– ಶಕ್ತಿಯೋಜನೆ ಜಾರಿ ಬಳಿಕ 190 ಕೋಟಿ ರೂ. ಆದಾಯ
ರಾಯಚೂರು: ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಿಂದ (Shakti Scheme) ರಾಯಚೂರು (Raichur) ವಿಭಾಗ ಸೇರಿದಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಕಳೆದ ಮೂರು ತಿಂಗಳಿಂದ ಉತ್ತಮ ಆದಾಯ (Income) ಪಡೆಯುತ್ತಿದೆ.
Advertisement
ಶಕ್ತಿ ಯೋಜನೆ ಆರಂಭವಾದಾಗಿನಿಂದ ಅಂದರೆ ಜೂನ್ 11ರಿಂದ ಆಗಸ್ಟ್ 20ರವರೆಗೆ ಕೇವಲ ಮಹಿಳಾ ಪ್ರಯಾಣಿಕರ ಶಕ್ತಿ ಆದಾಯವೇ 190 ಕೋಟಿ ರೂ. ಆಗಿದೆ. ಈ ಮೊದಲು ಇಡೀ ಕೆಕೆಆರ್‌ಟಿಸಿಯ ತಿಂಗಳ ಆದಾಯ ಸರಾಸರಿ 150 ಕೋಟಿ ರೂ. ಇತ್ತು. ಈಗ ಸರಾಸರಿ ಆದಾಯ ಹೆಚ್ಚಾಗಿದೆ. ಯೋಜನೆ ಆರಂಭವಾದಾಗಿನಿಂದ ಒಟ್ಟು 11.48 ಕೋಟಿ ಜನ ಪ್ರಯಾಣಿಸಿದ್ದಾರೆ. ಇದರಲ್ಲಿ 5.78 ಮಹಿಳಾ ಪ್ರಯಾಣಿಕರು ಸಂಚರಿಸಿದ್ದಾರೆ. ಇದನ್ನೂ ಓದಿ: ಅಪರೇಷನ್ ಹಸ್ತ ಬೆನ್ನಲ್ಲೇ ಯಶವಂತಪುರ ಕ್ಷೇತ್ರಕ್ಕೆ ಬಂಪರ್
Advertisement
Advertisement
ರಾಯಚೂರು ವಿಭಾಗದ ಆದಾಯ ನೋಡುವುದಾದರೆ ಮಹಿಳಾ ಪ್ರಯಾಣಿಕರಿಂದಲೇ 26.85 ಕೋಟಿ ರೂ. ಬಂದಿದೆ. ಬಸ್‌ಗಳ ಸರಾಸರಿ ಲೋಡ್ ಫ್ಯಾಕ್ಟರ್ 68%ನಿಂದ 86%ಗೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಯೋಜನೆ ಜಾರಿಗಿಂತ ಮೊದಲು ಪ್ರತಿನಿತ್ಯ 61 ಲಕ್ಷ ರೂ. ಇದ್ದು, ಸರಾಸರಿ ಆದಾಯ ಈಗ 79 ಲಕ್ಷ ರೂ. ಆಗಿದೆ. ಪ್ರತಿನಿತ್ಯ ಮಹಿಳಾ ಪ್ರಯಾಣಿಕರಿಂದಲೇ ಸರಾಸರಿ 37 ಲಕ್ಷ ರೂ. ಆದಾಯ ಬರುತ್ತಿದೆ. ಇದನ್ನೂ ಓದಿ: ಬೆಂಗಳೂರಿನ ಪೋಸ್ಟ್ ಮಾಸ್ಟರ್ ಕೆಲಸಕ್ಕೆ ಬಿಲ್ ಗೇಟ್ಸ್ ಫಿದಾ – ಡಿಜಿಟಲೀಕರಣಕ್ಕೆ ಮನಸೋತ ಪೋಸ್ಟ್ ವೈರಲ್
Advertisement
ಈಗಾಗಲೇ ಸರ್ಕಾರ ರಾಯಚೂರು ವಿಭಾಗದ ಜೂನ್ ತಿಂಗಳಿನ ಆದಾಯ 6.78 ಕೋಟಿ ರೂ. ಬಿಡುಗಡೆ ಮಾಡಿದ್ದು, ಜುಲೈ ತಿಂಗಳಿನ 12.33 ಕೋಟಿ ರೂ. ಹಾಗೂ ಆಗಸ್ಟ್ 20ರ ವರೆಗಿನ 7.73 ಕೋಟಿ ಬಿಡುಗಡೆ ಮಾಡಬೇಕಿದೆ. ಜಿಲ್ಲೆಗೆ 69 ಹೊಸ ಬಸ್‌ಗಳನ್ನು ಬಿಡಲಾಗಿದ್ದು, 27 ಹೊಸ ಮಾರ್ಗಗಳನ್ನು ಆರಂಭಿಸಲಾಗಿದೆ. ಶ್ರಾವಣ ಮಾಸ ಇರುವುದರಿಂದ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಮತ್ತೆ ಏರಿಕೆ ಕಾಣುತ್ತಿದೆ. ಈ ಮೊದಲು ಕಿರಿಕಿರಿ ಅನುಭವಿಸುತ್ತಿದ್ದ ಚಾಲಕ ಹಾಗೂ ನಿರ್ವಾಹಕರು ಸಹ ಈಗ ನಿರಾಳತೆಯಿಂದ ಬಸ್ ಓಡಿಸುತ್ತಿದ್ದಾರೆ. ಇದನ್ನೂ ಓದಿ: ‘ಶಕ್ತಿ’ ವಿರೋಧಿಸಿ ಕರ್ನಾಟಕ ಬಂದ್ – ಖಾಸಗಿ ಸಾರಿಗೆ ಒಕ್ಕೂಟದ ಜೊತೆಗಿನ ಸಭೆ ವಿಫಲ
Web Stories