ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು (KKRTC) ತನ್ನ ನೌಕರರಿಗೆ ಪ್ರೀಮಿಯಮ್ ರಹಿತ 1 ಕೋಟಿ ರೂ. ಮೊತ್ತದ ಅಪಘಾತ ವಿಮೆ ಯೋಜನೆಗೆ ಕೆನರಾ ಬ್ಯಾಂಕ್‌ನೊಂದಿಗೆ (Canara Bank) ಒಪ್ಪಂದ ಮಾಡಿಕೊಂಡಿದೆ.
ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿಯವರ (Ramalinga Reddy) ಬೆಂಗಳೂರಿನ ಗೃಹ ಕಚೇರಿಯಲ್ಲಿ ಸಚಿವ ಸಮಕ್ಷಮ ಕೆನರಾ ಬ್ಯಾಂಕ್ ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪಾ ಮತ್ತು ಕೆನರಾ ಬ್ಯಾಂಕಿನ ಜನರಲ್ ಮ್ಯಾನೇಜರ್ ವಿಜಯಕುಮಾರ ಪರಸ್ಪರ ಒಡಂಬಡಿಕೆ ವಿನಿಮಯ ಮಾಡಿಕೊಂಡರು. ಇದನ್ನೂ ಓದಿ: ಬೆಳಗಾವಿ ಹಾಸ್ಟೆಲ್‌ನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ ಸಾವು
Advertisement
Advertisement
ಈ ಸಂದರ್ಭದಲ್ಲಿ ಸಚಿವ ರಮಾಲಿಂಗಾರೆಡ್ಡಿ ಮಾತನಾಡಿ, ಸಾರಿಗೆ ನಿಗಮದಲ್ಲಿ ಇತ್ತೀಚಿನ ದಿನಗಳಲ್ಲಿ ಅಪಘಾತದಿಂದಾಗುತ್ತಿರುವ ಸಾವು-ನೋವುಗಳ ಪ್ರಮಾಣವನ್ನು ಗಮನಿಸಿ ಕೆ.ಕೆ.ಆರ್.ಟಿ.ಸಿ. ನಿಗಮವು ವೈಯಕ್ತಿಕ ಮತ್ತು ಕರ್ತವ್ಯ ನಿರತ ಸಮಯದಲ್ಲಿ ಅಪಘಾತದಿಂದಾಗಿ ನೌಕರರು ನಿಧನರಾದಲ್ಲಿ 1 ಕೋಟಿ ರೂ. ಗಳ ಪ್ರೀಮಿಯಮ್ ರಹಿತ ಅಪಘಾತ ವಿಮೆ ಯೋಜನೆ ಜಾರಿಗೊಳಿಸಿದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಸ್ಸಾಂನಲ್ಲಿ ಹೋಟೆಲ್, ರೆಸ್ಟೋರೆಂಟ್, ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ಮಾರಾಟ, ಸೇವನೆ ನಿಷೇಧ!
Advertisement
Advertisement
ಯಾರಿಗೆ ಅನುಕೂಲ?
ಕೆ.ಕೆ.ಆರ್.ಟಿ.ಸಿ ಸಾರಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ನಿಗಮದ ನೌಕರರಿಗೆ ಈ ವಿಮಾ ಸೌಲಭ್ಯ ಸಿಗಲಿದೆ. ವೇತನ ಖಾತೆಗಳನ್ನು ಕೆನರಾ ಬ್ಯಾಂಕಿನ ʻಪೇ-ರೋಲ್ ಪ್ಯಾಕೇಜ್ ಸ್ಟೀಮ್ʼ ಅಡಿಯಲ್ಲಿ ತೆರೆದು ಈ ವಿಮಾ ಸೌಲಭ್ಯ ಶುಲ್ಕ ರಹಿತವಾಗಿ ಪಡೆಯಬಹುದಾಗಿದೆ. ಇದನ್ನೂ ಓದಿ: ಮುಡಾದಲ್ಲಿ ನಡೆದಿರೋದು 4-5 ಸಾವಿರ ಕೋಟಿ ಹಗರಣ: ಆರ್. ಅಶೋಕ್ ಬಾಂಬ್
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ, ಸುರಕ್ಷಿತ, ಮಿತವ್ಯಯ ಸಾರಿಗೆ ಸೌಲಭ್ಯ ಕಲ್ಪಿಸುವುದರ ಜೊತೆಗೆ ನೌಕರರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಈಗಾಗಲೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕಿನಲ್ಲಿ ವೇತನ ಪಡೆಯುತ್ತಿರುವ ನಿಗಮದ ನೌಕರರು ಅಪಘಾತ ವಿಮೆಗೆ ಒಳಪಟ್ಟಿರುತ್ತಾರೆ. ಇದೀಗ ಆ ಸಾಲಿಗೆ ಕೆನರಾ ಬ್ಯಾಂಕ್ ಸೇರ್ಪಡೆಯಾಗಿದೆ. ಅಪಘಾತ ಹೊರತುಪಡಿಸಿ ಇತರೇ ನೈರ್ಸಗಿಕ ಸಾವುಗಳಿಗೆ ಕೆನರಾ ಬ್ಯಾಂಕ್ ಪ್ರೀಮಿಯಂ ರಹಿತ 6 ಲಕ್ಷ ರೂ. ವರೆಗೆ ಉಚಿತ ʻಟರ್ಮ್ ಇನ್ಶುರೆನ್ಸ್ʼ ಪಾಲಿಸಿ ಸಹ ನಿಡುತ್ತಿದೆ. ಇದಲ್ಲದೇ ನೌಕರರ ಮಕ್ಕಳ ವಿಧ್ಯಾಭ್ಯಾಸ, ಗೃಹ ಸಾಲ ಹಾಗೂ ವೈಯಕ್ತಿಕ ಮತ್ತು ವಾಹನ ಸಾಲಗಳಿಗೆ ವಿಶೇಷ ಬಡ್ಡಿ ದರ ನಿಗದಿಪಡಿಸಿದ್ದು, ನೌಕರ ವರ್ಗಕ್ಕೆ ಅನುಕೂಲವಾಗಲಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪಾ ಅವರು ಸಚಿವರ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಕೆ.ಕೆ.ಆರ್.ಟಿ.ಸಿ. ನಿಗಮ ಮತ್ತು ಕೆನರಾ ಬ್ಯಾಂಕಿನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.