ದುಬೈ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆರಂಭಿಕ ಆಟಗಾರ ಶುಭಮನ್ ಗಿಲ್ ಅವರ ಸಮಯೋಚಿತ ಆಟದ ನೆರವಿನಿಂದಾಗಿ ಹೈದರಾಬಾದ್ ವಿರುದ್ಧ 6ವಿಕೆಟ್ ಜಯ ದಾಖಲಿಸಿದೆ.
Advertisement
ಹೈದರಾಬಾದ್ ತಂಡ ನೀಡಿದ್ದ 116 ರನ್‍ಗಳ ಟಾರ್ಗೆಟ್‍ನ್ನು ಬೆನ್ನುಹತ್ತಿದ ಕೋಲ್ಕತ್ತಾ 19.4 ಓವರ್ ಗಳಲ್ಲಿ ಗುರಿ ಮುಟ್ಟಿ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಇದನ್ನೂ ಓದಿ: ಹೈದಾರಾಬಾದ್‍ಗೆ ಬೇಡವಾದ ಡೇವಿಡ್ ವಾರ್ನರ್
Advertisement
Advertisement
ಕೋಲ್ಕತ್ತಾ ಪರ ವೆಂಕಟೇಶ್ ಅಯ್ಯರ್ 8ರನ್(14 ಎಸೆತ) ಮತ್ತು ರಾಹುಲ್ ತ್ರಿಪಾಠಿ 7ರನ್(6 ಎಸೆತ, 1 ಬೌಂಡರಿ) ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ಬಳಿಕ ಒಂದಾದ ಶುಭಮನ್ ಗಿಲ್ ಮತ್ತು ನಿತೇಶ್ ರಾಣಾ 55ರನ್(59 ಎಸೆತ)ಗಳ ಜೊತೆಯಾಟವಾಡಿ ಗೆಲುವಿನಂಚಿಗೆ ತಂದು ನಿಲ್ಲಿಸಿದರು. ಇದನ್ನೂ ಓದಿ: ಪಂಜಾಬ್ ವಿರುದ್ಧ ಆರ್ಸಿಬಿಗೆ 6 ರನ್ ಜಯ – ಫ್ಲೇ ಆಫ್‍ಗೆ ಎಂಟ್ರಿ
Advertisement
ಈ ವೇಳೆ ದೊಡ್ಡ ಹೊಡೆತಕ್ಕೆ ಕೈ ಹಾಕಿ ಶುಭಮನ್ ಗಿಲ್ 57ರನ್(51 ಎಸೆತ, 10 ಬೌಂಡರಿ) ಸಿಡಿಸಿ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಇವರೊಂದಿಗೆ ರಾಣಾ ಕೂಡ 25ರನ್(33 ಎಸೆತ, 3 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿದರು. ನಂತರ ಒಂದಾದ ದಿನೇಶ್ ಕಾರ್ತಿಕ್ ಅಜೇಯ 18ರನ್(12 ಎಸೆತ 3 ಬೌಂಡರಿ) ಮತ್ತು ಇಯಾನ್ ಮಾರ್ಗನ್ 2ರನ್ ಸಿಡಿಸಿ ತಂಡವನ್ನು ಸುರಕ್ಷಿತವಾಗಿ ಗೆಲುವಿನ ದಡ ಸೇರಿಸಿದರು. ಇದನ್ನೂ ಓದಿ: ಧೋನಿಯ ಹಸ್ತಾಕ್ಷರದ ಬ್ಯಾಟ್, ಜೆರ್ಸಿ ಪಡೆದ ಯಶಸ್ವಿ ಜೈಸ್ವಾಲ್
ಟಾಸ್ ಗೆದ್ದ ಹೈದರಾಬಾದ್ ತಂಡ ಉತ್ತಮ ಮೊತ್ತ ಕಲೆ ಹಾಕುವ ಭರವಸೆಯಲ್ಲಿ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಕೋಲ್ಕತ್ತಾ ನೈಟ್ ರೈಡರ್ಸ್ ಬೌಲರ್ ಗಳ ಶಿಸ್ತಿನ ದಾಳಿ ಎದುರು ಹೈದರಾಬಾದ್ ಬ್ಯಾಟ್ಸ್‌ಮ್ಯಾನ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು.
ಆರಂಭಿಕ ಆಟಗಾರ ಜೇಸನ್ ರಾಯ್ 10ರನ್(13 ಎಸೆತ, 2 ಬೌಂಡರಿ), ಕೇನ್ ವಿಲಿಯಮ್ಸನ್ 26ರನ್(21 ಎಸೆತ, 4 ಬೌಂಡರಿ), ಪ್ರಿಯಂ ಗರ್ಗ್ 21ರನ್(31 ಎಸೆತ, 1 ಸಿಕ್ಸ್) ಮತ್ತು ಅಬ್ದುಲ್ ಸಮದ್ 25ರನ್(18 ಎಸೆತ 3 ಸಿಕ್ಸ್) ಸಿಡಿಸಿದನ್ನು ಹೊರತು ಪಡಿಸಿ ಉಳಿದ 6 ಜನ ಬ್ಯಾಟ್ಸ್‌ಮ್ಯಾನ್‌ಗಳು ಒಂದಕ್ಕಿ ಮೊತ್ತ ದಾಟಲಿಲ್ಲ.
ಅಲ್ಪ ಮೊತ್ತಕ್ಕೆ ಕುಸಿದ ಹೈದರಾಬಾದ್:
ಕೆಕೆಆರ್ ನ ತ್ರಿವಳಿ ಬೌಲರ್ ಗಳ ದಾಳಿಗೆ ನಲುಗಿದ ಹೈದರಾಬಾದ್ 20 ಓವರ್ ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 115ರನ್ ಗಳಿಸಿತು. ಕೆಕೆಆರ್ ಪರ ಟಿಮ್ ಸೌಥಿ, ಶಿವಂ ಮಾವಿ ಮತ್ತು ವರುಣ್ ಚಕ್ರವರ್ತಿ ತಲಾ 7 ವಿಕೆಟ್ ಪಡೆದರೆ 1 ವಿಕೆಟ್ ಶಕೀಬ್ ಅಲ್ ಹಸನ್ ಪಾಲಾಯಿತು.