ಬೆಂಗಳೂರು: ಗೃಹಲಕ್ಷ್ಮೀ ಆ್ಯಪ್ (Gruhalakshmi App) ಅನ್ನು ಕೇಂದ್ರ ಸರ್ಕಾರ ಹ್ಯಾಕ್ (Hack) ಮಾಡಿದೆ ಎಂಬ ಸತೀಶ್ ಜಾರಕಿಹೊಳಿ (Satish Jarkiholi) ಆರೋಪಕ್ಕೆ ಈ ಕುರಿತು ಅವರನ್ನೇ ಕೇಳಿ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ (K.J.George) ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮೀ ಆ್ಯಪ್ ವಿಚಾರವಾಗಿ ಸತೀಶ್ ಜಾರಕಿಹೊಳಿಯವರನ್ನು ಕೇಳಿದರೆ ಅದರ ವಿವರ ಕೊಡುತ್ತಾರೆ. ಈ ವಿಚಾರದ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ. ಯಾವುದೇ ಸಂದರ್ಭದಲ್ಲಿ ಸಮೇತ ಹೆಚ್ಚು ಬೇಡಿಕೆಗಳು ಬಂದಾಗ ಈ ರೀತಿಯಾದ ಸಮಸ್ಯೆಗಳು ಎದರಾಗುತ್ತವೆ. ತುಂಬಾ ಜನ ಒಂದೇ ಸಲ ಹೋಗಿ ಅರ್ಜಿ ಸಲ್ಲಿಕೆ ಮಾಡಿದಾಗ ಈ ರೀತಿಯಾಗುತ್ತದೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‍ನಿಂದಲೇ ಸರ್ವರ್ ಹ್ಯಾಕ್ – ಇವಿಎಂ ಹ್ಯಾಕ್ ಮಾಡಿ ಕಾಂಗ್ರೆಸ್ ಗೆದ್ದಿರಬಹುದು ಎಂದ ಮುನಿಸ್ವಾಮಿ
ನೋಂದಣಿ ಸಾಮರ್ಥ್ಯ 5 ಲಕ್ಷ ಇತ್ತು. ಅದು ಈಗ ಹೆಚ್ಚಾಗಿದ್ದರಿಂದ ಸಮಸ್ಯೆಗಳು ಎದುರಾಗಿದೆ. ಜನರು ಏಕಾಏಕಿ ನೋಂದಣಿ ಮಾಡಿಸುತ್ತಿರುವುದರಿಂದ ಸರ್ವರ್ (Server) ಸಮಸ್ಯೆ ಆಗುತ್ತಿದೆ. ಮುಂದಿನ ಮೂರು ನಾಲ್ಕು ದಿನಗಳಲ್ಲಿ ಸಮಸ್ಯೆ ಬಗೆಹರಿಯುತ್ತದೆ. ಸಮಸ್ಯೆ ಸರಿ ಆಗದಿದ್ದರೂ ಜನ ಯಾರೂ ಗಾಬರಿ ಪಡಬೇಕಾಗಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಶಾಲಾ ಮಕ್ಕಳ ಮೊಟ್ಟೆಗೆ ಕತ್ತರಿ ಹಾಕಿದ ಸರ್ಕಾರ
ಒಂದೇ ಸಲ ಹೆಚ್ಚು ಜನ ನೋಂದಣಿ ಮಾಡುತ್ತಿರುವುದರಿಂದ ಸರ್ವರ್ ಪ್ರಾಬ್ಲಮ್ ಆಗುವುದು ಸಹಜ. ಗೃಹಜ್ಯೋತಿ (Gruhajyothi) ನೋಂದಣಿಗೆ ನಾವು ಡೆಡ್‌ಲೈನ್ ಕೊಡಲಿಲ್ಲ. ಈ ಸಮಸ್ಯೆ ಆದಷ್ಟು ಬೇಗ ಬಗೆಹರಿಯುತ್ತದೆ. ಇದಕ್ಕೆ ಟೋಕನ್ ಸಿಸ್ಟಮ್ ಜಾರಿ ಮಾಡುವಂತೆ ಸೂಚನೆ ನೀಡಿದ್ದೇವೆ ಎಂದರು. ಇದನ್ನೂ ಓದಿ: ಆಧುನಿಕ ಆರೋಗ್ಯ ಸಮಸ್ಯೆಗಳಿಗೆ ಯೋಗ ಮದ್ದು: ದಿನೇಶ್ ಗುಂಡೂರಾವ್
ಗೃಹಜ್ಯೋತಿ ಯೋಜನೆಯಲ್ಲಿ ಜನರು 59 ಯೂನಿಟ್‌ನಿಂದ 200 ಯೂನಿಟ್ ಒಳಗಿನ ವ್ಯತ್ಯಾಸ ಎಷ್ಟು ಬರುತ್ತದೆ ಅಷ್ಟು ಕಟ್ಟಿದರೆ ಸಾಕು. ಉಳಿದಂತೆ 200 ಯೂನಿಟ್ ದಾಟಿದರೆ ಪೂರ್ತಿ ಕಟ್ಟಬೇಕಾಗುತ್ತದೆ. ವಿದ್ಯುತ್ ದರ ಮಾರ್ಚ್‌ನಲ್ಲಿ ಏರಿಕೆಯಾಗುತ್ತಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಅದನ್ನು ಮೇಯಲ್ಲಿ ಏರಿಕೆ ಮಾಡಿರುವುದರಿಂದ ಸಮಸ್ಯೆ ಆಗುತ್ತಿದೆ. ಈ ಕುರಿತು ನಾವು ಸಿಎಂ ಜೊತೆ ಚರ್ಚೆ ಮಾಡುತ್ತೇವೆ. ಟ್ಯಾಕ್ಸ್ ಇಳಿಕೆ ಕುರಿತು ಸಿಎಂ ಜೊತೆ ಚರ್ಚೆ ಮಾಡಿದ ಬಳಿಕ ನಿರ್ಧಾರ ಮಾಡುತ್ತೇವೆ. ಈ ಕುರಿತು ನಾನು ಯಾವುದೇ ಭರವಸೆ ನೀಡುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಅನ್ನ ಭಾಗ್ಯ ಫೈಟ್ ದೆಹಲಿಗೆ ಶಿಫ್ಟ್