ರಾಯಚೂರು: ಮಕ್ಕಳ ಮೇಲೆ ಕೆಕೆಆರ್‌ಟಿಸಿ (KKRTC) ಬಸ್ ಹರಿದ ಪರಿಣಾಮ ಓರ್ವ ಬಾಲಕ ಸಾವನ್ನಪ್ಪಿದ್ದು, ಇನ್ನೋರ್ವ ಗಂಭೀರ ಗಾಯಗೊಂಡಿರುವ ಘಟನೆ ರಾಯಚೂರಿನ (Raichur) ಲಿಂಗಸುಗೂರು (Lingasugur) ಬಸ್ ನಿಲ್ದಾಣದಲ್ಲಿ ನಡೆದಿದೆ.
ಸಿದ್ದರಾಮ (12) ಮೃತ ಬಾಲಕ. ಘಟನೆಯಲ್ಲಿ ಧನಂಜಯ (8) ಗಂಭೀರ ಗಾಯಗೊಂಡಿದ್ದಾನೆ. ಸಿದ್ದರಾಮ ಹಾಗೂ ಧನಂಜಯ ಇಬ್ಬರೂ ಅಣ್ಣತಮ್ಮಂದಿರು. ಘಟನೆ ನಡೆದ ಕೂಡಲೇ ಸ್ಥಳೀಯರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಸಿದ್ದರಾಮ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಕೇರಳ | ದೆವ್ವ ಬಿಡಿಸೋಕೆ ಮಹಿಳೆಗೆ ಬೀಡಿ ಸೇದಿ, ಮದ್ಯ ಸೇವಿಸುವಂತೆ ಕಿರುಕುಳ – ಪತಿ ಸೇರಿ ಮೂವರು ಅರೆಸ್ಟ್
ಇನ್ನು ಘಟನೆಯಲ್ಲಿ ಧನಂಜಯನ ಎರಡೂ ಕೈಗಳು ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ದಾವಣಗೆರೆ | ಅಕ್ರಮ ಪಡಿತರ ಸಾಗಾಟ – ಆರೋಪಿ ಅರೆಸ್ಟ್, 76 ಮೂಟೆ ರಾಗಿ ವಶ

