆ.
ಪ್ರಸ್ತುತ ಕೆ.ಎಲ್ ರಾಹುಲ್ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಆಡುತ್ತಿದ್ದಾರೆ. ಈ ಸರಣಿಯು ಜ.15ಕ್ಕೆ ಅಂತ್ಯವಾಗಲಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k