Cricket

ಐಪಿಎಲ್‍ನಿಂದ RCB ಔಟ್ – ಮುಂದಿನ ವರ್ಷ #ESCN ಟ್ರೈ ಮಾಡೋಣ

Published

on

Share this

ಶಾರ್ಜಾ: ಬ್ಯಾಟಿಂಗ್ ನಲ್ಲಿ ಹೀನಾಯ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಎಲಿಮಿನೇಟರ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋತು ಐಪಿಎಲ್‍ನಿಂದ ನಿರ್ಗಮಿಸಿದೆ.

ಗೆಲ್ಲಲು 139 ರನ್‍ಗಳ ಸುಲಭದ ಗುರಿಯನ್ನು ಪಡೆದ ಕೋಲ್ಕತ್ತಾ 19.4 ಓವರ್‍ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 139 ರನ್ ಹೊಡೆದು 4 ವಿಕೆಟ್‍ಗಳ ಜಯ ಸಾಧಿಸಿತು. ಬುಧವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 2ನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದ್ದು ವಿಜೇತರಾದವರು ಶುಕ್ರವಾರ ಚೆನ್ನೈ ವಿರುದ್ಧ ಫೈನಲ್ ಪಂದ್ಯವನ್ನು ಆಡಳಿದ್ದಾರೆ.

ಆರ್​ಸಿಬಿ  ಆರಂಭ ಉತ್ತಮವಾಗಿದ್ದರೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ವೈಫಲ್ಯದಿಂದ ಹೀನಾಯವಾಗಿ ಸೋತಿದೆ. ಟಿ20 ಹೊಡಿ ಬಡಿ ಆಟವಾಗಿದ್ದರೂ ಆರ್​ಸಿಬಿ ಪರ ಇಂದಿನ ಪಂದ್ಯದಲ್ಲೇ ಒಂದೇ ಒಂದು ಸಿಕ್ಸರ್ ದಾಖಲಾಗಿಲ್ಲ. ಈ ಕಾರಣಕ್ಕೆ ರನ್ ನಿಯಂತ್ರಣ ಮಾಡುವಲ್ಲಿ ಕೋಲ್ಕತ್ತಾ ಬೌಲರ್‍ ಗಳ ಯಶಸ್ವಿಯಾದರು.

ಪಂದ್ಯ ಸೋತ ಹಿನ್ನೆಲೆಯಲ್ಲಿ ಆರ್​ಸಿಬಿ ಅಭಿಮಾನಿಗಳು ಬೇಸರ ತೋಡಿಕೊಂಡರೂ ಮುಂದಿನ ವರ್ಷ ಹೊಸ ನಾಯಕತ್ವದಲ್ಲಿ ತಂಡ ಆಡಲಿದೆ. ಆಗ #ESCN ಟ್ರೆಂಡ್ ಮಾಡಿ ಸಂಭ್ರಮಿಸೋಣ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.


139 ರನ್‍ಗಳ ಗೆಲುವಿನ ಗುರಿಯನ್ನು ಬೆನ್ನಟ್ಟುವ ನಿರ್ಧಾರದೊಂದಿಗೆ ಕಣಕ್ಕಿಳಿದ ಕೋಲ್ಕತ್ತಾ ತಂಡದ ಆರಂಭಿಕರಾದ ಶುಭಮನ್ ಗಿಲ್ 29 (18 ಎಸೆತ, 4 ಬೌಂಡರಿ) ಮತ್ತು ವೆಂಕಟೇಶ್ ಅಯ್ಯರ್ 26 ರನ್ (30 ಎಸೆತ, 1 ಸಿಕ್ಸ್) ಬಿರುಸಿನ ಬ್ಯಾಟಿಂಗ್ ನಡೆಸಿ ಆರಂಭದಲ್ಲೇ ಆರ್​ಸಿಬಿಗೆ ಆಘಾತ ನೀಡಿದರು. ಇದನ್ನೂ ಓದಿ: ದಾಖಲೆಯೊಂದಿಗೆ ಐಪಿಎಲ್ ಫೈನಲ್ ಪ್ರವೇಶ – ಚೆನ್ನೈ ತಂಡದ ಹಿನ್ನೋಟ

ಈ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ರಾಯಲ್ ಚಾಲೆಂಜರ್ಸ್ ತಂಡ ಉತ್ತಮ ಆರಂಭವನ್ನು ಪಡಿಯಿತು. ಆರಂಭಿಕ ಜೋಡಿ ದೇವದತ್ ಪಡಿಕ್ಕಲ್ ಮತ್ತು ವಿರಾಟ್ ಕೊಹ್ಲಿ 49 ರನ್ (32 ಎಸೆತ) ಜೊತೆಯಾಟವಾಡಿದರು. ಮೊದಲು ಉತ್ತಮವಾಗಿ ಆಡುತ್ತಿದ್ದ ಪಡಿಕ್ಕಲ್ 21 ರನ್ (18 ಎಸೆತ, 2 ಬೌಂಡರಿ) ಸಿಡಿಸಿ ಔಟ್ ಆದರು. ನಂತರ ಬಂದ ಕಳೆದ ಪಂದ್ಯದ ಹೀರೋ ಶ್ರೀಕರ್ ಭರತ್ 9 ರನ್ (16 ಎಸೆತ) ಸುಸ್ತಾದರು. ಇವರ ಬೆನ್ನ ಹಿಂದೆ ಉತ್ತಮವಾಗಿ ಆಡುತ್ತಿದ್ದ ವಿರಾಟ್ ಕೊಹ್ಲಿ 39 ರನ್ (33 ಎಸೆತ, 5 ಬೌಂಡರಿ) ಬಾರಿಸಿ ಸುನೀಲ್ ನರೈನ್ ಗೆ ವಿಕೆಟ್ ಒಪ್ಪಿಸಿದರು.

ಆರ್​ಸಿಬಿಗೆ ನರೈನ್ ಕಂಟಕ:
ಮಧ್ಯಮಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಬಿಗ್ ಹಿಟ್ಟರ್‍ ಗಳಾದ ಗ್ಲೇನ್ ಮ್ಯಾಕ್ಸ್‌ವೆಲ್ 15 ರನ್ (18 ಎಸೆತ, 1 ಬೌಂಡರಿ) ಮತ್ತು ಎಬಿಡಿ ವಿಲಿಯರ್ಸ್ 11 ರನ್ (9 ಎಸೆತ, 1 ಬೌಂಡರಿ) ಬಾರಿಸಿ ನರೈನ್ ಸ್ಪೀನ್ ದಾಳಿಗೆ ವಿಕೆಟ್ ಒಪ್ಪಿಸಿದರು. ಆರ್​ಸಿಬಿ ಅಂತಿಮವಾಗಿ  20 ಓವರ್‍ ಗಳ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 138 ರನ್‍ಗಳ ಅಲ್ಪ ಮೊತ್ತ ಪೇರಿಸಿತು. ಇದನ್ನೂ ಓದಿ: ಟಿ20 ವಿಶ್ವಕಪ್ ಗೆದ್ದರೆ ಸಿಗುವ ನಗದು ಬಹುಮಾನವೆಷ್ಟು ಗೊತ್ತಾ?

ಕೋಲ್ಕತ್ತಾ ಪರ ಸುನೀಲ್ ನರೈನ್ 4 ವಿಕೆಟ್ ಮತ್ತು ಫರ್ಗುಸನ್ 2 ವಿಕೆಟ್ ಕಿತ್ತು ಮಿಂಚಿದರು.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications